Lok Sabha Elections 2024: ನಟ ಧರ್ಮೇಂದ್ರ ಕುಟುಂಬ ರಾಜಕಾರಣ, ಪತ್ನಿ ಹೇಮಾಮಾಲಿನಿ, ಮಗ ಸನ್ನಿ ಡಿಯೋಲ್ ನಂತರ ಮಗಳಿಗೆ ಬಿಜೆಪಿ ಟಿಕೆಟ್ !
- ಕುಟುಂಬ ರಾಜಕಾರಣದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ ನಟ ಧರ್ಮೇಂದ್ರ ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಸದ್ದಿಲ್ಲದೇ ನಡೆದಿದೆ. ಧರ್ಮೇಂದ್ರ ನಂತರ ಪತ್ನಿ ನಟಿ ಹೇಮಮಾಲಿನಿ, ಪುತ್ರ ನಟ ಸನ್ನಿ ಡಿಯೋಲ್ ಸಂಸದರು. ಈಗ ಮುಂದಿನ ಸರದಿ ಪುತ್ರಿ ಇಶಾ ಡಿಯೋಲ್ ಎನ್ನುವ ಚರ್ಚೆ ನಡೆದಿದೆ.
- ಕುಟುಂಬ ರಾಜಕಾರಣದ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಲೇ ಇದೆ. ಆದರೆ ನಟ ಧರ್ಮೇಂದ್ರ ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಸದ್ದಿಲ್ಲದೇ ನಡೆದಿದೆ. ಧರ್ಮೇಂದ್ರ ನಂತರ ಪತ್ನಿ ನಟಿ ಹೇಮಮಾಲಿನಿ, ಪುತ್ರ ನಟ ಸನ್ನಿ ಡಿಯೋಲ್ ಸಂಸದರು. ಈಗ ಮುಂದಿನ ಸರದಿ ಪುತ್ರಿ ಇಶಾ ಡಿಯೋಲ್ ಎನ್ನುವ ಚರ್ಚೆ ನಡೆದಿದೆ.
(1 / 6)
ನಟ ಧರ್ಮೇಂದ್ರ ಹಿಂದಿ ಚಿತ್ರರಂಗದ ದೊಡ್ಡ ಹೆಸರು. ರಾಜಸ್ತಾನದ ಬಿಕನೇರ್‌ನಿಂದ 2004 ರಿಂದ 2009ರವರೆಗೆ ಬಿಜೆಪಿಯಿಂದ ಸಂಸದರಾಗಿದ್ದವರು. ಈಗ ಅವರ ಪತ್ನಿ ಹೇಮಾಮಾಲಿನಿ,. ಪುತ್ರ ಸನ್ನಿ ಡಿಯೋಲ್ ಇಬ್ಬರೂ ಬಿಜೆಪಿ ಸಂಸದರು. ಈ ಬಾರಿ ಮಗಳು ಲೋಕಸಭೆ ಪ್ರವೇಶಿಸುವ ವಾತಾವರಣವಿದೆ.
(2 / 6)
ಡ್ರೀಮ್ ಗರ್ಲ್ ಹೇಮಾಮಾಲಿನಿ ಬಿಜೆಪಿ ಸೇರಿ ಎರಡು ದಶಕ ರಾಜಕಾರಣ ಮಾಡಿದವರು. ಕರ್ನಾಟಕದಿಂದ ಎರಡು ವರ್ಷದ ಅವಧಿಗೆ ರಾಜ್ಯಸಭೆ ಸದಸ್ಯೆಯಾಗದ್ದರು. ಇದಾದ ನಂತರ 2014ರಿಂದ ಸತತ ಹತ್ತು ವರ್ಷ ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಸದಸ್ಯೆ. ಈ ಬಾರಿ ಮಗಳಿಗೆ ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆಯಿದೆ.
(3 / 6)
ಧರ್ಮೇಂದ್ರ ಮೊದಲ ಪತ್ನಿಯ ಹಿರಿಯ ಪುತ್ರ ಸನ್ನಿ ಡಿಯೋಲ್. ನಟರಾಗಿ ಖ್ಯಾತಿ ಪಡೆದ ಸನ್ನಿ ಈ ಬಾರಿ ಪಂಜಾಬ್‌ನ ಗುರುದಾಸಪುರ ಕ್ಷೇತ್ರದಿಂದ ಬಿಜೆಪಿ ಸಂಸದ. ಮತ್ತೆ ಈ ಬಾರಿಯೂ ಅಲ್ಲಿಂದಲೇ ಸನ್ನಿ ಸ್ಪರ್ಧಿಸಬಹುದು.
(4 / 6)
ಧರ್ಮೇಂದ್ರ ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್ ಹಲವಾರು ಸಿನೆಮಾಗಳಲ್ಲಿ ಅಭಿನಯಿಸಿದಾರೆ. ಮದುವೆ ನಂತರ ಚಿತ್ರರಂಗದಿಂದ ದೂರಾಗಿದ್ದರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಮ್ಮ ಹೇಮಾಮಾಲಿನಿ ಪ್ರತಿನಿಧಿಸುತ್ತಿದ್ದ ಮಥುರಾ ಕ್ಷೇತ್ರದಿಂದ ಇಶಾ ಸ್ಪರ್ಧೆ ಸಾಧ್ಯತೆಗಳಿವೆ.
(5 / 6)
ಧರ್ಮೇಂದ್ರ ಹಾಗೂ ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್ ಉದ್ಯಮಿ ಭರತ್ ತಕ್ತಾನಿ ಅವರಿಂದ ದೂರವಾಗಿದ್ದಾರೆ,. ಈ ಬಾರಿ ರಾಜಕೀಯ ಪ್ರವೇಶ ಖಚಿತ ಎನ್ನುವ ಚರ್ಚೆಗಳು ನಡೆದಿವೆ,
ಇತರ ಗ್ಯಾಲರಿಗಳು