ಜೇಮ್ಸ್ ಆಂಡರ್ಸನ್ ಟು ಫಾಫ್ ಡು ಪ್ಲೆಸಿಸ್; ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಹಿರಿಯ ಆಟಗಾರರ ಪಟ್ಟಿ ಇದು
- IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ 574 ಆಟಗಾರರ ಪೈಕಿ ಅತ್ಯಂತ ಹಿರಿಯ ಆಟಗಾರರು ಪಟ್ಟಿ ಇಲ್ಲಿದೆ ನೋಡಿ.
- IPL 2025 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ 2025 ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ 574 ಆಟಗಾರರ ಪೈಕಿ ಅತ್ಯಂತ ಹಿರಿಯ ಆಟಗಾರರು ಪಟ್ಟಿ ಇಲ್ಲಿದೆ ನೋಡಿ.
(1 / 7)
ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಒಟ್ಟು 22 ಸ್ಲಾಟ್ಗಳಲ್ಲಿ 574 ಆಟಗಾರರಿದ್ದಾರೆ. ಯುವ ಆಟಗಾರರು ಮತ್ತು ಅನುಭವಿ ಆಟಗಾರರು ಪಟ್ಟಿಯಲ್ಲಿದ್ದಾರೆ. ಈ ಪೈಕಿ ಅತ್ಯಂತ ಹಿರಿಯ ಆಟಗಾರರು ಯಾರು ಎಂಬುದನ್ನು ಮುಂದೆ ನೋಡೋಣ.
(2 / 7)
ವಿಶ್ವ ಶ್ರೇಷ್ಠ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತನ್ನ 42ನೇ ವಯಸ್ಸಿನಲ್ಲಿ ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ಸ್ವಿಂಗ್ ಕಿಂಗ್ ಮೂಲ ಬೆಲೆ 1.25 ಕೋಟಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಸಕ್ತ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
(3 / 7)
ಇಂಗ್ಲೆಂಡ್ ತಂಡದ ಆಲ್ರೌಂಡರ್ ಜೇಮೀ ಓವರ್ಟನ್ ಅವರು 41ನೇ ವಯಸ್ಸಿನಲ್ಲಿ ಹರಾಜಿಗೆ ಪ್ರವೇಶಿಸಿದ್ದಾರೆ. ಮೂಲ ಬೆಲೆ 1.50 ಕೋಟಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮೆಗಾ ಆ್ಯಕ್ಷನ್ನಲ್ಲಿ ಪಾಲ್ಗೊಳ್ಳುತ್ತಿರುವ ಎರಡನೇ ಹಿರಿಯ ಆಟಗಾರ ಎನಿಸಿದ್ದಾರೆ.
(4 / 7)
ಆರ್ಸಿಬಿ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು 40ನೇ ವರ್ಷದಲ್ಲಿ ಹರಾಜಿಗೆ ಪಾಲ್ಗೊಳ್ಳುತ್ತಿದ್ದಾರೆ. ಅವರ ಮೂಲ ಬೆಲೆ 2 ಕೋಟಿ. ದಕ್ಷಿಣ ಆಫ್ರಿಕಾದ ಆಟಗಾರ ಸ್ಥಿರ ಪ್ರದರ್ಶನ, ನಾಯಕತ್ವದ ಕೌಶಲ್ಯದೊಂದಿಗೆ, ಡು ಪ್ಲೆಸಿಸ್ ಟಿ20ಯಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ.
(5 / 7)
ಅಫ್ಘಾನಿಸ್ತಾನ ತಂಡದ ಮೊಹಮ್ಮದ್ ನಬಿ ತಮ್ಮ 40ನೇ ವಯಸ್ಸಿನಲ್ಲಿ ಹರಾಜು ಪೂಲ್ಗೆ ಬಂದಿದ್ದು, ಮತ್ತೊಂದು ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿನ ಪ್ರದರ್ಶನ ನೀಡಿರುವ ನಬಿ ಅವರ ಮೂಲ ಬೆಲೆ 1.5 ಕೋಟಿ. ಕಳೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
(6 / 7)
ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡದ ಡೇವಿಡ್ ವಾರ್ನರ್ ಅವರಿಗೆ 38 ವರ್ಷ. ಪ್ರಸ್ತುತ 2 ಕೋಟಿ ಮೂಲ ಬೆಲೆ ಹೊಂದಿರುವ ಅವರು ಕಳೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ವಾರ್ನರ್ ಸತತವಾಗಿ ಲೀಗ್‌ನಲ್ಲಿ ಅಗ್ರ ರನ್ ಗಳಿಸಿದ ಬ್ಯಾಟರ್‌ಗಳಲ್ಲಿ ಒಬ್ಬರು.
ಇತರ ಗ್ಯಾಲರಿಗಳು