Kannada Serial TRP: ಕಡಿಮೆಯಾಯ್ತು ಬಿಗ್‌ಬಾಸ್ ಖದರ್! ಟಿಆರ್‌ಪಿ ರೇಸ್‌ನಲ್ಲಿ ಯಾವ ಸೀರಿಯಲ್ ಮುಂದು?
- Kannada Serial TRP: ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಸೀರಿಯಲ್‌ಗಳ ಹೊಸ ಟಿಆರ್‌ಪಿ ಲೆಕ್ಕವೂ ಹೊರಬಿದ್ದಿದೆ. ಈ ಮೂಲಕ ಆರಂಭದಿಂದ ಅಬ್ಬರಿಸಿದ್ದ ಬಿಗ್‌ಬಾಸ್ ಕನ್ನಡ ಈ ವಾರ ಕೊಂಚ ಮುದುಡಿದೆ. ಇನ್ನುಳಿದಂತೆ ರೋಚಕತೆ ಹುಟ್ಟುಹಾಕಿದ್ದ ಸೀತಾ ರಾಮ ಇನ್ನೂ ಟಾಪ್ ಐದರಲ್ಲಿ ಕಾಣಿಸಿಕೊಂಡಿಲ್ಲ. ಯಾವ ಸೀರಿಯಲ್ ಯಾವ ಸ್ಥಾನದಲ್ಲಿವೆ? ಇಲ್ಲಿದೆ ಮಾಹಿತಿ.

(1 / 10)
ಟಿಆರ್‌ಪಿ ಲೆಕ್ಕಾಚಾರದಲ್ಲಿ ಬಿಗ್ ಬಾಸ್‌ಗೆ ಸಿಕ್ಕ ರೇಟಿಂಗ್ ಎಷ್ಟು? ಸೀರಿಯಲ್‌ಗಳ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ
(2 / 10)
ಮೊದಲ ಸ್ಥಾನದಲ್ಲಿಯೇ ಮುಂದುವರಿದ ಪುಟ್ಟಕ್ಕನ ಮಕ್ಕಳು. ಈ ವಾರ ಈ ಸೀರಿಯಲ್ 9.6 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿಯೇ ಭದ್ರವಾಗಿ ಮುಂದುವರಿಯುತ್ತಿದೆ.
(3 / 10)
ಎರಡನೇ ಸ್ಥಾನದಲ್ಲಿದ್ದ ಗಟ್ಟಿಮೇಳ ಸೀರಿಯಲ್, ತನ್ನ ಕೊನೇ ವಾರವನ್ನೂ ಅದೇ ಸ್ಥಾನದಲ್ಲಿಯೇ ಮುಗಿಸಿದೆ. 8.7 ರೇಟೀಂಗ್‌ನೊಂದಿಗೆ ತನ್ನ ಪ್ರಸಾರವನ್ನು ಮುಗಿಸಿಕೊಂಡಿದೆ.
(4 / 10)
ಅಮೃತಧಾರೆ ಸೀರಿಯಲ್ ದಿನೇ ದಿನೆ ಹೆಚ್ಚೆಚ್ಚು ನೋಡುಗರನ್ನು ಸಂಪಾದಿಸಿಕೊಳ್ಳುವ, ಈ ವಾರ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ. ಈ ಧಾರಾವಾಹಿ 8.0 ಟಿಆರ್‌ಪಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
(5 / 10)
ಜೀ ಕನ್ನಡದ ಮತ್ತೊಂದು ಧಾರಾವಾಹಿ ಶ್ರೀರಸ್ತು ಶುಭಮಸ್ತು ಸೀರಿಯಲ್ ನಾಲ್ಕನೇ ಸ್ಥಾನದಲ್ಲಿದೆ. ಈ ಧಾರಾವಾಹಿ 7.7 ರೇಟಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.
(6 / 10)
ಒಂದಷ್ಟು ರೋಚಕತೆ ಮೂಲಕ ಮಹಾ ತಿರುಗಳನ್ನು ಕಂಡ ಸೀತಾ ರಾಮ ಸೀರಿಯಲ್ ಮತ್ತೆ ಹಳೇ ಲಯದತ್ತ ಹೆಜ್ಜೆಹಾಕುತ್ತಿದೆ. 7.7 ರೇಟಿಂಗ್ ಮೂಲಕ ನಾಲ್ಕರಲ್ಲಿ ಪಾಲು ಪಡೆದುಕೊಂಡಿದೆ.
(7 / 10)
ಅದೇ ರೀತಿ ಸತ್ಯ ಸೀರಿಯಲ್‌ಗೂ ಒಳ್ಳೆಯ ನೋಡುಗರಿದ್ದಾರೆ. ಈ ಸೀರಿಯಲ್ ಈ ಬಾರಿ 7.4 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದೆ.
(8 / 10)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಸೀರಿಯಲ್ 7.3 ಟಿಆರ್‌ಪಿ ಪಡೆದುಕೊಂಡು ಆರನೇ ಸ್ಥಾನಕ್ಕೆ ಜಿಗಿದಿದೆ.
(9 / 10)
ಇನ್ನು ಭಾಗ್ಯಲಕ್ಷ್ಮೀ ಸೀರಿಯಲ್‌ನ ಏರಿಳಿತ ಕಾಣುತ್ತಿದೆ. ಈ ಸಲ ಏಳನೇ ಸ್ಥಾನದಲ್ಲಿದೆ. ಈ ಧಾರಾವಾಹಿ 6.6 ಟಿಆರ್‌ಪಿ ಪಡೆದುಕೊಂಡಿದೆ.
ಇತರ ಗ್ಯಾಲರಿಗಳು