ಜಸ್ಪ್ರೀತ್ ಬುಮ್ರಾ ಔಟ್, ಕೆಎಲ್ ರಾಹುಲ್ ರಿಟರ್ನ್; ನ್ಯೂಜಿಲೆಂಡ್ 3ನೇ ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಸ್ಪ್ರೀತ್ ಬುಮ್ರಾ ಔಟ್, ಕೆಎಲ್ ರಾಹುಲ್ ರಿಟರ್ನ್; ನ್ಯೂಜಿಲೆಂಡ್ 3ನೇ ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11

ಜಸ್ಪ್ರೀತ್ ಬುಮ್ರಾ ಔಟ್, ಕೆಎಲ್ ರಾಹುಲ್ ರಿಟರ್ನ್; ನ್ಯೂಜಿಲೆಂಡ್ 3ನೇ ಟೆಸ್ಟ್​ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11

  • India playing XI: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿರುವ ಟೀಮ್ ಇಂಡಿಯಾ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಗೆದ್ದು ವೈಟ್​ವಾಶ್ ಮುಖಭಂಗದಿಂದ ಪಾರಾಗಲು ಸಜ್ಜಾಗಿದೆ. ಹೀಗಾಗಿ ಕೆಲವೊಂದು ಬದಲಾವಣೆ ನಿರೀಕ್ಷೆ ಮಾಡಲಾಗಿದೆ.

ಟೀಮ್ ಇಂಡಿಯಾ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. 2012ರಲ್ಲಿ ಕೊನೆಯದಾಗಿ ಭಾರತ ಸೋತಿತ್ತು. ಅಂದಿನಿಂದ ಸತತ 18 ಟೆಸ್ಟ್​ ಸರಣಿಗಳನ್ನು ಗೆದ್ದಿದ್ದ ರೋಹಿತ್ ಪಡೆ, 19ನೇ ಟೆಸ್ಟ್ ಸಿರೀಸ್ ಅನ್ನು ಕಳೆದುಕೊಂಡಿದೆ. ಒಂದು ಪಂದ್ಯ ಬಾಕಿ ಇರುವಂತೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಆ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.
icon

(1 / 9)

ಟೀಮ್ ಇಂಡಿಯಾ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. 2012ರಲ್ಲಿ ಕೊನೆಯದಾಗಿ ಭಾರತ ಸೋತಿತ್ತು. ಅಂದಿನಿಂದ ಸತತ 18 ಟೆಸ್ಟ್​ ಸರಣಿಗಳನ್ನು ಗೆದ್ದಿದ್ದ ರೋಹಿತ್ ಪಡೆ, 19ನೇ ಟೆಸ್ಟ್ ಸಿರೀಸ್ ಅನ್ನು ಕಳೆದುಕೊಂಡಿದೆ. ಒಂದು ಪಂದ್ಯ ಬಾಕಿ ಇರುವಂತೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಆ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.(AFP)

ಇದೀಗ ಕೊನೆಯ ಪಂದ್ಯವು ನವೆಂಬರ್ 1 ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ವೈಟ್​ವಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಇದ್ದರೆ, ಮತ್ತೊಂದೆಡೆ ಭಾರತ, ವೈಟ್​ವಾಶ್ ಮುಖಭಂಗದಿಂದ ಪಾರಾಗುವ ಯೋಜನೆ ಹಾಕಿಕೊಂಡಿದೆ. ಕೊನೆ ಟೆಸ್ಟ್​​ನಲ್ಲಿ ಜಯಿಸಿ ತವರಿನಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿದೆ.
icon

(2 / 9)

ಇದೀಗ ಕೊನೆಯ ಪಂದ್ಯವು ನವೆಂಬರ್ 1 ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ವೈಟ್​ವಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ಇದ್ದರೆ, ಮತ್ತೊಂದೆಡೆ ಭಾರತ, ವೈಟ್​ವಾಶ್ ಮುಖಭಂಗದಿಂದ ಪಾರಾಗುವ ಯೋಜನೆ ಹಾಕಿಕೊಂಡಿದೆ. ಕೊನೆ ಟೆಸ್ಟ್​​ನಲ್ಲಿ ಜಯಿಸಿ ತವರಿನಲ್ಲಿ ಮರ್ಯಾದೆ ಉಳಿಸಿಕೊಳ್ಳಲು ಟೀಮ್ ಇಂಡಿಯಾ ಸಜ್ಜಾಗಿದೆ.(AFP)

ಈ ಗೆಲುವು ಕೇವಲ ಮುಖಭಂಗದಿಂದ ಪಾರಾಗುವುದಕ್ಕೆ ಮಾತ್ರವಲ್ಲ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಲು ಸಹ ಅತೀ ಮುಖ್ಯವಾಗಿದೆ. ಆದರೆ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ತರಲು ಟೀಮ್ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​ ಗವಾಸ್ಕರ್ ಟ್ರೋಫಿಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಹಾಗಾದರೆ 3ನೇ ಟೆಸ್ಟ್​ಗೆ ಅವಕಾಶ ಪಡೆಯುವ ಆಟಗಾರರು ಯಾರು? ಇಲ್ಲಿದೆ ವಿವರ.
icon

(3 / 9)

ಈ ಗೆಲುವು ಕೇವಲ ಮುಖಭಂಗದಿಂದ ಪಾರಾಗುವುದಕ್ಕೆ ಮಾತ್ರವಲ್ಲ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಲು ಸಹ ಅತೀ ಮುಖ್ಯವಾಗಿದೆ. ಆದರೆ ಕೊನೆಯ ಪಂದ್ಯದಲ್ಲಿ ತಂಡದಲ್ಲಿ ಬದಲಾವಣೆ ತರಲು ಟೀಮ್ ಮ್ಯಾನೇಜ್​ಮೆಂಟ್ ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​ ಗವಾಸ್ಕರ್ ಟ್ರೋಫಿಗಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಹಾಗಾದರೆ 3ನೇ ಟೆಸ್ಟ್​ಗೆ ಅವಕಾಶ ಪಡೆಯುವ ಆಟಗಾರರು ಯಾರು? ಇಲ್ಲಿದೆ ವಿವರ.(AFP)

ಜಸ್ಪ್ರೀತ್ ಬುಮ್ರಾ ಸತತ 4 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಆಸೀಸ್ ದೊಡ್ಡ ಪ್ರವಾಸಕ್ಕೂ ಮೊದಲು ಕೆಲಸದ ಹೊರೆ ಇಳಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಕ್ಕೆ ಕ್ರಿಕೆಟ್ ತಜ್ಞರು ಟೀಕಿಸಿದ್ದಾರೆ. ಸರಣಿಗೂ ಮುನ್ನ 20 ದಿನಗಳ ಕಾಲ ಸಮಯ ವಿಶ್ರಾಂತಿ ಸಿಗುತ್ತದೆ. ಈ ಪಂದ್ಯಕ್ಕೆ ವಿಶ್ರಾಂತಿ ಪಡೆಯುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
icon

(4 / 9)

ಜಸ್ಪ್ರೀತ್ ಬುಮ್ರಾ ಸತತ 4 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಆಸೀಸ್ ದೊಡ್ಡ ಪ್ರವಾಸಕ್ಕೂ ಮೊದಲು ಕೆಲಸದ ಹೊರೆ ಇಳಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಕ್ಕೆ ಕ್ರಿಕೆಟ್ ತಜ್ಞರು ಟೀಕಿಸಿದ್ದಾರೆ. ಸರಣಿಗೂ ಮುನ್ನ 20 ದಿನಗಳ ಕಾಲ ಸಮಯ ವಿಶ್ರಾಂತಿ ಸಿಗುತ್ತದೆ. ಈ ಪಂದ್ಯಕ್ಕೆ ವಿಶ್ರಾಂತಿ ಪಡೆಯುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.(PTI)

ಬಾರ್ಡರ್​ ಗವಾಸ್ಕರ್ ಟ್ರೋಫಿ ನವೆಂಬರ್ 22ರಿಂದ ಆರಂಭವಾಗಲಿದೆ. ಇನ್ನು ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದೆ. ಆದರೆ ಪುಣೆ ಟೆಸ್ಟ್​​ಗೆ ಸಿರಾಜ್​ ಸ್ಥಾನ ಕಳೆದುಕೊಂಡಿದ್ದರು. ಮೂರನೇ ಟೆಸ್ಟ್​​ಗೂ ಆಕಾಶ್ ದೀಪ್ ತನ್ನ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
icon

(5 / 9)

ಬಾರ್ಡರ್​ ಗವಾಸ್ಕರ್ ಟ್ರೋಫಿ ನವೆಂಬರ್ 22ರಿಂದ ಆರಂಭವಾಗಲಿದೆ. ಇನ್ನು ಬುಮ್ರಾಗೆ ವಿಶ್ರಾಂತಿ ನೀಡಿದರೆ, ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಮರಳುವ ಸಾಧ್ಯತೆ ಇದೆ. ಆದರೆ ಪುಣೆ ಟೆಸ್ಟ್​​ಗೆ ಸಿರಾಜ್​ ಸ್ಥಾನ ಕಳೆದುಕೊಂಡಿದ್ದರು. ಮೂರನೇ ಟೆಸ್ಟ್​​ಗೂ ಆಕಾಶ್ ದೀಪ್ ತನ್ನ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.(AP)

2ನೇ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಆಕರ್ಷಕ ಪ್ರದರ್ಶನದ ನಂತರ ಅಕ್ಷರ್ ಪಟೇಲ್ ಅಥವಾ ಕುಲ್ದೀಪ್​ ಯಾದವ್‌ಗೆ ಯಾವುದೇ ಸ್ಥಾನ ಸಿಗುವ ಸಾಧ್ಯತೆಯಿಲ್ಲ. ಮುಂಬೈನ ಕೆಂಪು ಮಣ್ಣಿನ ಪಿಚ್ ಎತ್ತರದ ಆಫ್ ಸ್ಪಿನ್ನರ್‌ಗೆ ನೆರವು ನೀಡಲಿದೆ. ರಿಷಭ್​ ಪಂತ್ ಅವರು ಬೆಂಗಳೂರು ಟೆಸ್ಟ್‌ನಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಪುಣೆ ಟೆಸ್ಟ್​​ನಲ್ಲೂ ಕುಂಟುತ್ತಾ ಇದ್ದದ್ದು ಕಂಡು ಬಂತು.
icon

(6 / 9)

2ನೇ ಟೆಸ್ಟ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಆಕರ್ಷಕ ಪ್ರದರ್ಶನದ ನಂತರ ಅಕ್ಷರ್ ಪಟೇಲ್ ಅಥವಾ ಕುಲ್ದೀಪ್​ ಯಾದವ್‌ಗೆ ಯಾವುದೇ ಸ್ಥಾನ ಸಿಗುವ ಸಾಧ್ಯತೆಯಿಲ್ಲ. ಮುಂಬೈನ ಕೆಂಪು ಮಣ್ಣಿನ ಪಿಚ್ ಎತ್ತರದ ಆಫ್ ಸ್ಪಿನ್ನರ್‌ಗೆ ನೆರವು ನೀಡಲಿದೆ. ರಿಷಭ್​ ಪಂತ್ ಅವರು ಬೆಂಗಳೂರು ಟೆಸ್ಟ್‌ನಲ್ಲಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಪುಣೆ ಟೆಸ್ಟ್​​ನಲ್ಲೂ ಕುಂಟುತ್ತಾ ಇದ್ದದ್ದು ಕಂಡು ಬಂತು.(Surjeet Yadav)

ಹಾಗಾಗಿ ಪಂತ್​ಗೆ ವಿಶ್ರಾಂತಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಹೀಗಾಗಿ, ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಲು ಚರ್ಚೆಗಳು ನಡೆದಿವೆ. ಅಲ್ಲದೆ, ವಿಕೆಟ್ ಕೀಪರ್ ಆಗಿಯೂ ನಿಭಾಯಿಸುವ ಕೆಎಲ್​​ ರಾಹುಲ್​ಗೆ ಸ್ಥಾನ ಕಲ್ಪಿಸಲು ಚಿಂತನೆ ನಡೆಯುತ್ತಿದೆ. ಸತತ ವೈಫಲ್ಯಗಳ ನಂತರ ಬ್ಯಾಟಿಂಗ್ ಘಟಕದಲ್ಲಿ ಬದಲಾವಣೆ ತರಲು ಆಲೋಚನೆ ಮಾಡಿದ್ದರೂ ಭಾರತ ಅದೇ ತಂಡ ಉಳಿಸಿಕೊಳ್ಳಲು ಸಜ್ಜಾಗಿದೆ.
icon

(7 / 9)

ಹಾಗಾಗಿ ಪಂತ್​ಗೆ ವಿಶ್ರಾಂತಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ. ಹೀಗಾಗಿ, ಧ್ರುವ್ ಜುರೆಲ್ ಅವರಿಗೆ ಅವಕಾಶ ನೀಡಲು ಚರ್ಚೆಗಳು ನಡೆದಿವೆ. ಅಲ್ಲದೆ, ವಿಕೆಟ್ ಕೀಪರ್ ಆಗಿಯೂ ನಿಭಾಯಿಸುವ ಕೆಎಲ್​​ ರಾಹುಲ್​ಗೆ ಸ್ಥಾನ ಕಲ್ಪಿಸಲು ಚಿಂತನೆ ನಡೆಯುತ್ತಿದೆ. ಸತತ ವೈಫಲ್ಯಗಳ ನಂತರ ಬ್ಯಾಟಿಂಗ್ ಘಟಕದಲ್ಲಿ ಬದಲಾವಣೆ ತರಲು ಆಲೋಚನೆ ಮಾಡಿದ್ದರೂ ಭಾರತ ಅದೇ ತಂಡ ಉಳಿಸಿಕೊಳ್ಳಲು ಸಜ್ಜಾಗಿದೆ.(AFP)

ಸರ್ಫರಾಜ್ ಖಾನ್‌ಗೆ ಅವಕಾಶ ನೀಡುವ ಸಲುವಾಗಿ ಕೆಎಲ್ ರಾಹುಲ್​ ಅವರನ್ನು ಕೈಬಿಡುವಂತೆ ದಿಟ್ಟ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೀಗ ಕೆಎಲ್ ರಾಹುಲ್ ಮೂರನೇ ಟೆಸ್ಟ್​ಗೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಖಚಿತ. ಬುಮ್ರಾ ವಿರಾಮದೊಂದಿಗೆ ಒಂದು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಆದರೆ ಪಂತ್​ಗೆ ವಿಶ್ರಾಂತಿ ಅಗತ್ಯವಿದ್ದರೆ 2ನೇ ಬದಲಾವಣೆ ಸಾಧ್ಯತೆ ಇದೆ.
icon

(8 / 9)

ಸರ್ಫರಾಜ್ ಖಾನ್‌ಗೆ ಅವಕಾಶ ನೀಡುವ ಸಲುವಾಗಿ ಕೆಎಲ್ ರಾಹುಲ್​ ಅವರನ್ನು ಕೈಬಿಡುವಂತೆ ದಿಟ್ಟ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೀಗ ಕೆಎಲ್ ರಾಹುಲ್ ಮೂರನೇ ಟೆಸ್ಟ್​ಗೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಖಚಿತ. ಬುಮ್ರಾ ವಿರಾಮದೊಂದಿಗೆ ಒಂದು ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಆದರೆ ಪಂತ್​ಗೆ ವಿಶ್ರಾಂತಿ ಅಗತ್ಯವಿದ್ದರೆ 2ನೇ ಬದಲಾವಣೆ ಸಾಧ್ಯತೆ ಇದೆ.(AFP)

ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
icon

(9 / 9)

ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.(AFP)


ಇತರ ಗ್ಯಾಲರಿಗಳು