T20 World Cup 2024: ಭಾರತ vs ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  T20 World Cup 2024: ಭಾರತ Vs ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

T20 World Cup 2024: ಭಾರತ vs ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದ ಸಮಯ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

  • India vs England Live Streaming: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯವನ್ನು ಯಾವಾಗ, ಎಲ್ಲಿ ವೀಕ್ಷಿಸಬಹುದು? ಉಚಿತವಾಗಿ ಆಟವನ್ನು ವೀಕ್ಷಿಸುವುದು ಹೇಗೆ? ಇಲ್ಲಿದೆ ವಿವರ.

ಗುಂಪು ಹಂತ ಮತ್ತು ಸೂಪರ್​-8 ಸುತ್ತಿನಲ್ಲಿ ಮೊದಲ ತಂಡವಾಗಿ ಹೊರಹೊಮ್ಮಿದ್ದ ಭಾರತ ಇದೀಗ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ತಂಡವನ್ನು ಮಣಿಸಿ ಇಂಗ್ಲೆಂಡ್ ಫೈನಲ್​ಗೇರಿತ್ತು. ಇದೀಗ ಆ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್​ ಪಡೆ, ಭರ್ಜರಿ ಕಸರತ್ತು ನಡೆಸಿದೆ. ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯವನ್ನು ಎಲ್ಲಿ ಹೇಗೆ ವೀಕ್ಷಿಸಬೇಕು? ಉಚಿತವಾಗಿ ಪಂದ್ಯ ಕಣ್ತುಂಬಿಕೊಳ್ಳುವುದೇಗೆ? ಇಲ್ಲಿದೆ ವಿವರ.
icon

(1 / 6)

ಜೂನ್ 27ರ ಗುರುವಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ನಡೆಯಲಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಪಂದ್ಯ ಜರುಗಲಿದೆ. ಟಾಸ್ ಪ್ರಕ್ರಿಯೆ ಸಂಜೆ 7:30ಕ್ಕೆ ನಡೆಯಲಿದೆ. ಆದರೆ, ಗಯಾನಾದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಅಚ್ಚರಿ ಅಂದರೆ ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಹೆಚ್ಚುವರಿ 250 ನಿಮಿಷ ನೀಡಲಾಗಿದೆ. ಇದಾಗಿಯೂ ಪಂದ್ಯ ರದ್ದುಗೊಂಡರೆ ಸೂಪರ್​-8 ಟೇಬಲ್ ಟಾಪರ್ ಅಂದರೆ ಭಾರತ ಫೈನಲ್ ಪ್ರವೇಶಿಸಲಿದೆ.
icon

(2 / 6)

ಎರಡನೇ ಸೆಮಿಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ 1 ಹೆಚ್​ಡಿ, ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಹೆಚ್​ಡಿ, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ತಮಿಳು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಕನ್ನಡದ ಚಾನೆಲ್​ನಲ್ಲಿ ಪಂದ್ಯ ಪ್ರಸಾರವಾಗಲಿದೆ. ಡಿಡಿ ಸ್ಪೋರ್ಟ್ಸ್ ಚಾನೆಲ್​ನಲ್ಲೂ ಪ್ರಸಾರ ಮಾಡಲಾಗುತ್ತದೆ.
icon

(3 / 6)

ಟಿ20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ಪಡೆದಿದೆ. ಮೊಬೈಲ್ ಅಪ್ಲಿಕೇಷನ್​ ಹಾಟ್​ಸ್ಟಾರ್​​ನಲ್ಲಿ ಪಂದ್ಯವನ್ನು ಸಂಪೂರ್ಣವಾಗಿ ಉಚಿತವಾಗಿ ವೀಕ್ಷಿಸಬಹುದು. ಆದರೆ ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​​​ ವೆಬ್​ಸೈಟ್​ನಲ್ಲೂ ಪಂದ್ಯವನ್ನೂ ವೀಕ್ಷಿಸಬಹುದು. ಆದರೆ ಚಂದಾದಾರಿಕೆ ಮಾಡಿಕೊಳ್ಳುವುದು ಅಗತ್ಯ.
icon

(4 / 6)

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್‌ಸ್ಟನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.
icon

(5 / 6)

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
icon

(6 / 6)

ಇತರ ಗ್ಯಾಲರಿಗಳು