ಕನ್ನಡ ಸುದ್ದಿ  /  Photo Gallery  /  Karnataka Election 2023 Who Is The Next Chief Minister Of Karnataka Here Is A Possible List Kannada News Prs

Who is Next CM of Karnataka: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ರೇಸ್​​ನಲ್ಲಿದ್ದಾರೆ ಪ್ರಮುಖ ನಾಯಕರು, ಸಂಭಾವ್ಯ ಪಟ್ಟಿ ನೋಡಿ

  • Next CM of Karnataka: ಕರ್ನಾಟಕ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ. ಮೂರು ಪಕ್ಷಗಳ ನಾಯಕರು, ಪೂರ್ಣ ಬಹುಮತಕ್ಕಾಗಿ ಭಾರಿ ಕಸರತ್ತು ನಡೆಸಿವೆ. ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ. ಇದರ ನಡುವೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್​​ 3 ಪಕ್ಷಗಳಲ್ಲೂ ಸಿಎಂ ಸ್ಥಾನಕ್ಕೆ ಪ್ರಮುಖರೇ ರೇಸ್​​ನಲ್ಲಿದ್ದಾರೆ. ಹಲವು ಚುನಾವಣೆಗೂ ಪೂರ್ವ ಹಲವು ಸಮೀಕ್ಷೆಗಳು ಅತಂತ್ರದ ಫಲಿತಾಂಶದ ಮುನ್ಸೂಚನೆ ನೀಡಿದೆ. ಇನ್ನೊಂದು ವಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ? ಯಾರು ಸಿಎಂ ಆಗುತ್ತಾರೆ ಎಂಬುದರ ಕುರಿತು ಎಲ್ಲವೂ ಗೊತ್ತಾಗಲಿದೆ.
icon

(1 / 6)

ಲಿಂಗಾಯತ ಸಮುದಾಯದ ಮಾಸ್​ ಲೀಡರ್​​​​ BS ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಹಲವರು, ಈ ಸ್ಥಾನಕ್ಕಾಗಿ ಸಖತ್​​ ಪೈಪೋಟಿ ನಡೆಸುತ್ತಿದ್ದಾರೆ. ಪ್ರಮುಖ ನಾಯಕರೇ, ಈ ರೇಸ್​ನಲ್ಲಿರುವುದು ವಿಶೇಷ. ಪ್ರಮುಖ ನಾಯಕರು ಮುಖ್ಯಮಂತ್ರಿ ಆಗುವ ಆಸೆಯನ್ನ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರ ನಿಕಟ ಸಂಬಂಧ ಹೊಂದಿದ್ದಾರೆ.
icon

(2 / 6)

ಬಸವರಾಜ್​ ಬೊಮ್ಮಾಯಿ ಅವರು ಎಷ್ಟೋ ಬಾರಿ ನಾನೇ ಮತ್ತೆ ಮುಖ್ಯಮಂತ್ರಿ ಆಗುವ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಗಾದಿಗೇರುವ ಕನಸು ಕಂಡಿರುವ ಮತ್ತೊಬ್ಬ ಪ್ರಭಾವಿ ನಾಯಕ ಸಚಿವ ಮುರುಗೇಶ್‌ ನಿರಾಣಿ ಕೂಡ ಪೈಪೋಟಿಯಲ್ಲಿದ್ದಾರೆ. ಬಿಎಸ್​ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೂ ನಿರಾಣಿ ಹೆಸರು ಮುಂಚೂಣಿಯಲ್ಲಿತ್ತು. ಪಂಚಮಸಾಲಿ ಸಮುದಾಯದ ಮಠಾಧಿಪತಿಗಳ ಬೆಂಬಲ ಇವರಿದೆ.
icon

(3 / 6)

ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಕಂದಾಯ ಸಚಿವ ಆರ್‌ ಅಶೋಕ್‌, ಮಹಿಳಾ ಆಕಾಂಕ್ಷಿಯಾಗಿ ಶೋಭಾ ಕರಂದ್ಲಾಜೆ ಹೆಸರುಗಳು ಮುಂಚೂಣಿಯಲ್ಲಿವೆ. ಶಾಸಕ ಅರವಿಂದ ಬೆಲ್ಲದ್‌, ಹೆಸರು ಕೂಡ ಮುಂಚೂಣಿಗೆ ಬಂದಿತ್ತು.
icon

(4 / 6)

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಇಬ್ಬರು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸ್ತಿದ್ದಾರೆ. ಮತ್ತೊಂದೆಡೆ ದಲಿತ ಮುಖ್ಯಮಂತ್ರಿ ಬೇಡಿಕೆಯೂ ಇದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ ಪರಮೇಶ್ವರ್​ ಅವರ ಹೆಸರು ಮುಂಚೂಣಿಯಲ್ಲಿದೆ. ಲಿಂಗಾಯತ ಲೀಡಲ್​ ಎಂಬಿ ಪಾಟೀಲ್​​ ಈ ರೇಸ್​​ನಲ್ಲಿದ್ದಾರೆ.
icon

(5 / 6)

ಜೆಡಿಎಸ್​​ನಲ್ಲಿ ಕುಮಾರಸ್ವಾಮಿ ಹೊರತುಪಡಿಸಿ, ಬೇರೆ ಯಾವ ನಾಯಕ ಕೂಡ ಮುಖ್ಯಮಂತ್ರಿ ರೇಸ್​​​​ನಲ್ಲಿಲ್ಲ. ಅದರಲ್ಲೂ ಅತಂತ್ರ ಫಲಿತಾಂಶ ಬಂದರೆ ಕುಮಾರಸ್ವಾಮಿ ಅವರೇ ಕಿಂಗ್​ ಮೇಕರ್​. ಹಲವು ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ. ಅತಂತ್ರ ಫಲಿತಾಂಶ ಬಂದರೆ ಕಾಂಗ್ರೆಸ್​ ಅಥವಾ ಬಿಜೆಪಿ ಪಕ್ಷ ಜೆಡಿಎಸ್​ ಮನೆ ಬಾಗಿಲು ತುಳಿಯಬೇಕಾಗುತ್ತದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು