Asian Games: ಜಪಾನ್ ಮಣಿಸಿ ಚಿನ್ನ ಗೆದ್ದ ಭಾರತ ಹಾಕಿ ತಂಡ; ಪ್ಯಾರಿಸ್ ಒಲಿಂಪಿಕ್ಸ್‌ಗೂ ಸಿಕ್ತು ಟಿಕೆಟ್
- India vs Japan Hockey Final: ಏಷ್ಯನ್ ಗೇಮ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.
- India vs Japan Hockey Final: ಏಷ್ಯನ್ ಗೇಮ್ಸ್ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಚಿನ್ನ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಮಣಿಸಿದ ಭಾರತ, ಬಂಗಾರದ ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.
(1 / 10)
ಭಾರತೀಯ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿದೆ. ಭರ್ಜರಿ ಐದು ಗೋಲುಗಳೊಂದಿಗೆ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿದೆ. ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಎರಡು ಗೋಲು ಗಳಿಸಿದರು.
(2 / 10)
ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು ಒಂಬತ್ತು ವರ್ಷಗಳ ನಂತರ ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿದೆ. ಹಾಲಿ ಚಾಂಪಿಯನ್ ಜಪಾನ್ ತಂವನ್ನು ಭರ್ಜರಿಯಾಗಿ ಮಣಿಸಿ ಬಂಗಾರದ ಸಾಧನೆ ಮಾಡಿದೆ.
(3 / 10)
ಹರ್ಮನ್‌ಪ್ರೀತ್ ಸಿಂಗ್ 32ನೇ ಮತ್ತು 59ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಎರಡು ಗೋಲು ಗಳಿಸಿದರು.
(4 / 10)
ಅಮಿತ್ ರೋಹಿದಾಸ್ 36ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಮನ್‌ಪ್ರೀತ್ ಸಿಂಗ್ 25ನೇ ನಿಮಿಷ ಮತ್ತು ಅಭಿಷೇಕ್ 48ನೇ ನಿಮಿಷದಲ್ಲಿ ಅಂಕ ತಂದುಕೊಟ್ಟರು.
(6 / 10)
ಭಾರತವು ಕೊನೆಯದಾಗಿ 2014ರಲ್ಲಿ ಇಂಚಿಯಾನ್‌ನಲ್ಲಿ ನಡೆದ ಟೂರ್ನಿಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಅದಕ್ಕೂ ಹಿಂದೆ 1966 ಮತ್ತು 1998ರಲ್ಲಿ ಬಂಗಾರದ ಸಾಧನೆ ಮಾಡಿತ್ತು.
(7 / 10)
ಇದೀಗ ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಜಪಾನ್ ಮಣಿಸಿದ ಭಾರತ, ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ.
(8 / 10)
ಭಾರತವು ಈ ಹಿಂದೆ 1958, 1962, 1970, 1974, 1978, 1982, 1990, 1994, 2002ರ ಆವೃತ್ತಿಗಳಲ್ಲಿ ಬೆಳ್ಳಿ ಗೆದ್ದಿದೆ.
ಇತರ ಗ್ಯಾಲರಿಗಳು