ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ಸುತ್ತಮುತ್ತ 3 ದಿನದಲ್ಲೇ 6 ಚಿರತೆ ಸೆರೆ: ಮರಿ ಹಾಕಲು ಹೊರ ಬಂದು ಸಿಕ್ಕಿ ಬೀಳುವ ಚಿರತೆಗಳು

ಮೈಸೂರು ಸುತ್ತಮುತ್ತ 3 ದಿನದಲ್ಲೇ 6 ಚಿರತೆ ಸೆರೆ: ಮರಿ ಹಾಕಲು ಹೊರ ಬಂದು ಸಿಕ್ಕಿ ಬೀಳುವ ಚಿರತೆಗಳು

  • Forest News ಮೈಸೂರು ಸುತ್ತಮುತ್ತ ಒಂದೆರಡು ವರ್ಷದಿಂದ ಚಿರತೆಯ ಉಪಟಳ ಜೋರಾಗಿದೆ. ಐದಾರು ಪ್ರಕರಣದಲ್ಲಿ ಜನರ ಮೇಲೂ ದಾಳಿ ಮಾಡಿದ ಪ್ರಕರಣಗಳು ಇರುವಾಗ ಚಿರತೆ ಸೆರೆ ಪ್ರಕರಣವೂ ಅಧಿಕವಾಗಿದೆ. ಮೂರೇ ದಿನದ ಅಂತರದಲ್ಲಿ ಆರು ಚಿರತೆಗಳನ್ನು ಕರ್ನಾಟಕ ಅರಣ್ಯ ಇಲಾಖೆ ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದೆ. ಅವುಗಳ ಚಿತ್ರ ನೋಟ ಇಲ್ಲಿದೆ.

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ಬದನಕುಪ್ಪೆ ಗ್ರಾಮದಲ್ಲಿ ಸಿಕ್ಕಿಬಿದ್ದಮೂರು ವರ್ಷದ ಹೆಣ್ಣು ಚಿರತೆ. ಇದನ್ನೂ ಕಾಡಿಗೆ ಮರಳಿ ಬಿಡಲಾಗಿದೆ.
icon

(1 / 6)

ಈಗಷ್ಟೆ ಕಣ್ಣು ಬಿಡುತ್ತಿರುವ ಚಿರತೆ ಮರಿಯೊಂದು ತಿ.ನರಸೀಪುರ ತಾಲ್ಲೂಕಿನ ತಲಕಾಡು ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು. ಜನ ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ತಾಯಿಯೊಂದಿಗೆ ಸೇರಿಸಿದ್ದಾರೆ.
icon

(2 / 6)

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ತಲಕಾಡು ಬಳಿ ಹೆಣ್ಣು ಚಿರತೆಯೊಂದು ಮರಿ ಹಾಕಲು ಬಂದಾಗ ಸಿಕ್ಕಿ ಬಿದ್ದಿದೆ. ಮರಿಯೊಂದಿಗೆ ಅದನ್ನು ಕಾಡಿಗೆ ಬಿಡಲಾಗಿದೆ.
icon

(3 / 6)

ಮೈಸೂರು ನಗರ ಹೊರವಲಯದ ಇಲವಾಲ ರಾಮನಹಳ್ಳಿ ಬಳಿ ಪೈಪ್‌ ಲೈನ್‌ ಒಳಗೆ ಸೇರಿಕೊಂಡಿದ್ದ ತಾಯಿ ಮರಿ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಮರಳಿಸಿದ್ದಾರೆ.
icon

(4 / 6)

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಚಾಮಪುರ ಗ್ರಾಮದಲ್ಲಿ ಆರು ವರ್ಷದ ಗಂಡು ಚಿರತೆ ಬುಧವಾರ ಮಧ್ಯಾಹ್ನ ಬೋನಿಗೆ ಬಿದ್ದಿದೆ. 
icon

(5 / 6)

ಇಡೀ ದೇಶದಲ್ಲಿಯೇ ಮಧ್ಯಪ್ರದೇಶ ಬಿಟ್ಟರೆ ಅತಿ ಹೆಚ್ಚು ಚಿರತೆಗಳು ಇರುವುದು ಕರ್ನಾಟಕದಲ್ಲಿಯೇ. ಅದರಲ್ಲೂ ಮೈಸೂರು ಭಾಗದಲ್ಲಿ ಚಿರತೆಗಳ ಸಂತತಿ ಹೆಚ್ಚಿದೆ. ಎರಡು ವರ್ಷದ ಅವಧಿಯಲ್ಲಿ ಮೈಸೂರು ಭಾಗದಲ್ಲಿಯೇ ನೂರಕ್ಕೂ ಹೆಚ್ಚು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು