ಕನ್ನಡ ಸುದ್ದಿ  /  Photo Gallery  /  India News Health Tips Ramadan 2024 Types Of Dates Health Benefits Of Dates Rate Details Russle Market Rst

Ramadan 2024: ರಂಜಾನ್‌ ಮಾಸದಲ್ಲಿ ವಿಶೇಷ ಬೇಡಿಕೆಯಿರುವ ಖರ್ಜೂರದಲ್ಲಿದೆ ನೂರಾರು ಬಗೆ; ಇದರ ಆರೋಗ್ಯ ಪ್ರಯೋಜನಗಳು, ದರ ವಿವರ ಇಲ್ಲಿದೆ

  • ರಂಜಾನ್‌ ಮಾಸ ಬಂತೆಂದರೆ ಕರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ ಬರುವುದು ಸಹಜ. ಆದರೆ ಕರ್ಜೂರ ಸರ್ವಕಾಲಕ್ಕೂ ಸಲ್ಲುವ ಅತ್ಯಧಿಕ ಪೋಷಕಾಂಶವುಳ್ಳ ಆಹಾರ ಪದಾರ್ಥ. ಕರ್ಜೂರದಲ್ಲಿ ಸಾಕಷ್ಟು ಬಗೆಗಳಿವೆ. ಇದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಕರ್ಜೂರದ ಬಗೆಗಳು, ಪ್ರಯೋಜನಗಳು ಹಾಗೂ ದರ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ರಂಜಾನ್‌ ಮಾಸದಲ್ಲಿ ರೋಜಾ ಪಾಲಿಸುವವರು ಕರ್ಜೂರ ಸೇವನೆಯ ಮೂಲಕ ಉಪವಾಸ ಮುರಿಯುವುದು ವಾಡಿಕೆ. ಮುಸ್ಲಿಮರ ಪವಿತ್ರ ಮಾಸದಲ್ಲಿ ಕರ್ಜೂರಕ್ಕೆ ವಿಶೇಷ ಬೇಡಿಕೆ. ಆ ಕಾರಣಕ್ಕೆ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕರ್ಜೂರದ್ದೇ ಘಮ ಹರಡಿರುತ್ತದೆ. ಭಾರತಕ್ಕೆ ವಿದೇಶಗಳಿಂದಲೂ ಬಗೆ ಬಗೆ ಕರ್ಜೂರಗಳು ಆಮದಾಗುತ್ತದೆ.
icon

(1 / 11)

ರಂಜಾನ್‌ ಮಾಸದಲ್ಲಿ ರೋಜಾ ಪಾಲಿಸುವವರು ಕರ್ಜೂರ ಸೇವನೆಯ ಮೂಲಕ ಉಪವಾಸ ಮುರಿಯುವುದು ವಾಡಿಕೆ. ಮುಸ್ಲಿಮರ ಪವಿತ್ರ ಮಾಸದಲ್ಲಿ ಕರ್ಜೂರಕ್ಕೆ ವಿಶೇಷ ಬೇಡಿಕೆ. ಆ ಕಾರಣಕ್ಕೆ ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕರ್ಜೂರದ್ದೇ ಘಮ ಹರಡಿರುತ್ತದೆ. ಭಾರತಕ್ಕೆ ವಿದೇಶಗಳಿಂದಲೂ ಬಗೆ ಬಗೆ ಕರ್ಜೂರಗಳು ಆಮದಾಗುತ್ತದೆ.( HT Kannada)

ಖರ್ಜೂರಗಳಲ್ಲಿ ಹತ್ತಾರು ಬಗೆಗಳಿವೆ. ಪ್ರತಿನಿತ್ಯ ಕರ್ಜೂರ ಸೇವಿಸುವುದರಿಂದ ಮಕ್ಕಳಾದಿಯಾಗಿ ವಯಸ್ಸಾದವರೆಗೆ ಸಾಕಷ್ಟು ಪ್ರಯೋಜನಗಳಿವೆ. ಗರ್ಭಿಣಿಯರಿಗೂ ಕೂಡ ಕೆಲವು ಬಗೆಯ ಕರ್ಜೂರ ಹೇಳಿ ಮಾಡಿಸಿದ್ದು. 
icon

(2 / 11)

ಕಲ್ಮಿ ಕರ್ಜೂರ, ಸಘಾಯಿ ಖರ್ಜೂರ, ಮಬ್ರೂಮ್‌ ಕರ್ಜೂರ, ಮೆಡ್ಜಾಲ್‌ ಕಿಂಗ್‌, ಜಾಹಿರಿ ಖರ್ಜೂರ, ಸುಕ್ರಿ ಖರ್ಜೂರ, ಮರಿಯಮ್‌ ಕರ್ಜೂರ, ಅಜೂವಾ ಕರ್ಜೂರ, ಆಸ್ವಾದಿ ಚಾಕೊಲೇಟ್‌ ಖರ್ಜೂರ ಹೀಗೆ ಹತ್ತಾರು ಬಗೆಯ ಖರ್ಜೂರಗಳಿವೆ. 
icon

(3 / 11)

ಸಾಮಾನ್ಯವಾಗಿ ಖರ್ಜೂರಗಳು 100 ರೂಪಾಯಿಯಿಂದ ಆರಂಭವಾಗಿ 1,600 ರೂಪಾಯಿವರೆಗೆ ಇರುತ್ತದೆ. ಜಾಹೀರಿ ಕರ್ಜೂರಕ್ಕೆ 100 ರೂ ಇದ್ದರೆ, ಮೆಡ್ಜಾಲ್‌ ಖರ್ಜೂರಕ್ಕೆ 1,600 ರೂ ವರೆಗೆ ಇರುತ್ತದೆ. ಪ್ರಪಂಚದಾದ್ಯಂತ ಒಟ್ಟು 350 ಬಗೆಯ ಕರ್ಜೂರಗಳು ಸಿಗುತ್ತವೆ. 
icon

(4 / 11)

ಖರ್ಜೂರದಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ವಿಟಮಿನ್‌, ಪ್ರೊಟೀನ್‌, ಮಿನರಲ್‌ ಹಾಗೂ ನಾರಿನಾಂಶ ಹೇರಳವಾಗಿದೆ. ಇದರ ಸೇವನೆಯಿಂದ ನಿಶಕ್ತಿ, ಆಯಾಸ, ಸುಸ್ತು ಕಡಿಮೆಯಾಗುತ್ತದೆ. 
icon

(5 / 11)

ಕರ್ಜೂರದಲ್ಲಿ ಅತ್ಯಧಿಕ ನಾರಿನಾಂಶ ಇರುವ ಕಾರಣ ಇದು ತೂಕ ಇಳಿಕೆಗೆ ಹೇಳಿ ಮಾಡಿಸಿದ್ದು. ಮಲಬದ್ಧತೆ ಸಮಸ್ಯೆ ನಿವಾರಣೆಗೂ ಖರ್ಜೂರ ಸೇವನೆ ಉತ್ತಮ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ಸಹಕಾರಿ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಜೊತೆಗೆ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆ.
icon

(6 / 11)

ಫ್ಲೇವನಾಯ್ಡ್‌, ಕ್ಯಾರೊಟಿನಾಯ್ಡ್‌ ಹಾಗೂ ಫೆನೊಲಿಕ್‌ ಆಸಿಡ್‌ನಂತಹ ಆಕ್ಸಿಡೆಂಟ್‌ ಪ್ರಮಾಣವು ಇದರಲ್ಲಿ ಸಮೃದ್ಧವಾಗಿರುತ್ತದೆ. ಆ ಕಾರಣಕ್ಕೆ ಇದು ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
icon

(7 / 11)

ಮೆದುಳಿನ ಆರೋಗ್ಯವನ್ನು ಉತ್ತೇಜಿಸುವ ಕಾರ್ಯವನ್ನೂ ಖರ್ಜೂರ ಮಾಡುತ್ತದೆ. ಇದು ದೇಹದಲ್ಲಿನ ಉರಿಯೂತವನ್ನು ನಿವಾರಿಸಿ ಮೆದಳಿನ ಕೋಶಗಳ ಆರೋಗ್ಯ ಸುಧಾರಣೆಗೂ ಸಹಾಯ ಮಾಡುತ್ತದೆ. 
icon

(8 / 11)

ಖರ್ಜೂರವು ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿರುತ್ತದೆ, ಇದು ರಕ್ತದೊಂದಿಗೆ ಸೇರಿ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಇದರಿಂದ ಪದೇ ಪದೇ ಸುಸ್ತಾಗುವುದನ್ನು ತಡೆಯುತ್ತದೆ. ಉಪವಾಸ ಸಂದರ್ಭ ಖರ್ಜೂರ ಸೇವನೆಯಿಂದ ದೇಹದಲ್ಲಿ ಶಕ್ತಿ ಮರಳುತ್ತದೆ,
icon

(9 / 11)

ದೇಹದಲ್ಲಿ ಕಬ್ಬಿಣಾಂಶ ಕೊರತೆ ನೀಗಿಸಲು ಕೂಡ ಖರ್ಜೂರ ಬಹಳ ಉತ್ತಮ. ಕಬ್ಬಿಣಾಂಶ ಕೊರತೆಯಿಂದ ದೇಹದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇದು ರಕ್ತಹೀನತೆಯಂತಹ ತೊಂದರೆಯನ್ನು ತಡೆಗಟ್ಟುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.
icon

(10 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

IPL_Entry_Point

ಇತರ ಗ್ಯಾಲರಿಗಳು