Raghavendra Aradhana 2024: ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ; ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಹೀಗಿತ್ತು ವೈಭವ
- ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಆಗಸ್ಟ್ 18 ರಿಂದ ಆರಂಭವಾದ ಆರಾಧನಾ ಮಹೋತ್ಸವ ಆಗಸ್ಟ್ 24ರವರೆಗೆ ನಡೆಯಲಿದೆ. ಮಂತ್ರಾಲಯದ ಬೃಂದಾವನದಲ್ಲಿ ನಡೆದ ರಾಯರ ಆರಾಧನೆಯ ಫೋಟೊಗಳನ್ನು ಕಣ್ತುಂಬಿಕೊಳ್ಳಿ.
- ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಆಗಸ್ಟ್ 18 ರಿಂದ ಆರಂಭವಾದ ಆರಾಧನಾ ಮಹೋತ್ಸವ ಆಗಸ್ಟ್ 24ರವರೆಗೆ ನಡೆಯಲಿದೆ. ಮಂತ್ರಾಲಯದ ಬೃಂದಾವನದಲ್ಲಿ ನಡೆದ ರಾಯರ ಆರಾಧನೆಯ ಫೋಟೊಗಳನ್ನು ಕಣ್ತುಂಬಿಕೊಳ್ಳಿ.
(1 / 8)
ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಆರಾಧನಾ ಮಹೋತ್ಸವ ನಡೆಯುತ್ತಿದೆ. ತುಂಗಾನದಿಯ ತಟದಲ್ಲಿರುವ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಸಂಭ್ರಮ ಕಳೆಗಟ್ಟಿದೆ. ಆಗಸ್ಟ್ 18 ರಿಂದ ಆರಂಭವಾದ ರಾಯರ ಆರಾಧನಾ ಮಹೋತ್ಸವ ಆಗಸ್ಟ್ 24ರವರೆಗೆ ನಡೆಯಲಿದ್ದು, ರಾಯರ ಸನ್ನಿಧಾನ ಒಂದಿಷ್ಟು ಫೋಟೊಗಳು ಇಲ್ಲಿವೆ. (PC: Facebook/ Sri Raghavendra Swamy Mutt)
(2 / 8)
ಮಂತ್ರಾಲಯದಲ್ಲಿ ಸತತ 7 ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದ ಮೊದಲ ದಿನ ತಿರುಮಲ ತಿರುಪತಿ ದೇವಸ್ಥಾನ ಪ್ರಸಾದ ರೂಪದಲ್ಲಿ ಬಂದ ಶ್ರೀವಾರಿ ಶೇಷವಸ್ತ್ರವನ್ನು ರಾಘವೇಂದ್ರರಿಗೆ ಸಮರ್ಪಿಸಲಾಯಿತು. ವೆಂಕಟೇಶ್ವರನ ಶೇಷವಸ್ತ್ರವನ್ನು ಮೇಳ-ತಾಳಗಳೊಂದಿಗೆ ಮೆರವಣಿಗೆ ನಡೆಸಿ, ನಂತರ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಹಸ್ತಾಂತರಿಸಲಾಯಿತು.
(3 / 8)
ಒಂಟೆ, ಹಸು, ಆನೆಗಳಿಗೆ ಧಾನ್ಯ ಪೂಜೆ ಮಾಡುವ ಮೂಲಕ ವಿದ್ಯುಕ್ತವಾಗಿ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
(4 / 8)
ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಘವೇಂದ್ರ ಸನ್ನಿಧಿಯು ತಳಿರು ತೋರಣ ಹೂವಿನ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರದಲ್ಲಿ ಜಗಮಗಿಸುತ್ತಿದೆ.
(5 / 8)
ರಾಯರ ಬೃಂದಾವನದಲ್ಲಿ ನಡೆಯುವ ಈ ಸಪ್ತಾಹದಲ್ಲಿ ಆಗಸ್ಟ್ 20 ರಂದು ಪೂರ್ವಾರಾಧನೆ ನಡೆದಿದ್ದು, ಇಂದು (ಆಗಸ್ಟ್ 21) ಮಧ್ಯಾರಾಧನೆ ನಡೆಯಲಿದೆ. ಆಗಸ್ಟ್ 23 ರಂದು ಉತ್ತರಾಧನೆ ನಡೆಯಲಿದೆ.
(6 / 8)
ರಾಯರ ಆರಾಧನೆ ಆರಂಭವಾದ ದಿನದಿಂದ ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಉತ್ತರಾಧನೆಯ ದಿನ ಮಂತ್ರಾಲಯದ ರಥಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ.
(7 / 8)
ರಾಯರ ಆರಾಧನೆಯ ಸಂದರ್ಭ ಪ್ರಪಂಚದಾದ್ಯಂತ ಇರುವ ಬೃಂದಾವನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯತ್ತವೆ. ಆದರೆ ಮಂತ್ರಾಲಯವು ವಿಶೇಷವಾದ ಕಾರಣ ನಾಡಿನಾದ್ಯಂತ ಭಕ್ತರು ಇಲ್ಲಿಗೆ ಬಂದು ರಾಯರ ದರ್ಶನ ಪಡೆದು, ಆರಾಧನಾ ಮಹೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ.
ಇತರ ಗ್ಯಾಲರಿಗಳು