Birsa Munda: ಬದುಕಿದ್ದು 25 ವರ್ಷ, ಮಾಡಿದ್ದು ಮಹಾಕ್ರಾಂತಿ: ಇದು ಆದಿವಾಸಿ ನಾಯಕ ಬಿರ್ಸಾಮುಂಡಾ ಭಾರತಕ್ಕಾಗಿ ಹೋರಾಡಿದ ಸಾಧನೆಯ ಹಾದಿ
- ಭಾರತದ ಇತಿಹಾಸದಲ್ಲಿ ಹಲವಾರು ಕ್ರಾಂತಿಕಾರಿ ಹೋರಾಟಗಾರರ ಹೆಸರುಗಳಿವೆ. ಇವುಗಳಲ್ಲಿ ಆದಿವಾಸಿ ನಾಯಕ, ಕಡಿಮೆ ಅವಧಿಯಲ್ಲಿಯೇ ಹೋರಾಟದ ಕೆಚ್ಚು ಹಚ್ಚಿ ಬ್ರಿಟೀಷರನ್ನು ಎದುರಿಸಿದ್ದ ಬಿರ್ಸಾಮುಂಡಾ( Birsa Munda) ಕೂಡ ಒಬ್ಬರು. ಅವರ ಜೀವನಗಾಥೆ ವಿವರ ಇಲ್ಲಿದೆ.
- ಮಾಹಿತಿ: ಪರಿಸರ ಪರಿವಾರ
- ಭಾರತದ ಇತಿಹಾಸದಲ್ಲಿ ಹಲವಾರು ಕ್ರಾಂತಿಕಾರಿ ಹೋರಾಟಗಾರರ ಹೆಸರುಗಳಿವೆ. ಇವುಗಳಲ್ಲಿ ಆದಿವಾಸಿ ನಾಯಕ, ಕಡಿಮೆ ಅವಧಿಯಲ್ಲಿಯೇ ಹೋರಾಟದ ಕೆಚ್ಚು ಹಚ್ಚಿ ಬ್ರಿಟೀಷರನ್ನು ಎದುರಿಸಿದ್ದ ಬಿರ್ಸಾಮುಂಡಾ( Birsa Munda) ಕೂಡ ಒಬ್ಬರು. ಅವರ ಜೀವನಗಾಥೆ ವಿವರ ಇಲ್ಲಿದೆ.
- ಮಾಹಿತಿ: ಪರಿಸರ ಪರಿವಾರ
(1 / 8)
ಬಿರ್ಸಾ ಮುಂಡಾ ಬುಡಕಟ್ಟು ಮೂಲದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಇವರು ಮಹಾತ್ಮ ಗಾಂಧಿ, ಭಗತ್ ಸಿಂಗ್‌ರಿಂತ ಮುಂಚಿತವಾಗಿಯೇ ಬ್ರಿಟೀಷರ ವಿರುದ್ದ ಹೋರಾಟ ಪ್ರಾರಂಭಿಸಿದವರು.
(2 / 8)
ಜಾರ್ಖಂಡ್‌ನ ಕುಂತಿ ಜಿಲ್ಲೆಯ ಉಲಿಹತು ಗ್ರಾಮದಲ್ಲಿ 1875 ನವೆಂಬರ್ 15ಜನಿಸಿದ ಬಿರ್ಸಾ ರವರು ಪ್ರಾರಂಭದಲ್ಲಿ ಮಿಷನರಿ ಶಾಲೆಯಲ್ಲಿ ತಮ್ಮ ವ್ಯಾಸಂಗ ಪ್ರಾರಂಭ ಮಾಡುತ್ತಾರೆ. ಆದರೆ ಅವರ ಶಿಕ್ಷಕ ಜೈಪಾಲ್ ನಾಗ್ ಅವರ ಸಲಹೆಯ ಮೇರೆಗೆ ಅವರು ಜರ್ಮನ್ ಮಿಷನ್ ಶಾಲೆಗೆ ಸೇರುವ ಉದ್ದೇಶದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುತ್ತಾರೆ.
(3 / 8)
ನಂತರ ಬ್ರಿಟಿಷರು ಮತ್ತು ಅಂದಿನ ಮಿಷನರಿಗಳ ಒಳ ಕಾರ್ಯಸೂಚಿ ಅರಿತ ಇವರು 1890 ರಲ್ಲಿ ಶಾಲೆಯನ್ನು ತೊರೆಯಲು ನಿರ್ಧರಿಸುತ್ತಾರೆ. ತಮ್ಮ ಮತಾಂತರದ ನಿರ್ಧಾರವನ್ನು ಬದಲಾಯಿಸುತ್ತಾರೆ. ಮರಳಿ ತಮ್ಮ ಬುಡಕಟ್ಟು ಸಾಂಪ್ರದಾಯದ ಪಾಲನೆಗೆ ನಿರ್ಧರಿಸುತ್ತಾರೆ.
(4 / 8)
1895 ರಲ್ಲಿ ಬಿರ್ಸಾ ರವರು ತಮ್ಮ ಅನುಯಾಯಿಗಳೊಂದಿಗೆ ಸೇರಿ 'ಉಲ್ಗುಲಾನ್' ಹೆಸರಲ್ಲಿ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಂಘಟಿತ ಹೋರಾಟ ಪ್ರಾರಂಭಿಸಿದರು. ಈ ಆಂದೋಲನವು ಬುಡಕಟ್ಟು ಜನರಿಗೆ ಭೂ ಮಾಲೀಕತ್ವ ದೊರಕಿಸಿ ಕೊಡುವ, ಆದಿವಾಸಿಹಕ್ಕುಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು ಮತ್ತು ತಮ್ಮ ನೆಲದಲ್ಲಿ ಜಮೀನ್ದಾರರು ಮತ್ತು ಬ್ರಿಟಿಷರ ಆಡಳಿತವನ್ನು ತೆಗೆದುಹಾಕುವ ಗುರಿ ಹೊಂದಿತ್ತು.
(5 / 8)
ನಂತರ 'ಧರ್ತಿ ಅಬ್ಬಾ' ಅಥವಾ ಭೂಮಿಯ ತಂದೆ ಎಂದು ಕರೆಯಲ್ಪಡುವ ಬಿರ್ಸಾ ಬುಡಕಟ್ಟು ಸಮುದಾಯದ ಸದಸ್ಯರು ತಮ್ಮ ಸ್ವಂತ ಧರ್ಮವನ್ನು ಅಧ್ಯಯನ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಅವರ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದೆಂದು ಕರೆಕೊಟ್ಟರು.ಬ್ರಿಟಿಷರು ಬಿರ್ಸಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇದಾದ ಕೆಲವು ತಿಂಗಳಲ್ಲಿ ಬಿರ್ಸಾ ರವರು ಮಲಗಿದ್ದಾಗ ಚಕ್ರಧರಪುರ ಪಟ್ಟಣದ ಬಳಿ ದುರದೃಷ್ಟವಶಾತ್ ಬ್ರಿಟಿಷರಿಂದ ಸೆರೆಹಿಡಿಯಲ್ಪಡುತ್ತಾರೆ.
(6 / 8)
25 ವರ್ಷ ವಯಸ್ಸಿನ ಬಿರ್ಸಾ ಮುಂಡಾ ಅವರು 9 ಜೂನ್ 1900 ರಂದು ರಾಂಚಿ ಕೇಂದ್ರ ಕಾರಾಗೃಹದಲ್ಲಿ ಬ್ರಿಟಿಷ್ ಅಧಿಕಾರಿಗಳ ವಶದಲ್ಲಿದ್ದಾಗ ತೀವ್ರ ಚಿತ್ರಹಿಂಸೆಯನ್ನು ಅನುಭವಿಸಿ ನಿಧನರಾಗುತ್ತಾರೆ.
(7 / 8)
ಅವರ ಜನ್ಮದಿನದಂದು, ತನ್ನ ಜನರ ಹಕ್ಕುಗಳಿಗಾಗಿ ಹೋರಾಡಿದ, ಬ್ರಿಟೀಷರ ವಿರುದ್ದ ಹೋರಾಡಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆ ನೀಡಿದ ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ನಾವು ಸ್ಮರಿಸೋದು ಒಳ್ಳೆಯದು.
ಇತರ ಗ್ಯಾಲರಿಗಳು