ನಾಳಿನ ದಿನ ಭವಿಷ್ಯ: ವೃತ್ತಿಯಲ್ಲಿ ಬದಲಾವಣೆಯ ಪ್ರಯತ್ನ ಫಲ ನೀಡುತ್ತೆ, ಭವಿಷ್ಯಕ್ಕಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ
- ನಾಳಿನ ದಿನ ಭವಿಷ್ಯ: ನವೆಂಬರ್ 24ರ ಭಾನುವಾರ ಕೆಲವು ರಾಶಿಯವರಿಗೆ ಮಿಶ್ರಫಲಗಳಿವೆ. ವೃತ್ತಿಯಲ್ಲಿ ಬದಲಾವಣೆಯ ಪ್ರಯತ್ನ ಫಲ ನೀಡುತ್ತೆ, ಭವಿಷ್ಯಕ್ಕಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
- ನಾಳಿನ ದಿನ ಭವಿಷ್ಯ: ನವೆಂಬರ್ 24ರ ಭಾನುವಾರ ಕೆಲವು ರಾಶಿಯವರಿಗೆ ಮಿಶ್ರಫಲಗಳಿವೆ. ವೃತ್ತಿಯಲ್ಲಿ ಬದಲಾವಣೆಯ ಪ್ರಯತ್ನ ಫಲ ನೀಡುತ್ತೆ, ಭವಿಷ್ಯಕ್ಕಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ದ್ವಾದಶ ರಾಶಿಗಳ ನಾಳೆಯ ಭವಿಷ್ಯ ತಿಳಿಯಿರಿ.
(1 / 14)
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
(2 / 14)
ವೃಷಭ ರಾಶಿ: ಮುಂದೂಡಿದ ಕೆಲಸಗಳು ಮುಗಿಯುತ್ತವೆ. ವೃತ್ತಿ, ಉದ್ಯೋಗ, ವ್ಯಾಪಾರಗಳಲ್ಲಿ ಪ್ರೋತ್ಸಾಹದಾಯಕವಾಗಿರುತ್ತದೆ. ವಾಹನಯೋಗವಿದೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಶುಭದಿನ. ಭವಿಷ್ಯಕ್ಕಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
(3 / 14)
ವೃಷಭ ರಾಶಿ: ಆಲೋಚನೆಗಳಲ್ಲಿ ಬದಲಾವಣೆಗಳು ನಡೆಯುತ್ತವೆ. ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತೀರಿ. ಹೊಸದಾಗಿ ಒಪ್ಪಂದ ಮಾಡಿಕೊಳ್ಳುತ್ತೀರಿ. ತುರ್ತು ನಿರ್ಧಾರಗಳು ಬೇಡ. ವೃತ್ತಿಯಲ್ಲಿ ಬದಲಾವಣೆಗಾಗಿ ಮಾಡುವ ಪ್ರಯತ್ನಗಳು ಫಲ ನೀಡುತ್ತವೆ. ಆದಾಯ ಚೆನ್ನಾಗಿರುತ್ತದೆ.
(4 / 14)
ಮಿಥುನ ರಾಶಿ: ವಾಗ್ವಾದಗಳು ಇರುತ್ತವೆ, ತಾಳ್ಮೆಯಿಂದ ಎಲ್ಲವನ್ನು ನಿರ್ವಹಿಸುತ್ತೀರಿ. ನಿರೀಕ್ಷೆಗೂ ಮೀರಿದ ವೆಚ್ಚಗಳು ಇರುತ್ತವೆ. ವಿದ್ಯಾರ್ಥಿಗಳ ನಡುವೆ ಸಂಘರ್ಷಗಳು ಉಂಟಾಗುತ್ತವೆ. ನೌಕರರಲ್ಲಿ ಅಸಹನೆ ಬೆಳೆಯುತ್ತದೆ. ಗುರಿಯನ್ನು ಗಮನದಲ್ಲಿಟ್ಟುಕೊಂಡು ವರ್ತಿಸಿ. ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬೇಡಿ.
(5 / 14)
ಕಟಕ ರಾಶಿ: ಹೊಸಬರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ನಿರಾಸೆ ಇರುತ್ತದೆ. ಪರ್ಯಾಯ ಆದಾಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಶುಭದಿನವಾಗಿದೆ. ವಾಹನಗಳು, ಯಂತ್ರಗಳನ್ನು ಓಡಿಸುವಾಗ ಎಚ್ಚರದಿಂದಿರಿ. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.
(6 / 14)
ಸಿಂಹ ರಾಶಿ: ಒತ್ತಡ ಹೆಚ್ಚಾಗುತ್ತದೆ. ಸಾಲಗಳನ್ನು ತೀರಿಸಲು ಪ್ರಯತ್ನಿಸುತ್ತೀರಿ. ಅಂದುಕೊಂಡಂತೆ ಹಣ ಬರುತ್ತದೆ. ಅಧಿಕಾರಿಗಳೊಂದಿಗೆ ವಾಗ್ವಾದವನ್ನು ತಪ್ಪಿಸಿ. ನೌಕರರಿಗೆ ಅನುಕೂಲಕರ ದಿನವಾಗಿದೆ. ವ್ಯಾಪಾರಸ್ಥರು ಲಾಭವನ್ನು ಕಾಣುತ್ತಾರೆ.
(7 / 14)
ಕನ್ಯಾ ರಾಶಿ: ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ತೀವ್ರ ಒತ್ತಡವನ್ನು ಅನುಭವಿಸುತ್ತೀರಿ. ಇತರರನ್ನು ನಂಬಿ ಕಾರ್ಯಭಾರವನ್ನು ಹೆಚ್ಚಿಸಬೇಡಿ. ಆತ್ಮೀಯರನ್ನು ಭೇಟಿಯಾಗುತ್ತೀರಿ. ವಿವಾದಗಳು ಉದ್ಭವಿಸದಂತೆ ವರ್ತಿಸಿ. ಮಾತು ನಿಯಂತ್ರಣದಲ್ಲಿ ಇರಲಿ.
(8 / 14)
ತುಲಾ ರಾಶಿ: ನಿರಾಶೆ ಇರುತ್ತದೆ. ಹೊಸ ವ್ಯಕ್ತಿಗಳ ಸಹಕಾರ ದೊರೆಯುತ್ತದೆ. ಮನೋಧೈರ್ಯದೊಂದಿಗೆ ವರ್ತಿಸುತ್ತೀರಿ. ಉದ್ಯೋಗ ಬದಲಾವಣೆ ಯತ್ನಗಳು ಬೇಡ. ಆರ್ಥಿಕವಾಗಿ ಚೆನ್ನಾಗಿರುತ್ತದೆ. ಶುಭಕಾರ್ಯ ಯತ್ನಗಳು ನಡೆಯುತ್ತವೆ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
(9 / 14)
ವೃಶ್ಚಿಕ ರಾಶಿ: ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಮೇಲೆ ಗಮನ ಇರಲಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಡ. ಎಚ್ಚರಿಕೆಯಿಂದ ಇರಿ. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗಲು ಹೊಸ ಯೋಜನೆಗಳನ್ನು ರೂಪಿಸುತ್ತೀರಿ.
(10 / 14)
ಧನು ರಾಶಿ: ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಆಹಾರದ ವಿಚಾರದಲ್ಲಿ ಎಚ್ಚರಿಕೆಗಳನ್ನು ಪಾಲಿಸಿ. ವೃತ್ತಿಯಲ್ಲಿ ತೃಪ್ತಿ ಇರುತ್ತದೆ. ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡುತ್ತೀರಿ. ಹೂಡಿಕೆಗಳ ಬಗ್ಗೆ ಯೋಚಿಸುತ್ತೀರಿ. ಹೊಸ ಪ್ಲಾನ್ ಗಳು ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತವೆ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
(11 / 14)
ಮಕರ ರಾಶಿ: ಒತ್ತಡ ಇರುತ್ತದೆ. ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಲೇ ಇರುತ್ತವೆ. ಹಿರಿಯರಿಂದ ಪ್ರೋತ್ಸಾಹ ಸಿಗುತ್ತದೆ. ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸುತ್ತೀರಿ. ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ಬಂಡವಾಳ ಹೂಡಿಕೆ ವೇಳೆ ಎರಡ್ಮೂರು ಬಾರಿ ಪರಿಶೀಲಿಸುವುದು ಉತ್ತಮ. ಆಸ್ತಿ ಖರೀದಿಯ ಬಗ್ಗೆ ಆಸಕ್ತಿ ತೋರುತ್ತೀರಿ.
(12 / 14)
ಕುಂಭ ರಾಶಿ: ವೆಚ್ಚಗಳು ಹೆಚ್ಚಾಗುತ್ತವೆ. ಟೀಕೆಗಳನ್ನು ಎದುರಿಸುತ್ತೀರಿ. ತಾಳ್ಮೆಯಿಂದ ಎಲ್ಲವನ್ನೂ ಸಾಧಿಸುತ್ತೀರಿ. ದೂರದ ಪ್ರಯಾಣ ಇರುತ್ತದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಬೇರೆಯುತ್ತೀರಿ. ಸಂತೋಷ ವಾತಾರಣ ಇರುತ್ತದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುತ್ತೀರಿ.
(13 / 14)
ಮೀನ ರಾಶಿ: ಆರ್ಥಿಕ ತೊಂದರೆಗಳು ಉಂಟಾಗುತ್ತವೆ. ಸಾಲ ಹೆಚ್ಚಾಗುತ್ತಲೇ ಇರುತ್ತದೆ. ಒಪ್ಪಂದಗಳು ಕುದುರಿಸುವಾಗ ಎಚ್ಚರಿಕೆಯಿಂದ ವರ್ತಿಸಿ. ಸಂತಾನದ ವಿಷಯದಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಯೋಚಿಸುತ್ತೀರಿ.
ಇತರ ಗ್ಯಾಲರಿಗಳು