Year End 2024: ಈ ವರ್ಷ ಬಿಡುಗಡೆ ಆಗಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಟಾಪ್ 9 ಕನ್ನಡ ಸಿನಿಮಾಗಳು ಹೀಗಿವೆ
- Year End 2024: ಸ್ಯಾಂಡಲ್‌ವುಡ್ ಪಾಲಿಗೆ 2024ನೇ ವರ್ಷ ಹೇಳಿಕೊಳ್ಳುವಂಥ ವರ್ಷವಾಗಿ ಉಳಿದಿಲ್ಲ. ಆದರೂ ಇಲ್ಲಿಯವರೆಗೂ (ಯುಐ, ಮ್ಯಾಕ್ಸ್ ಹೊರತುಪಡಿಸಿ) ಬಿಡುಗಡೆ ಆದ ಸಿನಿಮಾಗಳ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ, ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.
- Year End 2024: ಸ್ಯಾಂಡಲ್‌ವುಡ್ ಪಾಲಿಗೆ 2024ನೇ ವರ್ಷ ಹೇಳಿಕೊಳ್ಳುವಂಥ ವರ್ಷವಾಗಿ ಉಳಿದಿಲ್ಲ. ಆದರೂ ಇಲ್ಲಿಯವರೆಗೂ (ಯುಐ, ಮ್ಯಾಕ್ಸ್ ಹೊರತುಪಡಿಸಿ) ಬಿಡುಗಡೆ ಆದ ಸಿನಿಮಾಗಳ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ, ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ಆ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.
(1 / 10)
ಈ ವರ್ಷದಲ್ಲಿ ಕನ್ನಡ ಚಿತ್ರೋದ್ಯಮದ ಬೆರಳೆಣಿಕೆ ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲಿ ಕೋಟಿ ಗಡಿ ದಾಟಿವೆ. ಆ ಟಾಪ್ 9 ಸಿನಿಮಾಗಳು ಯಾವವು? ಇಲ್ಲಿದೆ ವಿವರ.
(2 / 10)
ಡಾ. ಸೂರಿ ನಿರ್ದೇಶನದ ಬಘೀರ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಈ ಸಿನಿಮಾ 29 ಕೋಟಿ ಗಳಿಕೆ ಕಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(3 / 10)
ವಾಸವಿ ಎಂಟರ್‌ಪ್ರೈಸಿಸ್ ಬ್ಯಾನರ್‌ನಲ್ಲಿ ಮೂಡಿಬಂದ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಪ್ಲಾಪ್ ಆದರೂ, ಗಳಿಕೆ ವಿಚಾರದಲ್ಲಿ 25.30 ಕೋಟಿ ಕಲೆಕ್ಷನ್ ಮಾಡಿದೆ.
(4 / 10)
ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ಸಿನಿಮಾ ಭರ್ತಿ ನೂರು ದಿನಗಳ ಓಟ ಕಂಡು, 25 ಕೋಟಿ ಕಲೆಕ್ಷನ್ ಮಾಡಿದೆ.
(5 / 10)
ಅದೇ ರೀತಿ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಬ್ಯಾನರ್ ನಿರ್ಮಾಣ ಮಾಡಿದೆ. ಈ ಸಿನಿಮಾ 23.5 ಕೋಟಿ ಬಾಚಿಕೊಂಡಿದೆ.
(6 / 10)
ದುನಿಯಾ ವಿಜಯ್ ನಾಯಕನಾಗಿ ನಟಿಸಿ, ನಿರ್ದೇಶಿಸಿದ ಭೀಮ ಸಿನಿಮಾ 23 ಕೋಟಿ ಗಳಿಕೆ ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಯಶಸ್ವಿಯಾಗಿದೆ.
(7 / 10)
ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಯುವ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಈ ಸಿನಿಮಾ 10.80 ಕೋಟಿ ಗಳಿಕೆ ಕಂಡಿದೆ.
(8 / 10)
ಚಿಕ್ಕಣ್ಣ ನಾಯಕನಾಗಿ ನಟಿಸಿದ ಉಪಾಧ್ಯಕ್ಷ ಚಿತ್ರ ಅನಿರೀಕ್ಷಿತವಾಗಿ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಈ ಸಿನಿಮಾ 8.05 ಕೋಟಿ ಕಲೆಕ್ಷನ್ ಮಾಡಿದೆ.
(9 / 10)
ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಕರಟಕ ದಮನಕ ಸಿನಿಮಾವನ್ನು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಾಣ ಮಾಡಿದ್ದು, 2.86 ಕೋಟಿ ಗಳಿಕೆ ಮಾಡಿದೆ.
ಇತರ ಗ್ಯಾಲರಿಗಳು