17ನೇ ಆವೃತ್ತಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಐವರಿಗೆ ಮಣೆ ಹಾಕಿದ SRH; ಈತನಿಗೆ 23 ಕೋಟಿ ಕೊಟ್ಟ ಆರೆಂಜ್ ಆರ್ಮಿ!
- Sunrisers Hyderabad: ಸನ್ರೈಸರ್ಸ್ ಹೈದರಾಬಾದ್ ತನ್ನ ಅಗ್ರ 5 ಆಟಗಾರರನ್ನು ನಿರೀಕ್ಷೆಯಂತೆ ಉಳಿಸಿಕೊಂಡಿದೆ. ನಾಯಕ ಪ್ಯಾಟ್ ಕಮಿನ್ಸ್ ಹೊರತುಪಡಿಸಿ, ಹಿಟ್ಟರ್ ಹೆನ್ರಿಚ್ ಕ್ಲಾಸೆನ್ಗೆ 23 ಕೋಟಿ ರೂಪಾಯಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
- Sunrisers Hyderabad: ಸನ್ರೈಸರ್ಸ್ ಹೈದರಾಬಾದ್ ತನ್ನ ಅಗ್ರ 5 ಆಟಗಾರರನ್ನು ನಿರೀಕ್ಷೆಯಂತೆ ಉಳಿಸಿಕೊಂಡಿದೆ. ನಾಯಕ ಪ್ಯಾಟ್ ಕಮಿನ್ಸ್ ಹೊರತುಪಡಿಸಿ, ಹಿಟ್ಟರ್ ಹೆನ್ರಿಚ್ ಕ್ಲಾಸೆನ್ಗೆ 23 ಕೋಟಿ ರೂಪಾಯಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
(1 / 6)
ಐಪಿಎಲ್ 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್, ಹೆನ್ರಿಕ್ ಕ್ಲಾಸೆನ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಐದು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ.
(2 / 6)
ಆದರೆ, ಉಳಿಸಿಕೊಂಡ ಆಟಗಾರರ ಪೈಕಿ ನಾಯಕ ಪ್ಯಾಟ್ ಕಮಿನ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಚ್ ಕ್ಲಾಸೆನ್ಗೆ ಅತಿ ಹೆಚ್ಚು ಮೊತ್ತ ಪಾವತಿಸಿದೆ. ಬರೋಬ್ಬರಿ 23 ಕೋಟಿ ರೂಪಾಯಿ ನೀಡಿ ಕ್ಲಾಸೆನ್ ಉಳಿಸಿಕೊಂಡಿದೆ. ಐಪಿಎಲ್ ಇತಿಹಾಸದಲ್ಲೇ ರಿಟೇನ್ ಪಡೆದ ಆಟಗಾರರಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(3 / 6)
ಕಳೆದ ಮಿನಿ ಹರಾಜಿನಲ್ಲಿ 20 ಕೋಟಿ ಪಡೆದುಕೊಂಡಿದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಈ ಬಾರಿ 18 ಕೋಟಿ ನೀಡಿ ಉಳಿಸಿಕೊಂಡಿದೆ.
(4 / 6)
ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 14 ಕೋಟಿ ರೂಪಾಯಿ ಪಡೆದು ಆರೆಂಜ್ ಆರ್ಮಿಯಲ್ಲೇ ಉಳಿದುಕೊಂಡಿದ್ದಾರೆ. ಕಳೆದ ಬಾರಿ ಟ್ರಾವಿಸ್ ಹೆಡ್ ಸುನಾಮಿ ಬ್ಯಾಟಿಂಗ್ ನಡೆಸಿದ್ದರು.
(5 / 6)
ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರನ್ನು 14 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಹಿನ್ನೆಲೆ ಭಾರತ ತಂಡದಲ್ಲೂ ಸ್ಥಾನ ದೊರೆತಿದೆ.
ಇತರ ಗ್ಯಾಲರಿಗಳು