5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; SENA ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; Sena ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ

5 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ; SENA ರಾಷ್ಟ್ರಗಳಲ್ಲಿ ಅಪರೂಪದ ಸಾಧನೆ

  • ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾವನ್ನು 104 ರನ್‌ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಬಳಿಕ ಭಾರತ ತಂಡ 46 ರನ್‌ಗಳ ಮುನ್ನಡೆ ಸಾಧಿಸಿದೆ. ಟೀಮ್‌ ಇಂಡಿಯಾ ನಾಯಕ ಜಸ್ಪ್ರೀತ್‌ ಬುಮ್ರಾ 5 ವಿಕೆಟ್‌ ಸಾಧನೆಯೊಂದಿಗೆ ಕಪಿಲ್‌ ದೇವ್ ದಾಖಲೆ ಸರಿಗಟ್ಟಿದ್ದಾರೆ.

ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ಭಾರತ, ಆ ಬಳಿಕ ಬೌಲಿಂಗ್‌ನಲ್ಲಿ ಅಬ್ಬರಿಸಿತು. ತಂಡ ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸ್ಟ್ಯಾಂಡ್-ಇನ್ ನಾಯಕ ಬುಮ್ರಾ, ತಂಡದ ನಿರ್ಭೀತ ಆಟಕ್ಕೆ ಮುನ್ನುಡಿ ಬರೆದರು.
icon

(1 / 8)

ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದ ಭಾರತ, ಆ ಬಳಿಕ ಬೌಲಿಂಗ್‌ನಲ್ಲಿ ಅಬ್ಬರಿಸಿತು. ತಂಡ ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಸ್ಟ್ಯಾಂಡ್-ಇನ್ ನಾಯಕ ಬುಮ್ರಾ, ತಂಡದ ನಿರ್ಭೀತ ಆಟಕ್ಕೆ ಮುನ್ನುಡಿ ಬರೆದರು.(AFP)

ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ 104 ರನ್‌ಗಳಿಗೆ ಆಲೌಟ್ ಆಯ್ತು. ದಿನದ ಎರಡನೇ ಓವರ್‌ನಲ್ಲೇ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರ ವಿಕೆಟ್‌ ಪಡೆಯುವ ಮೂಲಕ ಐದು ವಿಕೆಟ್‌ ಗೊಂಚಲನ್ನು ಪೂರ್ಣಗೊಳಿಸಿದರು.
icon

(2 / 8)

ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌, ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ 104 ರನ್‌ಗಳಿಗೆ ಆಲೌಟ್ ಆಯ್ತು. ದಿನದ ಎರಡನೇ ಓವರ್‌ನಲ್ಲೇ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರ ವಿಕೆಟ್‌ ಪಡೆಯುವ ಮೂಲಕ ಐದು ವಿಕೆಟ್‌ ಗೊಂಚಲನ್ನು ಪೂರ್ಣಗೊಳಿಸಿದರು.(AFP)

2ನೇ ದಿನದಾಟದ ಅಂತ್ಯಕ್ಕೆ ಬುಮ್ರಾ 5 ವಿಕೆಟ್ ಕಬಳಿಸುವ ಮೂಲಕ 11ನೇ ಬಾರಿ 5 ವಿಕೆಟ್ ಸಾಧನೆ ಮಾಡಿದರು. 30 ರನ್‌ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ ಕಬಳಿಸಿದರು. ಇದು ಸೇನಾ ದೇಶಗಳಲ್ಲಿ ಬುಮ್ರಾ ಅವರ 7ನೇ ಐದು ವಿಕೆಟ್ ಸಾಧನೆಯಾಗಿದೆ. ಇದರೊಂದಿಗೆ ಭಾರತದ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಬಾರಿ 5 ವಿಕೆಟ್ ಸಾಧನೆ ಮಾಡಿದ ಭಾರತೀಯ ಬೌಲರ್ ಆಗಿದ್ದಾರೆ.
icon

(3 / 8)

2ನೇ ದಿನದಾಟದ ಅಂತ್ಯಕ್ಕೆ ಬುಮ್ರಾ 5 ವಿಕೆಟ್ ಕಬಳಿಸುವ ಮೂಲಕ 11ನೇ ಬಾರಿ 5 ವಿಕೆಟ್ ಸಾಧನೆ ಮಾಡಿದರು. 30 ರನ್‌ ಬಿಟ್ಟುಕೊಟ್ಟು 5 ಪ್ರಮುಖ ವಿಕೆಟ್‌ ಕಬಳಿಸಿದರು. ಇದು ಸೇನಾ ದೇಶಗಳಲ್ಲಿ ಬುಮ್ರಾ ಅವರ 7ನೇ ಐದು ವಿಕೆಟ್ ಸಾಧನೆಯಾಗಿದೆ. ಇದರೊಂದಿಗೆ ಭಾರತದ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಬಾರಿ 5 ವಿಕೆಟ್ ಸಾಧನೆ ಮಾಡಿದ ಭಾರತೀಯ ಬೌಲರ್ ಆಗಿದ್ದಾರೆ.(Ritik Jain)

ಕುತೂಹಲಕಾರಿ ಸಂಗತಿಯೆಂದರೆ, ಆರು ವರ್ಷಗಳ ಹಿಂದೆ ಬುಮ್ರಾ ಪರ್ತ್‌ನಲ್ಲೇ ಕೊನೆಯ ಬಾರಿಗೆ ಆಡಿದಾಗ ಆರು ವಿಕೆಟ್ ಸಾಧನೆ ಆಡಿದ್ದರು. ಅಲ್ಲದೆ  ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.
icon

(4 / 8)

ಕುತೂಹಲಕಾರಿ ಸಂಗತಿಯೆಂದರೆ, ಆರು ವರ್ಷಗಳ ಹಿಂದೆ ಬುಮ್ರಾ ಪರ್ತ್‌ನಲ್ಲೇ ಕೊನೆಯ ಬಾರಿಗೆ ಆಡಿದಾಗ ಆರು ವಿಕೆಟ್ ಸಾಧನೆ ಆಡಿದ್ದರು. ಅಲ್ಲದೆ  ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.(AFP)

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ತುಸು ಪ್ರತಿರೋಧ ಒಡ್ಡಿದರು. ಸ್ಟಾರ್ಕ್ 112 ಎಸೆತಗಳಲ್ಲಿ 26 ರನ್ ಗಳಿಸಿ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಹರ್ಷಿತ್‌ ರಾಣಾ ಅವರ ಆಟಕ್ಕೆ ಬ್ರೇಕ್‌ ಹಾಕಿದರು. ಪದಾರ್ಪಣೆ ಪಂದ್ಯದಲ್ಲೇ ರಾಣಾ 3 ವಿಕೆಟ್‌ ಕಬಳಿಸಿದರು.
icon

(5 / 8)

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ತುಸು ಪ್ರತಿರೋಧ ಒಡ್ಡಿದರು. ಸ್ಟಾರ್ಕ್ 112 ಎಸೆತಗಳಲ್ಲಿ 26 ರನ್ ಗಳಿಸಿ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಹರ್ಷಿತ್‌ ರಾಣಾ ಅವರ ಆಟಕ್ಕೆ ಬ್ರೇಕ್‌ ಹಾಕಿದರು. ಪದಾರ್ಪಣೆ ಪಂದ್ಯದಲ್ಲೇ ರಾಣಾ 3 ವಿಕೆಟ್‌ ಕಬಳಿಸಿದರು.(AFP)

104 ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ಆಸ್ಟ್ರೇಲಿಯಾ 2000ರ ನಂತರ ಕಳಪೆ ದಾಖಲೆ ಬರೆದಿದೆ. 24 ವರ್ಷಗಳ ಬಳಿಕ ಟೆಸ್ಟ್​ನ ಇನ್ನಿಂಗ್ಸ್​ವೊಂದರಲ್ಲಿ ಮೂರನೇ ಬಾರಿಗೆ ಕಡಿಮೆ ಮೊತ್ತವನ್ನು ದಾಖಲಿಸಿದೆ.
icon

(6 / 8)

104 ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ಆಸ್ಟ್ರೇಲಿಯಾ 2000ರ ನಂತರ ಕಳಪೆ ದಾಖಲೆ ಬರೆದಿದೆ. 24 ವರ್ಷಗಳ ಬಳಿಕ ಟೆಸ್ಟ್​ನ ಇನ್ನಿಂಗ್ಸ್​ವೊಂದರಲ್ಲಿ ಮೂರನೇ ಬಾರಿಗೆ ಕಡಿಮೆ ಮೊತ್ತವನ್ನು ದಾಖಲಿಸಿದೆ.(AP)

ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 150 ರನ್‌ಗಳಿಗೆ ಆಲೌಟ್ ಆಯ್ತು. ಆ ಬಳಿಕ ಆಸೀಸ್‌ ಕೂಡಾ 67ಕ್ಕೆ 7 ವಿಕೆಟ್‌ ಕಳೆದುಕೊಂಡಿತು. ಮೊದಲ ದಿನದಂದು ಆಟವು ಅನಿರೀಕ್ಷಿತ ತಿರುವು ಪಡೆಯಿತು. ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 17 ವಿಕೆಟ್‌ಗಳು ಪತನಗೊಂಡವು.
icon

(7 / 8)

ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 150 ರನ್‌ಗಳಿಗೆ ಆಲೌಟ್ ಆಯ್ತು. ಆ ಬಳಿಕ ಆಸೀಸ್‌ ಕೂಡಾ 67ಕ್ಕೆ 7 ವಿಕೆಟ್‌ ಕಳೆದುಕೊಂಡಿತು. ಮೊದಲ ದಿನದಂದು ಆಟವು ಅನಿರೀಕ್ಷಿತ ತಿರುವು ಪಡೆಯಿತು. ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 17 ವಿಕೆಟ್‌ಗಳು ಪತನಗೊಂಡವು.(AFP)

ಸದ್ಯ ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಬಳಿಕ ಭಾರತ ತಂಡ 46 ರನ್‌​ಗಳ ಮುನ್ನಡೆ ಪಡೆದಿದೆ.
icon

(8 / 8)

ಸದ್ಯ ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಬಳಿಕ ಭಾರತ ತಂಡ 46 ರನ್‌​ಗಳ ಮುನ್ನಡೆ ಪಡೆದಿದೆ.(AFP)


ಇತರ ಗ್ಯಾಲರಿಗಳು