Handmade Ganpati Bappa : ಶಿಲ್ಪಿಯ ಕೈ ಚಳಕದಲ್ಲಿ ಮೂಡಿದ ಓಂಕಾರ ಪ್ರಧಾನ ಗಣಪನ ವಿವಿಧ ರೂಪ..
ಗಣೇಶೋತ್ಸವ ಸಮೀಪಿಸುತ್ತಿದೆ. ಮೂರ್ತಿ ತಯಾರಕರು ಗಣಪನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನ ವಿವಿಧ ರೂಪಗಳು ದರ್ಶನ ನೀಡತೊಡಗಿವೆ. ಪುಣೆಯ ಕಲಾವಿದ ಮಿಲಿಂದ್ ರಾಸ್ಕರ್ ಕೈಚಳಕದಲ್ಲಿ (Hand Made Ganesh Idols) ಮೂಡಿದ ಗಣಪನ ಆಕರ್ಷಕ ಮೂರ್ತಿಗಳು ಇಲ್ಲಿವೆ ನೋಡಿ…

(1 / 5)
ಕಲಾವಿದ ಮಿಲಿಂದ್ ರಾಸ್ಕರ್ ಅವರು ಗಣೇಶೋತ್ಸವಕ್ಕೂ ಮುನ್ನ ಪುಣೆಯ ಕೊತ್ರುಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ಟೆರಾಕೋಟಾದಿಂದ ತಯಾರಿಸಿದ ವಿಶಿಷ್ಟ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿದ್ದಾರೆ. ಗಣಪ ಬುದ್ಧಿವಂತಿಕೆಗೆ ದೇವರು. ಇನ್ನೇನು ಮನೆ ಮನೆಗಳಲ್ಲೂ ಗಣರಾಜನ ಪ್ರತಿಷ್ಠಾಪನೆ, ಪೂಜೆ ನಡೆಯಲಿದೆ. (ಪ್ರಥಮ ಗೋಖಲೆ)
(2 / 5)
ಕಳೆದ 10 ವರ್ಷಗಳಿಂದ ರಾಸ್ಕರ್ ಈ ಪರಿಸರ ಸ್ನೇಹಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಅವರು ಹವ್ಯಾಸಕ್ಕಾಗಿ ಆರಂಭಿಸಿದ್ದು ಇದು. ಈಗ ಅವರು ಕೈಯಿಂದ ಮಾಡಿದ ಪರಿಸರ ಸ್ನೇಹಿ ವಿಗ್ರಹಗಳನ್ನು ಹೇಗೆ ತಯಾರಿಸಬೇಕೆಂಬುದನ್ನು ಇತರರಿಗೂ ಹೇಳಿಕೊಡುತ್ತಿದ್ದಾರೆ. ಗಣೇಶನ ಬಗ್ಗೆ ರಾಸ್ಕರ್ ಅವರ ಪ್ರೀತಿಯನ್ನು ಇದು ಬಿಂಬಿಸುತ್ತದೆ. (ಪ್ರಥಮ ಗೋಖಲೆ)
(3 / 5)
ಈ ಚಿತ್ರದಲ್ಲಿ ಗಣೇಶನು ವಿವಿಧ ವಾದ್ಯಗಳನ್ನು ನುಡಿಸುವುದು, ಗಣೇಶನ ವಿಶ್ರಾಂತಿ ಭಂಗಿ, ಗಣೇಶನ ಪಠಣ ಶೈಲಿ ಇತ್ಯಾದಿಗಳಿವೆ. ವಿಗ್ರಹಗಳು ಸಂಪೂರ್ಣವಾಗಿ ಕೈಯಿಂದ ಮಾಡಲ್ಪಟ್ಟಿರುವುದರಿಂದ, ಪ್ರತಿ ಬಾರಿ ರಾಸ್ಕರ್ ಅವರು ಹಿಂದಿನದಕ್ಕಿಂತ ವಿಭಿನ್ನವಾದ ವಿಗ್ರಹವನ್ನು ರಚಿಸುತ್ತಾರೆ. ರಾಸ್ಕರ್ ಅವರು ಇಲ್ಲಿಯವರೆಗೆ 4000ಕ್ಕೂ ಹೆಚ್ಚು ಇಂತಹ ವಿಶಿಷ್ಟ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.(ಪ್ರಥಮ ಗೋಖಲೆ)
(4 / 5)
ರಾಸ್ಕರ್ ಪ್ರಕಾರ, ದೊಡ್ಡ ವಿಗ್ರಹಗಳಿಗಿಂತ ಚಿಕ್ಕ ಗಣೇಶನ ವಿಗ್ರಹಗಳು ಹೆಚ್ಚು ಸುಂದರವಾಗಿ ಕಾಣುತ್ತವೆ. ದೊಡ್ಡ ಗಣೇಶನ ವಿಗ್ರಹಗಳನ್ನು ನಿರ್ಮಜ್ಜನಗೊಳಿಸುವುದು ಕೂಡ ಕಷ್ಟ.(ಪ್ರಥಮ ಗೋಖಲೆ)
ಇತರ ಗ್ಯಾಲರಿಗಳು