Dasara dolls: ದಾವಣಗೆರೆಯಲ್ಲಿ ಮಹಾಭಾರತ, ರಾಮಾಯಣದ ಕಥೆ ಹೇಳುತ್ತವೆ ದಸರಾ ಗೊಂಬೆಗಳು
ಮೈಸೂರಲ್ಲಿ ದಸರಾ ಹಬ್ಬದ ರಂಗು ಮೇಳೈಸಿದ್ದರೆ, ಇತ್ತ ಮಧ್ಯ ಕರ್ನಾಟಕದ ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹಬ್ಬವನ್ನ ಸಂಭ್ರದಿಂದ ಆಚರಿಸಲಾಗುತ್ತಿದೆ. ದಸರಾ ಹಬ್ಬದ ವೇಳೆ ಗೊಂಬೆಗಳ ಪ್ರದರ್ಶನ ಮಾಡುವುದು ವಾಡಿಕೆ. ಮೈಸೂರು, ಚನ್ನಪಟ್ಟಣದಲ್ಲಿ ಗೊಂಬೆ ಪ್ರದರ್ಶನ ಸಾಕಷ್ಟು ಹೆಸರಾಗಿದೆ. ಅದೇ ರೀತಿ ದಾವಣಗೆರೆಯಲ್ಲೂ ಮನೆಮನೆಗಳಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಗಮನಸೆಳೆಯುತ್ತದೆ.
(1 / 6)
ದಾವಣಗೆರೆ ಗೊಂಬೆಗಳು ಮಹಾಭಾರತ, ರಾಮಾಯಣವನ್ನ ಸ್ಮರಿಸುತ್ತವೆ. ಅಷ್ಟೇ ಅಲ್ಲಾ, ನಾಗರಿಕತೆಯನ್ನ ಇಲ್ಲಿ ಗೊಂಬೆಗಳ ಮೂಲಕ ಬಿಂಬಿಸಲಾಗಿದೆ. ಇವುಗಳ ನಡುವೆ, ಮೈಸೂರು ದಸರಾ ಜಂಬೂ ಸವಾರಿ ಕೂಡ ಕಣ್ಮನ ಸೆಳೆಯುತ್ತದೆ. ಇಂಥ ಅಪರೂಪ ದೃಶ್ಯ ಕಂಡಿದ್ದು, ಗೃಹಿಣಿ ತನ್ನ ಮನೆಯಲ್ಲಿ ಮಾಡಿದ ದಸರಾ ಗೊಂಬೆ ಪ್ರದರ್ಶನದಲ್ಲಿ.
(2 / 6)
ದಾವಣಗೆರೆಯ ವಿನೋಭನಗರದ ಚಂದ್ರಕಲಾ ಮತ್ತು ನಾಗರಾಜ್ ಎಂಬ ದಂಪತಿ ತಮ್ಮ ಮನೆಯಲ್ಲೇ ಗೊಂಬೆಗಳ ಪ್ರದರ್ಶನ ಮಾಡಿದ್ದಾರೆ. ಒಟ್ಟು ಸುಮಾರು 3 ಸಾವಿರಕ್ಕೂ ಹೆಚ್ಚಿನ ಗೊಂಬೆಗಳನ್ನ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
(3 / 6)
ಮೈಸೂರು ದಸರಾ ಜಂಬೂ ಸವಾರಿ, ರಾಮಾಯಣ, ಮಹಾಭಾರತ ಬಿಂಬಿಸುವ ಗೊಂಬೆಗಳನ್ನ ಇಲ್ಲಿ ಕಾಣಬಹುದಾಗಿದೆ. ಅಲ್ಲದೇ, ಹಲವಾರು ದೇವ, ದೇವತೆಯರ ಗೊಂಬೆಗಳನ್ನು ಇಲ್ಲಿ ನಾವು ನೋಡಬಹುದು. ಕಳೆದ 25 ವರ್ಷಗಳಿಂದ ಈ ದಂಪತಿ ವಿಜಯ ದಶಮಿ ನವರಾತ್ತಿ ಹಬ್ಬದಲ್ಲಿ ಗೊಂಬೆಗಳ ಪ್ರದರ್ಶನ ಮಾಡುತ್ತಿದ್ದು, ಎಲ್ಲರ ಆಕರ್ಷಣೆಗೆ ಪಾತ್ರರಾಗಿದ್ದಾರೆ.
(4 / 6)
ದಸರಾ ಬಂದರೆ ಸಾಕು ಇಲ್ಲಿನ ಸ್ಥಳೀಯರಿಗೆ ಎಲ್ಲಿಲ್ಲದ ಖುಷಿ. ಏಕೆಂದರೆ ಚಂದ್ರಕಲಾ ಮತ್ತು ನಾಗರಾಜ್ ದಂಪತಿ ಮನೆಯಲ್ಲಿ ಆಕರ್ಷಕವಾಗಿ ಗೊಂಬೆಗಳ ಪ್ರದರ್ಶನ ಮಾಡುತ್ತಾರೆ. ಒಂದೊಂದು ಗೊಂಬೆಗಳು ಕಥೆಗಳನ್ನ ಹೇಳುತ್ತವೆ. ಹೀಗಾಗಿ, ದಾವಣಗೆರೆಯ ಜನರು ದಸರಾ ಹಬ್ಬದ ಸಂದರ್ಭದಲ್ಲಿ ಈ ಗೊಂಬೆಗಳ ಪ್ರದರ್ಶನ ನೋಡಿ ಸಂತಸ ವ್ಯಕ್ತಪಡಿಸುತ್ತಾರೆ.
(5 / 6)
ಒಟ್ಟು 9 ದಿನಗಳ ಕಾಲ ಇಲ್ಲಿ ಗೊಂಬೆಗಳನ್ನ ಪ್ರದರ್ಶನಕ್ಕಿಡಲಾಗುತ್ತದೆ. ನಂತರ ವಿಜಯ ದಶಮಿ ದಿನ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೊಂಬೆಗಳ ಪ್ರದರ್ಶನಕ್ಕೆ ತೆರೆ ಎಳೆಯಲಾಗುತ್ತದೆ.
ಇತರ ಗ್ಯಾಲರಿಗಳು