24 ಜನವರಿ 2025ಕ್ಕೆ ಸೂರ್ಯ ಬುಧ ಸಂಯೋಜನೆ; ಬುಧಾದಿತ್ಯ ರಾಜಯೋಗದಿಂದ 3 ರಾಶಿಯವರ ಜೀವನ, ಪಾವನ
ಹೊಸ ವರ್ಷ ಬರುತ್ತಿದೆ, 2025 ರಲ್ಲಿ ಗ್ರಹಗಳ ಸಂಕ್ರಮಣ, ಸಂಯೋಜನೆಯಿಂದ ವಿವಿಧ ಯೋಗಗಳು ಉಂಟಾಗಲಿವೆ. ಅದರಲ್ಲಿ ಬುಧಾದಿತ್ಯ ಯೋಗ ಕೂಡಾ ಒಂದು.
(1 / 6)
ಬುಧಾದಿತ್ಯ ರಾಜಯೋಗವು ಸೂರ್ಯ ಮತ್ತು ಬುಧರ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಈ ಯೋಗವು ಜನವರಿ 2025 ಮಕರ ರಾಶಿಯಲ್ಲಿ ಉಂಟಾಗುತ್ತದೆ.
(2 / 6)
14 ಜನವರಿ 2025 ರಂದು, ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಜನವರಿ 24 ರಂದು ಬುಧನು ಅದೇ ರಾಶಿಗೆ ಪ್ರವೇಶಿಸುತ್ತದೆ. ಇವೆರಡರ ಸಂಯೋಜನೆಯಿಂದ ಜನವರಿ 24ರಂದು ಬುಧಾದಿತ್ಯ ರಾಜಯೋಗ ರಚನೆಯಾಗಲಿದೆ. ಇದು ಫೆಬ್ರವರಿ 11ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಚೆನ್ನಾಗಿರುತ್ತದೆ.
(3 / 6)
ಧನು ರಾಶಿ: ಮಕರ ರಾಶಿಯಲ್ಲಿ ಬುಧಾದಿತ್ಯ ರಾಜಯೋಗದ ಅವಧಿಯು ಧನು ರಾಶಿಯ ಅದೃಷ್ಟ ಧನಾತ್ಮಕವಾಗಿ ಬದಲಾಯಿಸುತ್ತದೆ. ಅವರಿಗೆ ಎಲ್ಲಾ ರೀತಿಯಲ್ಲೂ ಲಾಭವಾಗಲಿದೆ. ಆರ್ಥಿಕ ಲಾಭ ಇರುತ್ತದೆ. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸಗಳಲ್ಲಿ ಹೆಚ್ಚಿನ ಯಶಸ್ಸು ಇದೆ. ವೈಯಕ್ತಿಕ ಜೀವನದಲ್ಲಿ ಸಂತೋಷವಿರುತ್ತದೆ.
(4 / 6)
ಮಕರ ರಾಶಿ: ಈ ರಾಶಿಯಲ್ಲಿ ಬುದಾಧಿತ್ಯ ರಾಜಯೋಗ ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಮಕರ ರಾಶಿಯವರಿಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಸಂಗಾತಿಯ ಬೆಂಬಲ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವ್ಯಾಪಾರಿಗಳಿಗೆ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
(5 / 6)
ತುಲಾ ರಾಶಿ: ಈ ರಾಶಿಯವರಿಗೆ ಬುಧಾದಿತ್ಯ ರಾಜಯೋಗದ ಅವಧಿ ಬಹಳ ಮಂಗಳಕರವಾಗಿದೆ. ವ್ಯವಹಾರದಲ್ಲಿ ಅನೇಕ ವಿಷಯಗಳು ನಿಮ್ಮ ಪರವಾಗಿ ಇರಲಿದೆ. ಹೊಸ ಆದಾಯದ ಮೂಲಗಳನ್ನು ಕಾಣಬಹುದು. ಹೂಡಿಕೆಯ ಮೇಲೆ ಉತ್ತಮ ಲಾಭ ಇರಲಿದೆ. ಉದ್ಯೋಗ ಹುಡುಕುವ ಪ್ರಯತ್ನ ಮಾಡುವವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ, ಸಂತೋಷ ಹೆಚ್ಚಾಗುತ್ತದೆ.
ಇತರ ಗ್ಯಾಲರಿಗಳು