ವಿಶ್ವ ಪ್ರವಾಸೋದ್ಯಮ ದಿನ: ಇವು ಜಗತ್ತಿನ ಟಾಪ್ 10 ಶಾಂತಿಯುತ ದೇಶಗಳು, ಫ್ಯಾಮಿಲಿ ಟ್ರಿಪ್‌ಗೆ ಉತ್ತಮ ಆಯ್ಕೆ
- ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತದೆ. ಈ ವಿಶೇಷ ದಿನಕ್ಕೂ ಮುನ್ನ ಪ್ರಪಂಚದಲ್ಲಿ ನೀವು ಭೇಟಿ ನೀಡಲೇಬೇಕಾದ ವಿಶ್ವದಾದ್ಯಂತದ ಸುಂದರ ಹಾಗೂ ಶಾಂತಿಯುತ ರಾಷ್ಟ್ರಗಳಿವು. ಇವು ಸುರಕ್ಷಿತ ಹಾಗೂ ಶಾಂತಿಯುತ ದೇಶಗಳೆಂಬ ಖ್ಯಾತಿ ಗಳಿಸಿವೆ.
- ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತದೆ. ಈ ವಿಶೇಷ ದಿನಕ್ಕೂ ಮುನ್ನ ಪ್ರಪಂಚದಲ್ಲಿ ನೀವು ಭೇಟಿ ನೀಡಲೇಬೇಕಾದ ವಿಶ್ವದಾದ್ಯಂತದ ಸುಂದರ ಹಾಗೂ ಶಾಂತಿಯುತ ರಾಷ್ಟ್ರಗಳಿವು. ಇವು ಸುರಕ್ಷಿತ ಹಾಗೂ ಶಾಂತಿಯುತ ದೇಶಗಳೆಂಬ ಖ್ಯಾತಿ ಗಳಿಸಿವೆ.
(1 / 11)
ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 27ರಂದು ಆಚರಿಸಲಾಗುತ್ತದೆ. ಈ ವರ್ಷದ ಥೀಮ್ ಪ್ರವಾಸೋದ್ಯಮ ಮತ್ತು ಶಾಂತಿ. ಹೀಗಾಗಿ ಈ ವಿಶೇಷ ದಿನದಂದು ಪ್ರಪಂಚದಾದ್ಯಂತ ಇರು ಶಾಂತಿಯುತ ದೇಶಗಳನ್ನು ನೋಡೋಣ. ಜಾಗತಿಕ ಶಾಂತಿ ಸೂಚ್ಯಂಕ 2024ರ ಶ್ರೇಯಾಂಕದ ಪ್ರಕಾರ, ಈ ದೇಶಗಳನ್ನು ಪಟ್ಟಿ ಮಾಡಲಾಗಿದೆ. ಐಸ್ಲ್ಯಾಂಡ್, ಐರ್ಲೆಂಡ್, ಆಸ್ಟ್ರಿಯಾ, ನ್ಯೂಜಿಲೆಂಡ್, ಸಿಂಗಾಪುರ, ಸ್ವಿಟ್ಜರ್ಲ್ಯಾಂಡ್, ಪೋರ್ಚುಗಲ್, ಡೆನ್ಮಾರ್ಕ್ ಮತ್ತು ಸ್ಲೊವೇನಿಯಾ ಈ ಪಟ್ಟಿಯಲ್ಲಿವೆ.
(Unsplash)(2 / 11)
ಐಸ್ಲ್ಯಾಂಡ್ 2008ರಿಂದ ವಿಶ್ವದ ಅತ್ಯಂತ ಶಾಂತಿಯುತ ದೇಶವಾಗಿದೆ. ಯುರೋಪಿನಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾದ ಈ ದ್ವೀಪ ರಾಷ್ಟ್ರವು, ಸುಂದರ ಭೂದೃಶ್ಯಗಳನ್ನು ಹೊಂದಿದೆ. ಜ್ವಾಲಾಮುಖಿಗಳು ಮತ್ತು ಹಿಮನದಿಗಳಿಂದ ಹಿಡಿದು ಕಪ್ಪು ಮರಳಿನ ಕಡಲತೀರಗಳು ಇಲ್ಲಿವೆ. ಈ ರಾಷ್ಟ್ರಕ್ಕೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಮಾರ್ಚ್ ಉತ್ತಮ ಸಮಯ.
(Unsplash)(3 / 11)
ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಐರ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಕ್ಲಿಫ್ಸ್ ಆಫ್ ಮೊಹರ್, ಎಮರಾಲ್ಡ್ ಐಲ್, ಗಾಲ್ವೇ, ರಾಕ್ ಆಫ್ ಕ್ಯಾಷೆಲ್ ಮತ್ತು ಕಿಲಾರ್ನಿ ರಾಷ್ಟ್ರೀಯ ಉದ್ಯಾನವನದಂತಹ ಅಪ್ರತಿಮ ಪ್ರವಾಸಿ ತಾಳಗಳು ಇಲ್ಲಿವೆ. ಮೋರ್ಕ್ ಪರ್ವತಗಳು, ಬ್ಯಾಲಿಂಟೊಯ್ ಬಂದರು, ಟಾಲಿಮೋರ್ ಫಾರೆಸ್ಟ್ ಪಾರ್ಕ್ ಮತ್ತು ಡಾರ್ಕ್ ಹೆಡ್ಜಸ್ ಸೇರಿದಂತೆ ಉತ್ತರ ಐರ್ಲೆಂಡ್‌ಬಲ್ಲಿ ಹಲವು ಪ್ರದೇಶಗಳು ಪ್ರವಾಸಿಗರನ್ನು ಕರೆಯುತ್ತದೆ.
(Unsplash)(4 / 11)
ಆಸ್ಟ್ರಿಯಾ ದೇಶವು ಚಳಿಗಾಲಕ್ಕೆ ಭೇಟಿ ನೀಡಲು ಅದ್ಭುತ ತಾಣ. ಸ್ಕೀಯಿಂಗ್, ಕ್ರಾಸ್-ಕಂಟ್ರಿ ಪ್ರವಾಸ, ಫ್ರೀರೈಡಿಂಗ್, ಟೋಬೊಗನಿಂಗ್ ಚಟುವಟಿಕೆ ಇಷ್ಟಪಡುವವರಿಗೆ ಇದು ಉತ್ತಮ ತಾಣ. ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿರುವ ದೇಶವು, ಇಲ್ಲಿನ ಜನರ ಸ್ವಾಗತ ಮನೋಭಾವದಿಂದ ಜಗತ್ತಿನ ಗಮನ ಸೆಳೆಯುತ್ತದೆ.
(Unsplash)(5 / 11)
ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮಿಲ್ಫೋರ್ಡ್ ಸೌಂಡ್, ಫ್ರಾಂಜ್ ಜೋಸೆಫ್ ಗ್ಲೇಸಿಯರ್, ಹಾಬಿಟನ್ ಸೇರಿದಂತೆ ಹಲವು ಅಪ್ರತಿಮ ಪ್ರವಾಸಿ ತಾಣಗಳ ನೆಲೆಯಾಗಿದೆ. ಸರ್ಫಿಂಗ್, ಸ್ಕೀಯಿಂಗ್, ಕಯಾಕಿಂಗ್, ಟ್ರ್ಯಾಂಪಿಂಗ್ ಸೇರಿದಂತೆ ಹಲವು ಹೊರಾಂಗಣ ಸಾಹಸಗಳಿಗೆ ಈ ದೇಶ ಖ್ಯಾತಿ ಗಳಿಸಿದೆ. ಆಕರ್ಷಕ ಭೂದೃಶ್ಯಗಳು ಮತ್ತು ಅನನ್ಯ ಸಸ್ಯಸಂಪತ್ತು ಮತ್ತು ಪ್ರಾಣಿಸಂಪತ್ತು ಇಲ್ಲಿದೆ.
(Unsplash)(6 / 11)
ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ ಸಿಂಗಾಪುರ ಐದನೇ ಸ್ಥಾನದಲ್ಲಿದೆ. ಈ ಸಣ್ಣ ದೇಶವು ಜಾಗತಿಕ ಆರ್ಥಿಕ ಕೇಂದ್ರ. ವಿಶ್ವ ದರ್ಜೆಯ ವಿಮಾನ ನಿಲ್ದಾಣ, ಐಷಾರಾಮಿ ಮಾಲ್‌ಗಳು ಹಾಗೂ ಹಲವು ಪ್ರವಾಸಿ ತಾಣಗಳಿಗೆ ನೆಲೆಯಾಗಿದೆ. ಗಾರ್ಡನ್ಸ್ ಬೈ ದಿ ಬೇ, ಮೆರ್ಲಿಯನ್ ಪಾರ್ಕ್, ಬುದ್ಧ ಟೂತ್ ರೆಲಿಕ್ ಟೆಂಪಲ್, ಸಿಂಗಾಪುರ್ ಬೊಟಾನಿಕ್ ಗಾರ್ಡನ್ಸ್ ಸೇರಿದಂತೆ ಹಲವು ತಾಣಗಳಿಗೆ ಹೆಸರುವಾಸಿ.
(Unsplash)(7 / 11)
ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಆರನೇ ಸ್ಥಾನದಲ್ಲಿರುವ ಸ್ವಿಟ್ಜರ್ಲೆಂಡ್ ಸುಂದರವಾದ ಪ್ರಕೃತಿ, ವಿಸ್ಮಯಕಾರಿ ಪರ್ವತಗಳನ್ನು ಒಳಗೊಂಡ ಭೂಲೋಕದ ಸ್ವರ್ಗ. ಸರೋವರದ ಬದಿಯ ಆಕರ್ಷಕ ನಗರಗಳನ್ನು ಹೊಂದಿದೆ. ಕಾಲ್ಪನಿಕ ಲೋಕದಿಂದ ನೇರವಾಗಿ ಧರೆಗಿಳಿದಂತೆ ಭಾಸವಾಗುವ ಭೂದೃಶ್ಯಗಳು ಇಲ್ಲಿವೆ. ಲುಸೆರ್ನ್, ಇಂಟರ್ಲಾಕೆನ್, ಲಾಟರ್ಬ್ರುನೆನ್ ಕಣಿವೆ, ದಿ ಮ್ಯಾಟರ್ಹಾರ್ನ್, ಜ್ಯೂರಿಚ್ ಮತ್ತು ಲೇಕ್ ಜಿನೀವಾ ಇಲ್ಲಿ ನೋಡಬೇಕಾದ ಸ್ಥಳಗಳು.
(Unsplash)(8 / 11)
ಜಾಗತಿಕ ಶಾಂತಿ ಸೂಚ್ಯಂಕ ಪಟ್ಟಿಯಲ್ಲಿ ಪೋರ್ಚುಗಲ್ ಏಳನೇ ಸ್ಥಾನದಲ್ಲಿದೆ. ಸುಂದರವಾದ ಬೀಚ್ ರೆಸಾರ್ಟ್‌ಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ಹಿಡಿದು ಪಟ್ಟಣಗಳು ಮತ್ತು ಹಳ್ಳಿಗಳವರೆಗೆ ದೇಶವು ಎಲ್ಲಾ ರೀತಿಯ ಅನುಭವಗಳನ್ನು ಪ್ರವಾಸಿಗರಿಗೆ ಕೊಡುತ್ತದೆ. ಲಿಸ್ಬನ್, ಲೀರಿಯಾ, ಸಿಂಟ್ರಾ, ಪೋರ್ಟೊ, ಲಿವ್ರಾರಿಯಾ ಲೆಲ್ಲೊ, ಬೆಲೆಮ್ ಟವರ್, ಪೆನಾ ಪ್ಯಾಲೇಸ್ ಮತ್ತು ಕ್ಯಾಸ್ಟೆಲೊ ಡಾಸ್ ಮೌರೋಸ್ ಇಲ್ಲಿ ಭೇಟಿ ನೀಡಬಹುದಾದ ಕೆಲವು ಸ್ಥಳಗಳಾಗಿವೆ.
(Unsplash)(9 / 11)
ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಡೆನ್ಮಾರ್ಕ್, ನಿಜವಾದ ದ್ವೀಪ ಜೀವನದ ರುಚಿಯನ್ನು ನಿಮಗೆ ಉಣಬಡಿಸುತ್ತದೆ. ಮೋನ್ಸ್ ಕ್ಲಿಂಟ್, ಕೋಪನ್ ಹ್ಯಾಗನ್, ಥೈ ನ್ಯಾಷನಲ್ ಪಾರ್ಕ್, ರಾಬ್ಜೆರ್ಗ್ ಮೈಲ್, ಸ್ವಾನ್ನಿಂಗೆ ಹಿಲ್ಸ್ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಬಹುದು.
(Unsplash)(10 / 11)
ಇತರ ಗ್ಯಾಲರಿಗಳು