Kannada Serial TRP: ಚೇತರಿಸಿಕೊಂಡ ಸೀತಾ ರಾಮ, ಬಿಗ್‌ಬಾಸ್‌ಗೆ ಸಿಕ್ತು ಮತ್ತಷ್ಟು ಬೂಸ್ಟ್; ಹೀಗಿದೆ ವಾರದ TRP ಲೆಕ್ಕಾಚಾರ
- Kannada Serial TRP: ಬಿಗ್‌ಬಾಸ್ ಶುರುವಾಗಿ 8 ವಾರಗಳಾಗುತ್ತ ಬಂತು. ಅಂದಿನಿಂದ ವಾರದಿಂದ ವಾರಕ್ಕೆ ಹೊಸ ಮೈಲಿಗಲ್ಲನ್ನು ತಲುಪುತ್ತಲೇ ಸಾಗುತ್ತಿದೆ ಈ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ. ಟಾಪ್ ಧಾರಾವಾಹಿಗಳಿಗೂ ಟಕ್ಕರ್ ಕೊಡುತ್ತಲೇ, ವೀಕ್ಷಕರನ್ನು ವಾರದಿಂದ ವಾರಕ್ಕೆ ಹಿರಿದಾಗಿಸಿಕೊಳ್ಳುತ್ತಿದೆ. ಹಾಗಾದರೆ, ಈ ವಾರದ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರ ಹೇಗಿದೆ?

(1 / 11)
ಬಿಗ್ ಬಾಸ್ ಶುರುವಾದಾಗಿನಿಂದ ಕಿರುತೆರೆಯಲ್ಲಿ ಹೊಸ ಬದಲಾವಣೆಗಳಾಗಿವೆ. ಫಿಕ್ಷನ್ ಮತ್ತು ನಾನ್ ಫಿಕ್ಷನ್ ವಿಭಾಗದಲ್ಲಿ ಸಾಕಷ್ಟು ಏರಿಳಿತಗಳು ಕಂಡಿವೆ.
(2 / 11)
ಟಿಆರ್‌ಪಿ ವಿಚಾರದಲ್ಲಿ ವಾರದಿಂದ ವಾರಕ್ಕೆ ಬಿಗ್‌ಬಾಸ್ ಏರುಗತಿಯಲ್ಲಿ ಸಾಗುತ್ತಿದ್ದರೆ, ಸೀರಿಯಲ್‌ಗಳ ಅಂಕಿ ಅಂಶಗಳಲ್ಲಿ ಏರುಪೇರಾಗುತ್ತಿದೆ.
(3 / 11)
ಕಿಚ್ಚ ಸುದೀಪ್ ಮುನ್ನಡೆಸುವ ಬಿಗ್‌ಬಾಸ್ ಕಲರ್ಸ್ ಕನ್ನಡದಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ.
(4 / 11)
ಆ ಪೈಕಿ ಬಿಗ್‌ಬಾಸ್‌ನ ಒಂದು ವಾರದ ಅಂಕಿ ಅಂಶಗಳನ್ನು ನೋಡುವುದಾದರೆ, ಸೋಮವಾರದಿಂದ ಶುಕ್ರವಾರದ ವರೆಗೆ 7.4 ಟಿಆರ್‌ಪಿ ಪಡೆದರೆ, ಶನಿವಾರ 8.4 ಮತ್ತು ಭಾನುವಾರ 7.7 ಟಿಆರ್‌ಪಿ ಪಡೆದು ದಾಖಲೆ ಬರೆದಿದೆ.
(5 / 11)
ಸೀರಿಯಲ್‌ಗಳ ಪೈಕಿ ಶುರುವಾದಾಗಿನಿಂದ ಮೋಡಿ ಮಾಡುತ್ತಲೇ ಬಂದಿರುವ ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಸ್ಥಾನದಲ್ಲಿದೆ.
(6 / 11)
ಅದೇ ರೀತಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಸೀತಾ ರಾಮ ಸ್ಥಾನವನ್ನು ಕಸಿದುಕೊಂಡೇ ತಿಂಗಳ ಮೇಲಾಯ್ತು. ಅದರಂತೆ ಈ ಸೀರಿಯಲ್ ಎರಡನೇ ಸ್ಥಾನದಲ್ಲಿದೆ.
(7 / 11)
ಛಾಯಾ ಸಿಂಗ್, ರಾಜೇಶ ನಟರಂಗ ಜೋಡಿಯ ಅಮೃತಧಾರೆ ದಿನದಿಂದ ದಿನಕ್ಕೆ ನೋಡುಗರನ್ನು ಸೆಳೆಯುತ್ತಿದೆ. ಅದರಂತೆ ಈ ಸೀರಿಯಲ್ ಟಿಆರ್‌ಪಿಯಲ್ಲಿ ಮೂರನೇ ಸ್ಥಾನದಲ್ಲಿದೆ.
(8 / 11)
ಸುಧಾರಾಣಿ, ಅಜಿತ್ ಹಂದೆ ನಟಿಸುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಈ ವಾರ ಅಮೃತಧಾರೆ ಜತೆಗೆ ಮೂರನೇ ಸ್ಥಾನದಲ್ಲಿದೆ.
(10 / 11)
ಕಳೆದ ವಾರ ಟಾಪ್ ಐದರಿಂದ ಹಿಂದೆ ಸರಿದಿದ್ದ ಸೀತಾ ರಾಮ ಸೀರಿಯಲ್ ಈ ವಾರ ಟಾಪ್ ಐದರಲ್ಲಿದೆ. ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ಇತರ ಗ್ಯಾಲರಿಗಳು