Gautam Gambhir: ಗೌತಮ್ ಗಂಭೀರ್ ಹೆಡ್ಕೋಚ್ ಆಗುವ ಕುರಿತು ಸಂಜಯ್ ಬಂಗಾರ್ ಪ್ರತಿಕ್ರಿಯೆ
- Gautam Gambhir: ಗೌತಮ್ ಗಂಭೀರ್ ಅವರನ್ನು ಮುಖ್ಯಕೋಚ್ ಆಗಿ ನೇಮಕ ಮಾಡಿದರೆ ಭಾರತ ತಂಡ ವಿಶ್ವಕಪ್ ಗೆಲ್ಲಬಹುದು ಎಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
- Gautam Gambhir: ಗೌತಮ್ ಗಂಭೀರ್ ಅವರನ್ನು ಮುಖ್ಯಕೋಚ್ ಆಗಿ ನೇಮಕ ಮಾಡಿದರೆ ಭಾರತ ತಂಡ ವಿಶ್ವಕಪ್ ಗೆಲ್ಲಬಹುದು ಎಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
(1 / 7)
2024ರ ಟಿ20 ವಿಶ್ವಕಪ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಗೌತಮ್ ಗಂಭೀರ್ ಅವರನ್ನು ಮುಂದಿನ ಕೋಚ್ ಆಗಿ ನೇಮಿಸಲು ಭಾರತೀಯ ಕ್ರಿಕೆಟ್ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತನೆ ನಡೆಸಿದೆ.(AFP)
(2 / 7)
ಕಳೆದ ಕೆಲವು ವಾರಗಳಿಂದ ಗಂಭೀರ್ ಹೆಸರು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಟಿ20 ವಿಶ್ವಕಪ್ ಬಳಿಕ ಗಂಭೀರ್ ಹೆಸರನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ. ಗೌತಿ ಅವರು ಹೆಡ್ಕೋಚ್ ಆಗುವ ಕುರಿತು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಪ್ರತಿಕ್ರಿಯಿಸಿದ್ದಾರೆ.(AFP)
(3 / 7)
ಗೌತಮ್ ಗಂಭೀರ್ 3-4 ವರ್ಷಗಳ ಕಾಲ ತಂಡದ ಕೋಚ್ ಆದರೆ ಭಾರತ ಖಂಡಿತವಾಗಿಯೂ ಟಿ20 ವಿಶ್ವಕಪ್ ಗೆಲ್ಲುತ್ತದೆ. ನನ್ನ ವಿದ್ಯಾರ್ಥಿ ಭಾರತೀಯ ತಂಡಕ್ಕೆ ತರಬೇತಿ ನೀಡಿದರೆ ಅದು ತುಂಬಾ ಒಳ್ಳೆಯ ವಿಷಯವಾಗಿದೆ ಎಂದು ಸಂಜಯ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.(AFP)
(4 / 7)
ಗಂಭೀರ್ ಮಾರ್ಗದರ್ಶನ ಅದ್ಭುತವಾಗಿರಲಿದೆ. ಆಟಗಾರರನ್ನು ಹಿಡಿತಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಬಂಗಾರ್ ಹೇಳಿದ್ದಾರೆ. ಇದೇ ವೇಳೆ ಹಾಲಿ ಚಾಂಪಿಯನ್ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡದ ಅದ್ಭುತ ಪ್ರದರ್ಶನ ನೀಡುತ್ತಿದೆ. 13 ವರ್ಷಗಳ ನಂತರ ಭಾರತ ವಿಶ್ವಕಪ್ ಗೆಲ್ಲುವ ಸಾಧ್ಯತೆ ಇದೆ ಎಂದು ನಂಬಿದ್ದಾರೆ.
(5 / 7)
ಭಾರತ ತಂಡ ಉತ್ತಮವಾಗಿ ಆಡುತ್ತಿದ್ದೇವೆ. ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಜಸ್ಪ್ರೀತ್ ಬುಮ್ರಾ-ಅರ್ಷದೀಪ್ ಸಿಂಗ್ ಬೌಲಿಂಗ್ ನಿರ್ವಹಣೆ ಅದ್ಭುತವಾಗಿದೆ. 13 ವರ್ಷಗಳ ನಂತರ ನಾವು ವಿಶ್ವಕಪ್ ಗೆಲ್ಲುವ ವಿಶ್ವಾಸ ಇದೆ ಎಂದು ಬಂಗಾರ್ ಹೇಳಿದ್ದಾರೆ.(PTI)
(6 / 7)
ಟಿ20 ವಿಶ್ವಕಪ್ 2024ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ಎ ಗುಂಪಿನಲ್ಲಿ ಸ್ಥಾನ ಪಡೆದ ಭಾರತ, ಯುಎಸ್ಎ, ಐರ್ಲೆಂಡ್, ಪಾಕಿಸ್ತಾನ ಸೋಲಿಸಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.(AFP)
ಇತರ ಗ್ಯಾಲರಿಗಳು