Neeraj Chopra: ಗಗನಕ್ಕೇರಿದ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ; ಕ್ರಿಕೆಟ್ ಬಿಟ್ಟರೆ ಉಳಿದ ಕ್ರೀಡೆಗಳಿಗೆ ಈತನೇ ಕಿಂಗ್
- Neeraj Chopra: ಟೊಕಿಯೊದಲ್ಲಿ ಚಿನ್ನ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ವ್ಯಾಲ್ಯೂ ದುಪ್ಪಟ್ಟಾಗಿದೆ.
- Neeraj Chopra: ಟೊಕಿಯೊದಲ್ಲಿ ಚಿನ್ನ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಭಾರತದ ಸ್ಟಾರ್ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ವ್ಯಾಲ್ಯೂ ದುಪ್ಪಟ್ಟಾಗಿದೆ.
(1 / 10)
ಪ್ಯಾರಿಸ್ ಒಲಿಂಪಿಕ್ಸ್-2024ನಲ್ಲಿ ಭಾರತ ಚಿನ್ನದ ಪದಕ ಗೆದ್ದಿಲ್ಲ. ನಿರೀಕ್ಷೆ ಮೂಡಿಸಿದ್ದವರೂ ನಿರಾಸೆ ಮೂಡಿಸಿದರು. ಅದಾಗ್ಯೂ ನೀರಜ್ ಚೋಪ್ರಾ ಭಾರತೀಯ ಕ್ರೀಡಾಭಿಮಾನಿಗಳನ್ನು ನಿರಾಶೆಗೊಳಿಸಿಲ್ಲ.
(2 / 10)
2020ರ ಟೊಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈ ಬಾರಿಯ ಪ್ಯಾರಿಸ್ನಲ್ಲಿ ಬೆಳ್ಳಿ ಗೆದ್ದರು. ಆ ಮೂಲಕ ಸತತ ಎರಡು ಒಲಿಂಪಿಕ್ಸ್ನಲ್ಲೂ ವೈಯಕ್ತಿಕ ಪದಕ ಜಯಿಸಿದ ದಾಖಲೆ ಬರೆದರು.
(3 / 10)
ಸತತ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕಿದ ನೀರಜ್ ಚೋಪ್ರಾ ತನ್ನ ಬ್ರ್ಯಾಂಡ್ ಮೌಲ್ಯವನ್ನು ಆಗಾಧವಾಗಿ ಏರಿಸಿಕೊಂಡಿದ್ದಾರೆ. ಸ್ಟಾರ್ ಜಾವೆಲಿನ್ ಪಟು ಬ್ರ್ಯಾಂಡ್ ಮೌಲ್ಯವು ಆಕಾಶ ಮುಟ್ಟಿದೆ.
(4 / 10)
ನೀರಜ್ ಅವರ ಪ್ರಸ್ತುತ ಬ್ರಾಂಡ್ ಮೌಲ್ಯವು ಸುಮಾರು 40 ಮಿಲಿಯನ್ ಡಾಲರ್ ತಲುಪಿದೆ. ಇದು ಶೇ 40ರಷ್ಟು ಹೆಚ್ಚಳ ಕಂಡಿದೆ. ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ ಅವರ ಬ್ರ್ಯಾಂಡ್ ಮೌಲ್ಯವು 30 ಮಿಲಿಯನ್ ಡಾಲರ್ಗಿಂತಲೂ ಕಡಿಮೆ ಇತ್ತು.
(5 / 10)
ಜಾಗತಿಕ ಹಣಕಾಸು ಸಲಹಾ ಸಂಸ್ಥೆ ಕ್ರೋಲ್ ವರದಿ ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ರಿಪೋರ್ಟ್ ಮಾಡಿದ್ದು, ನೀರಜ್ ಅವರ ಪ್ರಸ್ತುತ ಬ್ರಾಂಡ್ ಮೌಲ್ಯವು ಸುಮಾರು 335 ಕೋಟಿ ರೂಪಾಯಿ ದಾಟಿದೆ ಎಂದು ಹೇಳಿದೆ.
(6 / 10)
ಭಾರತದಲ್ಲಿ ಕ್ರಿಕೆಟಿಗರನ್ನು ಹೊರತುಪಡಿಸಿ ನೀರಜ್ ಅವರ ಬ್ರಾಂಡ್ ಮೌಲ್ಯವು ಭಾರತದ ಇತರ ಕ್ರೀಡಾಪಟುಗಳಿಗಿಂತ ಹೆಚ್ಚಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ವಿವಿಧ ಕಂಪನಿಗಳ ಜಾಹೀರಾತು ನೀರಜ್ ಡೇಟ್ಗಾಗಿ ಸಾಲುಗಟ್ಟಿವೆ.
(7 / 10)
ನೀರಜ್ ಬೆಳ್ಳಿ ಗೆದ್ದರೆ, ಪ್ಯಾರಿಸ್ ಒಲಿಂಪಿಕ್ಸ್ನ ಶೂಟಿಂಗ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರು. ತದನಂತರ ಮನು ಭಾಕರ್ ಸಹ ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
(8 / 10)
ಇದೀಗ ಮನು ಬ್ರ್ಯಾಂಡ್ ಮೌಲ್ಯದಲ್ಲೂ ಭರ್ಜರಿ ಏರಿಕೆಯಾಗಿದೆ. ಈ ಹಿಂದೆ ಲಕ್ಷಗಳಲ್ಲಿದ್ದ ಮೌಲ್ಯವು ಕೋಟಿಗಳಿಗೆ ಏರಿಕೆ ಕಂಡಿದೆ. ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನ 25 ಲಕ್ಷ ಇತ್ತು. ಇದೀಗ ಇದರ ಸಂಖ್ಯೆ 1.5 ಕೋಟಿಗೆ ತಲುಪಿದೆ.
(9 / 10)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲದಿದ್ದರೂ, ವಿನೇಶ್ ಫೋಗಾಟ್ ಅವರ ಬ್ರಾಂಡ್ ಮೌಲ್ಯದಲ್ಲೂ ಏರಿಕೆ ಕಾಣುತ್ತಿದೆ. ಮನುವಿನಂತೆ ಸ್ಟಾರ್ ಕುಸ್ತಿಪಟು ವರ್ಷಕ್ಕೆ ಪ್ರತಿ ಒಪ್ಪಂದಕ್ಕೆ 25 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ. ಈಗ ಆ ಸಂಖ್ಯೆ ಸುಮಾರು 1 ಕೋಟಿ ತಲುಪಿದೆ.
ಇತರ ಗ್ಯಾಲರಿಗಳು