ವಯನಾಡು ಲೋಕಸಭಾ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಕೆ; ಮೈಸೂರಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ
- ಅಕ್ಟೋಬರ್ 23ರ ಬುಧವಾರ (ನಾಳೆ) ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ರಸ್ತೆಯ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದ್ದಾರೆ.

(1 / 5)
ರಾಷ್ಟ್ರೀಯ ನಾಯಕರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರಾದ ಡಾ.ಎಚ್‌ಸಿ ಮಹದೇವಪ್ಪ, ಕೆ ವೆಂಕಟೇಶ್ ಹಾಗು ಇತರ ಪ್ರಮುಖ ನಾಯಕರು ಸ್ವಾಗತ ಕೋರಿದರು.
(2 / 5)
ಕೇರಳದ ವಯನಾಡಿನಲ್ಲಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕ ಗಾಂಧಿ ಕಣಕ್ಕಿಳಿಯುತ್ತಿದ್ದಾರೆ. ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ರಾಹುಲ್ ಗಾಂಧಿ ರಾಜೀನಾಮೆಯಿಂದಾಗಿ ವಯನಾಡು ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ.
(3 / 5)
ಚನ್ನಪಟ್ಟಣದ ಉಪಚುನಾವಣೆ ಟಿಕೆಟ್ ವಿಚಾರವಾಗಿ ಟಿಕೆಟ್ ಫೈನಲ್ ಮಾಡಿಕೊಂಡರೂ ಕಾಂಗ್ರೆಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಟಿಕೆಟ್ ಘೋಷಣೆಗೆ ಇನ್ನೂ ಸ್ವಲ್ಪ ಸಮಯ ಇದೆ. ಬಿಜೆಪಿ ಲೆಕ್ಕಾಚಾರ ಹಾಕಿದಂತೆ ನಾವು ಕೂಡ ಲೆಕ್ಕಾಚಾರ ಹಾಕಬೇಕು ಎಂದಿದ್ದಾರೆ.
(4 / 5)
ಬಿ ಫಾರಂಗೆ ಸಹಿ ಮಾಡುವವನೇ ನಾನು. ಅದು ಎರಡು ನಿಮಿಷದ ಕೆಲಸ. ನಾವು ಎಲ್ಲಾ ಲೆಕ್ಕಾಚಾರಗಳನ್ನು ಹಾಕಿದ್ದೇವೆ. ಈಗ ಸುರ್ಜೆವಾಲ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಅಂತಿಮ ಹಂತದ ಸಭೆ ನಡೆಸಿದ್ದೇವೆ. ಕೊನೆಯ ಒಂದಷ್ಟು ಲೆಕ್ಕಾಚಾರ ಇದೆ. ಅದನ್ನು ಈಗ ಮಾಡುತ್ತಿದ್ದೇವೆ ಎಂದರು.
ಇತರ ಗ್ಯಾಲರಿಗಳು