ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ಹೊರಟಿವೆ ಕನ್ನಡ ಸಾರಿಗೆ ರಥಗಳು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲೂ ಕನ್ನಡ ಪ್ರೇಮಿ ಸಿಬ್ಬಂದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ಹೊರಟಿವೆ ಕನ್ನಡ ಸಾರಿಗೆ ರಥಗಳು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲೂ ಕನ್ನಡ ಪ್ರೇಮಿ ಸಿಬ್ಬಂದಿ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ಹೊರಟಿವೆ ಕನ್ನಡ ಸಾರಿಗೆ ರಥಗಳು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲೂ ಕನ್ನಡ ಪ್ರೇಮಿ ಸಿಬ್ಬಂದಿ

ಕರ್ನಾಟಕದಲ್ಲಿ ಕನ್ನಡ ರಾಜ್ಸೋತ್ಸವ ಸಡಗರ ನಿಂತಿಲ್ಲ. ಊರುಗಳ ನಡುವೆ ಸಂಚರಿಸಿ ರಾಯಭಾರಿಗಳಂತೆಯೇ ಕೆಲಸ ಮಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳು ಈ ಬಾರಿ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ  ರಥಗಳು ಗಮನ ಸೆಳೆಯುತ್ತಿವೆ. ಇದರ ಚಿತ್ರ ನೋಟ ಇಲ್ಲಿದೆ.

ಇದು ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸುವ ಕನ್ನಡ ರಥ. ಸತತ ಇಪ್ಪತ್ತು ವರ್ಷಗಳಿಂದ ಕನ್ನಡ ಪ್ರೇಮಿ ನಟರಾಜ್‌ ಅವರು ರೂಪಿಸುತ್ತಿರುವ ಬಸ್‌ ಹೀಗಿದೆ.
icon

(1 / 7)

ಬಲ ಬದಿಯಲ್ಲಿರುವ ಕಂಡಕ್ಟರ್‌ ನಟರಾಜ್‌ ಸ್ನೇಹಿತರೊಡನೆ ಸೇರಿಕೊಂಡು ಇಡೀ ಬಸ್‌ ಅನ್ನು ಕನ್ನಡ ಮಯ ಮಾಡಿ ಸಂಪೂರ್ಣ ಮಾಹಿತಿ ನೀಡುತ್ತಾರೆ. ಒಂದು ತಿಂಗಳು ಇದೇ ಅಲಂಕಾರದೊಂದಿಗೆ ಬಸ್‌ ಸಂಚರಿಸಲಿದೆ, ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ಸೊರಬಕ್ಕೆ ಈ ಬಸ್‌ ಸಂಚರಿಸಲಿದೆ.
icon

(2 / 7)

ಕರ್ನಾಟಕದ ಗಡಿನಾಡು ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ಪಟ್ಟಣದಿಂದ ಸಂಚರಿಸುವ ಕೆಎಸ್‌ಆರ್‌ಟಿಸಿ ವಿಶೇಷ ಅಲಂಕಾರ ಗಮನ ಸೆಳಯುತ್ತಿದೆ.
icon

(3 / 7)

ಡ್ರೈವರ್‌ ನಿಂಗಣ್ಣ ಹಾಗೂ ಕಂಡಕ್ಡರ್‌ ಬಂಗಾರಗುಂಡ ಅವರು ಕನ್ನಡಿಗರ ರಥವನ್ನು ರೂಪಿಸಿದ್ದು ಮೈಸೂರು ಹಾಗೂ ಎಚ್‌ಡಿಕೋಟೆ ನಡುವೆ ಸಂಚರಿಸಲಿದೆ.
icon

(4 / 7)

ಬೆಂಗಳೂರಿನಲ್ಲಿ ಯಶವಂತಪುರ ಹಾಗೂ ಕೆಂಗೇರಿ ನಡುವೆ ಸಂಚರಿಸುವ ಬಿಎಂಟಿಸಿ ಬಸ್‌ ಅನನು ಸರಳವಾಗಿ ಶೃಂಗರಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ.
icon

(5 / 7)

ಹಾವೇರಿ ಜಿಲ್ಲೆ ಹಿರೇಕೇರೂರಿನಿಂದ ವಿಜಯಪುರ, ತಿಕೋಟಾ ಮಾರ್ಗವಾಗಿ ಮಹಾರಾಷ್ಟ್ರದ ಗುಡ್ಡಾಪುರ ಧಾರ್ಮಿಕ ಕ್ಷೇತ್ರಕ್ಕೆ ತೆರಳುವ ಸಾರಿಗ್‌ ಬಸ್ ಕನ್ನಡಮಯವಾಗಿ ಕಂಡಿತು. ತಿಕೋಟಾಕ್ಕೆ ಬಸ್‌ ಬಂದಾಗ ಕನ್ನಡಪ್ರಿಯರು ಬರ ಮಾಡಿಕೊಂಡರು.
icon

(6 / 7)

ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಕೊಡಗಿನ ಸಿದ್ದಾಪುರ ಹಾಗೂ ವಿರಾಜಪೇಟೆಗೆ ಹೋಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ ವಿಶೇಷ ಅಲಂಕಾರದೊಂದಿಗೆ ಗಮನ ಸೆಳೆಯಿತು.
icon

(7 / 7)

ಇತರ ಗ್ಯಾಲರಿಗಳು