ಎಷ್ಟು ಸಖತ್ತಾಗಿದೆ ಅಲ್ವಾ, ಹಾಗಿದ್ದರೆ ಇದೇನಂಥ ಒಮ್ಮೆ ಗೆಸ್ ಮಾಡಿ; ಸುಳಿವು- ಇದು ವಿಮಾನ ನಿಲ್ದಾಣವಲ್ಲ!
- Charlapalli Railway Station: ಚರ್ಲಪಲ್ಲಿ ರೈಲು ನಿಲ್ದಾಣದಲ್ಲಿ ಹೊಸ ಸ್ಯಾಟಲೈಟ್ ಟರ್ಮಿನಲ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದರಿಂದ ಹೈದರಾಬಾದ್, ಸಿಕಂದರಾಬಾದ್ ಮತ್ತು ಕಾಚಿಗುಡ ರೈಲು ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆಯಾಗಲಿದೆ. ಇದು ತೆಲಂಗಾಣದ ನಾಲ್ಕನೇ ಅತಿದೊಡ್ಡ ರೈಲು ನಿಲ್ದಾಣವಾಗಿದೆ.
- Charlapalli Railway Station: ಚರ್ಲಪಲ್ಲಿ ರೈಲು ನಿಲ್ದಾಣದಲ್ಲಿ ಹೊಸ ಸ್ಯಾಟಲೈಟ್ ಟರ್ಮಿನಲ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದರಿಂದ ಹೈದರಾಬಾದ್, ಸಿಕಂದರಾಬಾದ್ ಮತ್ತು ಕಾಚಿಗುಡ ರೈಲು ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆಯಾಗಲಿದೆ. ಇದು ತೆಲಂಗಾಣದ ನಾಲ್ಕನೇ ಅತಿದೊಡ್ಡ ರೈಲು ನಿಲ್ದಾಣವಾಗಿದೆ.
(1 / 6)
ತೆಲಂಗಾಣದ ಚೆರ್ಲಪಲ್ಲಿಯಲ್ಲಿ ನಿರ್ಮಿಸಲಾದ ನೂತನ ರೈಲ್ವೆ ನಿಲ್ದಾಣವು ಎಂತಹವರನ್ನೂ ಬೆರಗುಗೊಳಿಸುತ್ತದೆ. ವಿಮಾನ ನಿಲ್ದಾಣವನ್ನೂ ಮೀರಿಸುವಂತಿದೆ. ಸ್ಯಾಟಲೈಟ್ ಟರ್ಮಿನಲ್ ಶೀಘ್ರದಲ್ಲೇ ಜನರ ಸೇವೆಗೆ ಲಭ್ಯವಾಗಲಿದೆ. ಹೈದರಾಬಾದ್, ಸಿಕಂದರಾಬಾದ್ ಮತ್ತು ಕಾಚಿಗುಡ ರೈಲ್ವೆ ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಈ ಸ್ಟೇಷನ್ ಅನ್ನು ನಿರ್ಮಿಸಲಾಗಿದೆ.
(2 / 6)
ಚೆರ್ಲಪಲ್ಲಿ ಟರ್ಮಿನಲ್ ಅನ್ನು ಹೈದರಾಬಾದ್ನ ಪೂರ್ವಕ್ಕೆ ನಿರ್ಮಿಸಲಾಗಿದೆ, ಇದಕ್ಕೆ ಹತ್ತಿರದಲ್ಲಿ ಘಾಟ್ಕೇಸರ್ನಲ್ಲಿ ಹೊರವರ್ತುಲ ರಸ್ತೆ ಇದೆ. ಇದು ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟುಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.(@kishanreddybjp)
(3 / 6)
ಯಾವುದೇ ಸಂಚಾರ ತೊಂದರೆಗಳಿಲ್ಲದೆ ಚೆರ್ಲಪಲ್ಲಿ ಟರ್ಮಿನಲ್ ತಲುಪುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಖಾಸಗಿ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳು ಇಲ್ಲಿಗೆ ಸುಲಭವಾಗಿ ತಲುಪಬಹುದು.(@kishanreddybjp)
(4 / 6)
ಚೆರ್ಲಪಲ್ಲಿ ಟರ್ಮಿನಲ್ ನಿಂದ 25 ಜೋಡಿ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಚೆರ್ಲಪಲ್ಲಿ ಟರ್ಮಿನಲ್ 4,000 ಚದರ ಅಡಿ ಪ್ರದೇಶದಲ್ಲಿ ಹರಡಿರುವ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಾರಂಭವಾಗಲಿದೆ.(@kishanreddybjp)
(5 / 6)
ಈ ನಿಲ್ದಾಣದಿಂದ ದೂರದ ನಗರಗಳಿಗೆ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಚೆರ್ಲಪಲ್ಲಿ ಟರ್ಮಿನಲ್ಗೆ ಎಂಎಂಟಿಎಸ್ ರೈಲುಗಳ ಸೇರ್ಪಡೆಯೊಂದಿಗೆ, ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ರೈಲ್ವೆ ನಿಲ್ದಾಣವನ್ನು ಸರಾಗವಾಗಿ ತಲುಪಬಹುದು,(@kishanreddybjp)
ಇತರ ಗ್ಯಾಲರಿಗಳು