105 ರನ್‌ಗೆ 20 ವಿಕೆಟ್; ಕೊನೆಯ 2 ಪಂದ್ಯಗಳಲ್ಲಿ ಲಂಕಾಗೆ ಲಗಾಮು ಹಾಕಿದ ಭಾರತ ವೇಗಿಗಳು
- ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಭಾರತ ಅಕ್ಷರಶಃ ಧ್ವಂಸ ಮಾಡಿದೆ. ಕೇವಲ 55 ರನ್‌ಗಳಿಗೆ ಸಿಂಹಳೀಯರನ್ನು ಆಲೌಟ್ ಮಾಡಿ 302 ರನ್‌ಗಳಿಂದ ಗೆದ್ದು ಬೀಗಿದೆ. ಲಂಕಾ ಅಲ್ಪಮೊತ್ತಕ್ಕೆ ಸರ್ವಪತನ ಕಂಡಿದ್ದು ಇದು ಮೊದಲಲ್ಲ. ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಇದಕ್ಕಿಂತ ಕಡಿಮೆ ಮೊತ್ತಕ್ಕೆ ಲಂಕಾ ಆಲೌಟ್ ಆಗಿತ್ತು.
- ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಭಾರತ ಅಕ್ಷರಶಃ ಧ್ವಂಸ ಮಾಡಿದೆ. ಕೇವಲ 55 ರನ್‌ಗಳಿಗೆ ಸಿಂಹಳೀಯರನ್ನು ಆಲೌಟ್ ಮಾಡಿ 302 ರನ್‌ಗಳಿಂದ ಗೆದ್ದು ಬೀಗಿದೆ. ಲಂಕಾ ಅಲ್ಪಮೊತ್ತಕ್ಕೆ ಸರ್ವಪತನ ಕಂಡಿದ್ದು ಇದು ಮೊದಲಲ್ಲ. ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಇದಕ್ಕಿಂತ ಕಡಿಮೆ ಮೊತ್ತಕ್ಕೆ ಲಂಕಾ ಆಲೌಟ್ ಆಗಿತ್ತು.
(1 / 5)
ಭಾರತದ ವೇಗಿಗಳ ಅಬ್ಬರಕ್ಕೆ ಶ್ರೀಲಂಕಾ ನಿಜಕ್ಕೂ ಹದರಿ ಬೆವರುತ್ತಿದೆ. ಕಳೆದ ಎರಡು ಏಕದಿನ ಪಂದ್ಯಗಳನ್ನು ಸೇರಿಸಿ ಭಾರತದ ವಿರುದ್ಧ ಶ್ರೀಲಂಕಾ ಗಳಿಸಿದ್ದು ಕೇವಲ 105 ರನ್ ಮಾತ್ರ. ಅಷ್ಟಕ್ಕೆ ಬರೋಬ್ಬರಿ 20 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ 20 ವಿಕೆಟ್‌ಗಳಲ್ಲಿ 19 ವಿಕೆಟ್‌ಗಳು ವೇಗಿಗಳ ಪಾಲಾಗಿದೆ. ಮೊಹಮ್ಮದ್ ಸಿರಾಜ್ ಒಬ್ಬರೇ ಒಂಬತ್ತು ವಿಕೆಟ್ ಕಬಳಿಸಿದ್ದಾರೆ.(PTI)
(2 / 5)
ಪ್ರಸಕ್ತ ವಿಶ್ವಕಪ್‌ಗೂ ಮುನ್ನ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಅದು ಕೂಡಾ 15.2 ಓವರ್‌ಗಳಲ್ಲಿ. ಆ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಪಡೆದರು. ಇದೇ ವೇಳೆ ಏಳು ಓವರ್‌ಗಳಲ್ಲಿ 21 ರನ್ ಬಿಟ್ಟುಕೊಟ್ಟ ಮೊಹಮ್ಮದ್ ಸಿರಾಜ್ ಆರು ವಿಕೆಟ್ ಕಬಳಿಸಿದ್ದರು. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರು.(AP)
(3 / 5)
ಇದೀಗ ನವೆಂಬರ್ 2ರ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಚೇಸಿಂಗ್ ನಡೆಸಿದ ಶ್ರೀಲಂಕಾ, ಒಂದು ಹಂತದಲ್ಲಿ 11.3 ಓವರ್ ವೇಳೆಗೆ 22 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 55 ರನ್‌ಗಳಿಗೆ ಆಲೌಟ್ ಆಯಿತು. ಅಂದರೆ, ಲಂಕಾ ತಂಡ ಸತತ ಎರಡು ಏಕದಿನ ಪಂದ್ಯಗಳಲ್ಲಿ (ಏಷ್ಯಾಕಪ್ ಫೈನಲ್ ಮತ್ತು ವಿಶ್ವಕಪ್ ಪಂದ್ಯ) 105 ರನ್‌ಗಳಿಗೆ 20 ವಿಕೆಟ್ ಕಳೆದುಕೊಂಡಿದೆ.(Reuters)
(4 / 5)
ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಲಂಕಾ, ಎರಡು ರನ್ ವೇಳೆಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಎರಡು ರನ್‌ಗೆ ಮೂರನೇ ವಿಕೆಟ್, ಮೂರು ರನ್‌ಗೆ ನಾಲ್ಕನೇ ವಿಕೆಟ್, 14 ರನ್ ವೇಳೆಗೆ ಐದು ಮತ್ತು ಆರನೇ ವಿಕೆಟ್ ಪತನವಾಯ್ತು. 22 ರನ್‌ಗೆ ಏಳನೇ ವಿಕೆಟ್, 29 ರನ್‌ಗೆ ಎಂಟನೇ ವಿಕೆಟ್, 49 ರನ್ ವೇಳೆಗೆ ಒಂಬತ್ತನೇ ವಿಕೆಟ್ ಮತ್ತು 55 ರನ್‌ಗಳಿಗೆ ಹತ್ತನೇ ಪತನವಾಯಿತು.(AP)
(5 / 5)
ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಐದು ಓವರ್‌ಗಳಲ್ಲಿ ಎಂಟು ರನ್ ನೀಡಿ ಒಂದು ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಐದು ಓವರ್‌ಗಳಲ್ಲಿ 18 ರನ್ ನೀಡಿ ಐದು ವಿಕೆಟ್ ಪಡೆದರು. ಅತ್ತ ಸಿರಾಜ್ ಏಳು ಓವರ್ ಗಳಲ್ಲಿ 17 ರನ್ ನೀಡಿ ಮೂರು ವಿಕೆಟ್ ಪಡೆದರು. ರವೀಂದ್ರ ಜಡೇಜಾ ನಾಲ್ಕು ಎಸೆತಗಳಲ್ಲಿ ನಾಲ್ಕು ರನ್ ನೀಡಿ ಒಂದು ವಿಕೆಟ್ ಪಡೆದರು. ಎರಡು ಪಂದ್ಯಗಳನ್ನು ಸೇರಿ ಒಂದು ವಿಕೆಟ್ ಮಾತ್ರ ಸ್ಪಿನ್ನರ್ ಪಾಲಾಗಿದೆ.(AP)
ಇತರ ಗ್ಯಾಲರಿಗಳು