ಐಪಿಎಲ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್ಗಳು ಇವರೇ ನೋಡಿ
- Jasprit Bumrah in IPL : ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಅತಿ ಹೆಚ್ಚು ವಿಕೆಟ್ ಪಡೆದ 10 ಬೌಲರ್ಗಳು ಇವರೇ ನೋಡಿ.
- Jasprit Bumrah in IPL : ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಅತಿ ಹೆಚ್ಚು ವಿಕೆಟ್ ಪಡೆದ 10 ಬೌಲರ್ಗಳು ಇವರೇ ನೋಡಿ.
(1 / 11)
2013ರ ಐಪಿಎಲ್ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.
(2 / 11)
ಯುಜ್ವೇಂದ್ರ ಚಹಲ್ (ಭಾರತ): ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಚಹಲ್, ಒಟ್ಟು 145 ಪಂದ್ಯಗಳಲ್ಲಿ 187 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಲಿ ಪಡೆದ ಮೊದಲ ಆಟಗಾರ ಎನಿಸಿದ್ದಾರೆ.
(3 / 11)
ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಬ್ರಾವೋ, ಸದ್ಯ ನಿವೃತ್ತಿಯಾಗಿದ್ದಾರೆ. ಒಟ್ಟು 161 ಐಪಿಎಲ್ ಪಂದ್ಯಗಳಲ್ಲಿ 183 ವಿಕೆಟ್ ಪಡೆದಿದ್ದಾರೆ.
(4 / 11)
ಪಿಯೂಷ್ ಚಾವ್ಲಾ (ಭಾರತ): ಮುಂಬೈ ಇಂಡಿಯನ್ಸ್ ತಂಡದ ಈ ಸ್ಪಿನ್ನರ್, 181 ಐಪಿಎಲ್ ಪಂದ್ಯಗಳಲ್ಲಿ 179 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
(5 / 11)
ಅಮಿತ್ ಮಿಶ್ರಾ (ಭಾರತ): ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ 161 ಐಪಿಎಲ್ ಪಂದ್ಯಗಳಲ್ಲಿ 173 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ.
(6 / 11)
ರವಿಚಂದ್ರನ್ ಅಶ್ವಿನ್ (ಭಾರತ): ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಆರ್ ಅಶ್ವಿನ್, 197 ಐಪಿಎಲ್ ಪಂದ್ಯಗಳಲ್ಲಿ 171 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಟಾಪ್-5ನಲ್ಲಿ ಕಾಣಿಸಿಕೊಂಡಿದ್ದಾರೆ.
(7 / 11)
ಲಸಿತ್ ಮಾಲಿಂಗ (ಶ್ರೀಲಂಕಾ): ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಯಾರ್ಕರ್ ಸ್ಪೆಷಲಿಸ್ಟ್ ಮಾಲಿಂಗ, 122 ಐಪಿಎಲ್ ಪಂದ್ಯಗಳಲ್ಲಿ 170 ವಿಕೆಟ್ ಉರುಳಿಸಿದ್ದಾರೆ. ಸದ್ಯ ಐಪಿಎಲ್ನಿಂದ ನಿವೃತ್ತಿ ಹೊಂದಿದ್ದಾರೆ.
(8 / 11)
ಭುವನೇಶ್ವರ್ ಕುಮಾರ್ (ಭಾರತ): ಸ್ವಿಂಗ್ ಕಿಂಗ್ ಎಂದೇ ಕರೆಸಿಕೊಳ್ಳುವ ಭುವಿ ಹೆಸರಲ್ಲಿ 170 ಐಪಿಎಲ್ ವಿಕೆಟ್‌ಗಳಿವೆ. ಸನ್ರೈಸರ್ಸ್ ತಂಡದ ವೇಗಿ 160 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ.
(9 / 11)
ಸುನಿಲ್ ನರೇನ್ (ವೆಸ್ಟ್ ಇಂಡೀಸ್): ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೇನ್, ಇದುವರೆಗೆ 162 ಐಪಿಎಲ್ ಪಂದ್ಯಗಳಲ್ಲಿ 163 ವಿಕೆಟ್ ಪಡೆದಿದ್ದಾರೆ.
(10 / 11)
ರವೀಂದ್ರ ಜಡೇಜಾ (ಭಾರತ): ಸಿಎಸ್‌ಕೆ, ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಲಯನ್ಸ್ ಪರ 226 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. 152 ವಿಕೆಟ್ ಉರುಳಿಸಿದ್ದಾರೆ. ಪ್ರಸ್ತುತ ಸಿಎಸ್‌ಕೆ ತಂಡದ ಪರ ಆಡುತ್ತಿದ್ದಾರೆ.
ಇತರ ಗ್ಯಾಲರಿಗಳು