Danielle Wyatt: ಬಿಕಿನಿ ಧರಿಸಿ ಸಖತ್ 'ಬೋಲ್ಡ್' ಲುಕ್‌ನಲ್ಲಿ ಮಿಂಚಿದ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಆಟಗಾರ್ತಿ; ಫೋಟೋಸ್ ನೋಡಿ
- Danielle Wyatt: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಈಗ ಡೇನಿಯಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಿಕಿನಿ ಧರಿಸಿರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
- Danielle Wyatt: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅಲ್ಲದೇ ಈಗ ಡೇನಿಯಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಿಕಿನಿ ಧರಿಸಿರುವ ಬೋಲ್ಡ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
(1 / 13)
ಡೇನಿಯಲ್ ವ್ಯಾಟ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟಿಗರ ದೀರ್ಘ ಪಟ್ಟಿಯಲ್ಲಿ ಅತ್ಯಂತ ಪ್ರಸಿದ್ಧವಾದ ಹೆಸರುಗಳಲ್ಲಿ ಒಬ್ಬರು. ಆಕೆಯ ಸೌಂದರ್ಯದ ಕುರಿತ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಸದ್ಯ ಈಕೆ ಬಿಕಿನಿ ಧರಿಸಿರುವ ಪೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.(Danielle Wyatt Instagram)
(2 / 13)
ಸದ್ಯ ಡೇನಿಯಲ್ ವ್ಯಾಟ್ ಮಾರ್ಚ್ 2ರಂದು ಸಲಿಂಗಿ ಗೆಳತಿಯ ಜೊತೆ ಎಂಗೇಜ್ ಮಾಡಿಕೊಂಡಿದ್ದಾರೆ. ಗೆಳತಿ ಜಾರ್ಜಿ ಹಾಡ್ಜ್ ಜೊತೆಗೆ ಎಂಗೇಟ್‌ಮೆಂಟ್ ಮಾಡಿಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿದ್ದಾರೆ.(Danielle Wyatt Instagram)
(3 / 13)
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿ ಆಗಿರುವ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, 2014ರಲ್ಲಿ ಪ್ರೇಮ ನಿವೇದನೆ ಮಾಡಿದ್ದರು.(Danielle Wyatt Instagram)
(4 / 13)
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ 'ಕೊಹ್ಲಿ ನನ್ನನ್ನು ವಿವಾಹವಾಗಿ' ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು.(Danielle Wyatt Instagram)
(5 / 13)
ಏಕದಿನ ಕ್ರಿಕೆಟ್ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಅದು ಕೂಡ ಭಾರತ ಮಹಿಳಾ ತಂಡದ ವಿರುದ್ಧ. ಆ ಪಂದ್ಯದಲ್ಲಿ ಡೇನಿಯಲ್ ಅಜೇಯ 28 ರನ್ಗಳಿಸಿದ್ದರು. ಸದ್ಯ ಕೊನೆಯ ಏಕದಿನ ಪಂದ್ವವನ್ನು ಕಳೆದ ವರ್ಷ ಡಿಸೆಂಬರ್ 9ರಂದು ವಿಂಡೀಸ್ ವಿರುದ್ಧ ಆಡಿದ್ದರು.(Danielle Wyatt Instagram)
(6 / 13)
ಟಿ20 ಕ್ರಿಕೆಟ್ಗೂ 2010ರಲ್ಲೇ ಭಾರತದ ವಿರುದ್ಧವೇ ಡೆಬ್ಯೂ ಮಾಡಿದ್ದರು. ಈ ಪಂದ್ಯದಲ್ಲಿ ಡಕೌಟ್ ಆಗಿದ್ದರು. ಇನ್ನು ಕೊನೆಯ ಪಂದ್ಯವನ್ನು ಫೆಬ್ರವರಿ 24ರಂದು ಆಡಿದ್ದಾರೆ.(Danielle Wyatt Instagram)
(7 / 13)
ಡೇನಿಯಲ್ ವ್ಯಾಟ್, ಇಂಗ್ಲೆಂಡ್ ಪರ 102 ಏಕದಿನ ಪಂದ್ಯಗಳನ್ನಾಡಿ 1,776 ರನ್ ಹಾಗೂ 27 ವಿಕೆಟ್ ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 143 ಟಿ20 ಪಂದ್ಯಗಳನ್ನಾಡಿ 2,369 ರನ್ ಹಾಗೂ 46 ವಿಕೆಟ್ ಕಬಳಿಸಿದ್ದಾರೆ.(Danielle Wyatt Instagram)
(8 / 13)
ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ತಲಾ 2 ಶತಕಗಳನ್ನು ಸಿಡಿಸಿದ್ದಾರೆ. ಏಕದಿನದಲ್ಲಿ 5 ಅರ್ಧಶತಕ, ಟಿ20 ಕ್ರಿಕೆಟ್ನಲ್ಲಿ 11 ಅರ್ಧಶತಕ ಬಾರಿಸಿದ್ದಾರೆ.(Danielle Wyatt Instagram)
(9 / 13)
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜಿನಲ್ಲಿ ಡೇನಿಯಲ್ ವ್ಯಾಟ್ ಅನ್‌ಸೋಲ್ಡ್ ಆಗಿದ್ದರು. (Danielle Wyatt Instagram)
(10 / 13)
ಅನ್‌ಸೋಲ್ಡ್ ಆಗಿದ್ದಕ್ಕೆ ಬೇಸರ ಹೊರ ಹಾಕಿದ್ದರು. ವುಮೆನ್ಸ್ ಪ್ರೀಮಿಯರ್ ಲೀಗ್ ಆಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಹೃದಯ ಚೂರಾಗಿದೆ. ಖರೀದಿಯಾದವರಿಗೆ ಧನ್ಯವಾದ ಎಂದು ಟ್ವೀಟ್ ಮೂಲಕ ಹೇಳಿದ್ದರು.(Danielle Wyatt Instagram)
(11 / 13)
ಇನ್ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಈವರೆಗೂ 1279 ಪೋಸ್ಟ್ಗಳನ್ನು ಹಾಕಿದ್ದಾರೆ. (Danielle Wyatt Instagram)
(12 / 13)
ಡೇನಿಯಲ್ ವ್ಯಾಟ್ ಅವರು ಏಕದಿನ ಮತ್ತು ಟಿ20 ಕ್ರಿಕೆಟ್ಗೆ 2010ರಲ್ಲಿ ಪದಾರ್ಪಣೆ ಮಾಡಿದ್ದರು. ಎರಡು ಮಾದರಿಯ ಕ್ರಿಕೆಟ್ಗೂ ಭಾರತ ತಂಡದ ವಿರುದ್ಧವೇ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದರು.(Danielle Wyatt Instagram)
ಇತರ ಗ್ಯಾಲರಿಗಳು