ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fruits For Eye Health: ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯ; ಈ ಹಣ್ಣುಗಳ ನಿರಂತರ ಸೇವನೆಗೆ ಒತ್ತು ನೀಡಿ

Fruits for Eye Health: ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯ; ಈ ಹಣ್ಣುಗಳ ನಿರಂತರ ಸೇವನೆಗೆ ಒತ್ತು ನೀಡಿ

Fruits for Eye Health: ಅತಿಯಾದ ಸ್ಕ್ರೀನ್‌ ಟೈಮ್‌ ಹಲವು ರೀತಿಯ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಬೇಸಿಗೆಯಲ್ಲಿ ಸಿಗುವ ಈ ಹಣ್ಣುಗಳು ಕಣ್ಣಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಪ್ರತಿದಿನ ಈ ಹಣ್ಣುಗಳನ್ನು ತಿನ್ನುವುದು ಕಣ್ಣಿನ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ತಜ್ಞರು.

ಹೆಚ್ಚಿದ ಸ್ಕ್ರೀನ್‌ ಟೈಮ್‌ ನಮ್ಮ ಕಣ್ಣಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಆದರೆ ಇಂದಿನ ಯುಗದಲ್ಲಿ ಫೋನ್ ಮತ್ತು ಲ್ಯಾಪ್‌ಟಾಪ್ ಅನಿವಾರ್ಯ. ಆದರೆ ಸಮರ್ಪಕ ಆಹಾರ ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ತಡೆಯಬಹುದು. ಕಣ್ಣಿನ ಆರೋಗ್ಯಕ್ಕಾಗಿ ಪ್ರತಿದಿನ ಈ ಹಣ್ಣುಗಳನ್ನು ಸೇವಿಸಿ.
icon

(1 / 7)

ಹೆಚ್ಚಿದ ಸ್ಕ್ರೀನ್‌ ಟೈಮ್‌ ನಮ್ಮ ಕಣ್ಣಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಆದರೆ ಇಂದಿನ ಯುಗದಲ್ಲಿ ಫೋನ್ ಮತ್ತು ಲ್ಯಾಪ್‌ಟಾಪ್ ಅನಿವಾರ್ಯ. ಆದರೆ ಸಮರ್ಪಕ ಆಹಾರ ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ತಡೆಯಬಹುದು. ಕಣ್ಣಿನ ಆರೋಗ್ಯಕ್ಕಾಗಿ ಪ್ರತಿದಿನ ಈ ಹಣ್ಣುಗಳನ್ನು ಸೇವಿಸಿ.(Freepik)

ಮಾವು: ಬೇಸಿಗೆಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಮಾವಿನಹಣ್ಣಿನ ಘಮ ಹರಡುತ್ತದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಮಾವಿನಹಣ್ಣು ಉತ್ತಮ. ಪ್ರತಿದಿನ ಇದನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. 
icon

(2 / 7)

ಮಾವು: ಬೇಸಿಗೆಕಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಮಾವಿನಹಣ್ಣಿನ ಘಮ ಹರಡುತ್ತದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಮಾವಿನಹಣ್ಣು ಉತ್ತಮ. ಪ್ರತಿದಿನ ಇದನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. (Freepik)

ಪಪ್ಪಾಯ: ಪಪ್ಪಾಯದಲ್ಲಿ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳಿವೆ. ಆದ್ದರಿಂದ ಇದನ್ನು ನಿಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ಇರಿಸಿಕೊಳ್ಳಿ. ನಿತ್ಯವೂ ಪಪ್ಪಾಯವನ್ನು ತಿಂದರೆ ಕಣ್ಣಿನ ಆರೋಗ್ಯ ಸಮಸ್ಯೆಯ ಚಿಂತೆಯೇ ಇರುವುದಿಲ್ಲ.
icon

(3 / 7)

ಪಪ್ಪಾಯ: ಪಪ್ಪಾಯದಲ್ಲಿ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳಿವೆ. ಆದ್ದರಿಂದ ಇದನ್ನು ನಿಮ್ಮ ದೈನಂದಿನ ಆಹಾರ ಪಟ್ಟಿಯಲ್ಲಿ ಇರಿಸಿಕೊಳ್ಳಿ. ನಿತ್ಯವೂ ಪಪ್ಪಾಯವನ್ನು ತಿಂದರೆ ಕಣ್ಣಿನ ಆರೋಗ್ಯ ಸಮಸ್ಯೆಯ ಚಿಂತೆಯೇ ಇರುವುದಿಲ್ಲ.(Freepik)

ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕಣ್ಣಿನ ದೃಷ್ಟಿಯನ್ನೂ ಸುಧಾರಿಸುತ್ತದೆ.
icon

(4 / 7)

ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕಣ್ಣಿನ ದೃಷ್ಟಿಯನ್ನೂ ಸುಧಾರಿಸುತ್ತದೆ.(Freepik)

ಕಿತ್ತಳೆ: ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಮತ್ತು ದೃಷ್ಟಿಯನ್ನು ಚುರುಕಾಗಿಸುತ್ತದೆ. 
icon

(5 / 7)

ಕಿತ್ತಳೆ: ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಮತ್ತು ದೃಷ್ಟಿಯನ್ನು ಚುರುಕಾಗಿಸುತ್ತದೆ. (Freepik)

ದಾಳಿಂಬೆ: ಕಣ್ಣಿನ ಸಮಸ್ಯೆಗಳನ್ನು ಹೋಗಲಾಡಿಸಲು ದಾಳಿಂಬೆ ಪರಿಪೂರ್ಣ ಹಣ್ಣು. ಇದರಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ.
icon

(6 / 7)

ದಾಳಿಂಬೆ: ಕಣ್ಣಿನ ಸಮಸ್ಯೆಗಳನ್ನು ಹೋಗಲಾಡಿಸಲು ದಾಳಿಂಬೆ ಪರಿಪೂರ್ಣ ಹಣ್ಣು. ಇದರಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ.(Freepik)

ಪೇರಲ: ಈ ಹಣ್ಣು ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ. ವಿಟಮಿನ್ ಎ ಸಮೃದ್ಧವಾಗಿರುವ ಪೇರಲವನ್ನು ನಿಯಮಿತವಾಗಿ ಸೇವಿಸಿ. ಇದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. 
icon

(7 / 7)

ಪೇರಲ: ಈ ಹಣ್ಣು ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ತಿನ್ನಲು ಕೂಡ ರುಚಿಕರವಾಗಿರುತ್ತದೆ. ವಿಟಮಿನ್ ಎ ಸಮೃದ್ಧವಾಗಿರುವ ಪೇರಲವನ್ನು ನಿಯಮಿತವಾಗಿ ಸೇವಿಸಿ. ಇದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. (Freepik)


IPL_Entry_Point

ಇತರ ಗ್ಯಾಲರಿಗಳು