ದೀಪಾವಳಿ ಸಂಭ್ರಮದಲ್ಲಿ ಮಿಂದೆದ್ದ ಭಾರತೀಯ ಕ್ರಿಕೆಟಿಗರು; ಮತ್ತಷ್ಟು ಕಳೆ ನೀಡಿದ ಕರ್ನಾಟಕ ಆಟಗಾರರ ಆಚರಣೆ-PHOTOS
- Indian Cricketers Diwali Celebration: ಭಾರತದಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರು ಹೊರತಾಗಿಲ್ಲ. ತಮ್ಮ ಕುಟುಂಬ ಸದಸ್ಯರೊಂದಿಗೆ ಸಾಂಪ್ರಾದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಇಲ್ಲಿದೆ ನೋಡಿ ಕ್ರಿಕೆಟಿಗರ ಸೆಲೆಬ್ರೇಷನ್ ಲುಕ್.
- Indian Cricketers Diwali Celebration: ಭಾರತದಲ್ಲಿ ದೀಪಾವಳಿ ಸಡಗರ ಜೋರಾಗಿದೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರು ಹೊರತಾಗಿಲ್ಲ. ತಮ್ಮ ಕುಟುಂಬ ಸದಸ್ಯರೊಂದಿಗೆ ಸಾಂಪ್ರಾದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ. ಇಲ್ಲಿದೆ ನೋಡಿ ಕ್ರಿಕೆಟಿಗರ ಸೆಲೆಬ್ರೇಷನ್ ಲುಕ್.
(1 / 13)
ಭಾರತೀಯ ಕ್ರಿಕೆಟಿಗರು ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಇದರ ನಡುವೆಯೂ ಅವರು ಹಬ್ಬ-ಹರಿದಿನಗಳನ್ನು ಕುಟುಂಬದೊಂದಿಗೆ ತಪ್ಪದೇ ಸಂಭ್ರಮಿಸುತ್ತಾರೆ. ಅದರಂತೆ ಸ್ಟಾರ್ ಆಟಗಾರರು ದೀಪಾವಳಿ ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವೊಂದಿಷ್ಟು ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಆಡುತ್ತಿರುವ ಕಾರಣ ಈ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.
(2 / 13)
ಭಾರತದ ವೇಗಿ ದೀಪಕ್ ಚಹರ್ ಮತ್ತು ಅವರ ತಂದೆ ಲೋಕೇಂದ್ರ ಸಿಂಗ್ ಚಹರ್, ತಾಯಿ ಪುಷ್ಪಾ ಚಹರ್, ಪತ್ನಿ ಜಯಾ ಭಾರಧ್ವಾಜ್ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.
(4 / 13)
ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಮತ್ತು ಪತ್ನಿ ಪೂಜಾ ಪಬರಿ ಹಾಗೂ ಮಗಳು ಹಬ್ಬವನ್ನು ಆಚರಿಸಿದರು.
(5 / 13)
ಟೀಮ್ ಇಂಡಿಯಾ ದಿಗ್ಗಜ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಪತ್ನಿ ಹೆಜಲ್ ಕೀಚ್ ತಮ್ಮಿಬ್ಬರ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.
(6 / 13)
ಕರ್ನಾಟಕದ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್ ಮತ್ತು ಪತ್ನಿ ರಿಚಾ ಸಿಂಗ್ ಅವರು ಹಬ್ಬವನ್ನು ಸಂಭ್ರಮಿಸಿದ ಕ್ಷಣ.
(9 / 13)
ಮೊಹಮ್ಮದ್ ಕೈಫ್ ಮುಸ್ಲಿಂ ಆದರೂ ತನ್ನ ಹೆಂಡತಿ ಪೂಜಾ ಯಾದವ್ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
(11 / 13)
ಪತ್ನಿ ಆಥಿಯಾ ಶೆಟ್ಟಿ, ಮಾವ ಸುನಿಲ್ ಶೆಟ್ಟಿ, ಅತ್ತೆ ಮನ ಶೆಟ್ಟಿ ಅವರೊಂದಿಗೆ ಭಾರತೀಯ ಕ್ರಿಕೆಟಿಗನೂ ಆಗಿರುವ ಕನ್ನಡಿಗ ಕೆಎಲ್ ರಾಹುಲ್ ಹಬ್ಬವನ್ನು ಸಂಭ್ರಮಿಸಿದ್ದು ಹೀಗೆ.
(12 / 13)
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಮಗ ಅಗಸ್ತ್ಯ ಹಾಗೂ ಸಹೋದರ ಕೃನಾಲ್ ಪಾಂಡ್ಯ ಮತ್ತು ಕೃನಾಲ್ ಪತ್ನಿ ಫಂಖೂರಿ ಶರ್ಮಾ.
ಇತರ ಗ್ಯಾಲರಿಗಳು