Asian Games: ಚೈನೀಸ್ ತೈಪೆ ವಿರುದ್ಧ 26-25 ಅಂತರದ ರೋಚಕ ಜಯ; ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನ
- Asian Games Kabaddi: ಕಬಡ್ಡಿಯಲ್ಲಿ ಬಲಿಷ್ಠವಾಗಿರುವ ಭಾರತವು, ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ. ವನಿತೆಯರ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ಹಣಾಹಣಿಯ ಬಳಿಕ 26-25 ಅಂತರದಿಂದ ಗೆದ್ದ ಭಾರತವು, ಒಂದು ಅಂಕ ಅಂತರದಿಂದ ಗೆದ್ದು ಬಂಗಾರ ತನ್ನದಾಗಿಸಿಕೊಂಡಿತು.
- Asian Games Kabaddi: ಕಬಡ್ಡಿಯಲ್ಲಿ ಬಲಿಷ್ಠವಾಗಿರುವ ಭಾರತವು, ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದೆ. ವನಿತೆಯರ ಕಬಡ್ಡಿ ತಂಡವು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ರೋಚಕ ಹಣಾಹಣಿಯ ಬಳಿಕ 26-25 ಅಂತರದಿಂದ ಗೆದ್ದ ಭಾರತವು, ಒಂದು ಅಂಕ ಅಂತರದಿಂದ ಗೆದ್ದು ಬಂಗಾರ ತನ್ನದಾಗಿಸಿಕೊಂಡಿತು.
(1 / 8)
ಭಾರತ ಮಹಿಳಾ ಕಬಡ್ಡಿ ತಂಡವು ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು 26-25 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು. ಒಂದು ಹಂತದಲ್ಲಿ ಭಾರತವು ಸೋಲುವ ಭೀತಿಯಲ್ಲಿತ್ತು. ಉಭಯ ತಂಡಗಳು ಕೂಡಾ ಒತ್ತಡದಲ್ಲಿದ್ದವು. ಅಂತಿಮವಾಗಿ ಭಾರತ ಮಹಿಳಾ ತಂಡ ಗೆದ್ದು ಬೀಗಿತು.(PTI)
(2 / 8)
ಭಾರತವು ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನ ಗೆದ್ದಿತು. ಈ ಚಿನ್ನ ಭಾರತದ ಪಾಲಿಗೆ ತುಂಬಾ ವಿಶೇಷ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100ನೇ ಪದಕವಾಗಿ ಚಿನ್ನ ಗೆದ್ದುಕೊಂಡಿತು.(PTI)
(3 / 8)
ಉಭಯ ತಂಡಗಳ ನಡುವೆ ಗ್ರೂಪ್ ಲೀಗ್ ಹಂತದ ಪಂದ್ಯವು 34-34 ಅಂಕಗಳಿಂದ ಸಮಬಲಗೊಂಡಿತ್ತು. ಹೀಗಾಗಿ ಫೈನಲ್ ಪಂದ್ಯವು ರೋಚಕವಾಗಿರಲಿದೆ ಎಂಬ ನಿರೀಕ್ಷೆ ಇದ್ದವು. ಅದರಂತೆಯೇ ಭಾರತವು ಒಂದು ಅಂಕದಿಂದ ಗೆದ್ದಿದೆ.(PTI)
(4 / 8)
ಅಂತಿಮ ಕ್ಷಣಗಳಲ್ಲಿ ಪಂದ್ಯವು ರಣರೋಚಕವಾಗಿತ್ತು. 22-22, 23-23 ಮತ್ತು ನಂತರ 24-24ರಲ್ಲಿ ಸಮಬಲ ಸಾಧಿಸುತ್ತಾ ಹೋದವು. ಕೊನೆಗೂ ಭಾರತ ಒಂದು ಅಂಕದ ಮುನ್ನಡೆ ಸಾಧಿಸಿ ಸಂಭ್ರಮಾಚರಣೆ ಆರಂಭಿಸಿತು.(PTI)
(5 / 8)
India vs Chinese Taipei: 2010ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿಯನ್ನು ಪರಿಚಯಿಸಲಾಗಿತ್ತು. ಅದಾದ ಬಳಿಕ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ ಮೂರನೇ ಚಿನ್ನವಾಗಿದೆ.(PTI)
(6 / 8)
ಭಾರತವು 2010 ಮತ್ತು 2014 ಆವೃತ್ತಿಗಳಲ್ಲಿ ಚಿನ್ನ ಗೆದ್ದುಕೊಂಡಿತ್ತು. ಆದರೆ ಕಳೆದ ಬಾರಿ 2018ರಲ್ಲಿ ನಡೆದ ಟೂರ್ನಿಯಲ್ಲಿ ಇರಾನ್ ವಿರುದ್ಧ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿತು. ಇದೀಗ ಮತ್ತೆ ತನ್ನ ಹಳೆ ಖದರ್ ತೋರಿಸಿದೆ.(PTI)
(7 / 8)
ಕಬಡ್ಡಿಯಲ್ಲಿ ಚಿನ್ನ ಗೆದ್ದ ಬಳಿಕ ಒಟ್ಟು ನೂರು ಪದಕಗಳೊಂದಿಗೆ ಭಾರತವು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಜ್ಬೇಕಿಸ್ತಾನ್ ಐದನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.(PTI)
ಇತರ ಗ್ಯಾಲರಿಗಳು