Alisha Chinai: ʼಮೇಡ್ ಇನ್ ಇಂಡಿಯಾʼ ಎಂದು ಹಾಡಿ ಕುಣಿದಿದ್ದ ಸುಜಾತಾ ಅಲಿಯಾಸ್ ಅಲಿಶಾ ಈಗ ಹೇಗಿದ್ದಾರೆ..ಎಲ್ಲಿದ್ದಾರೆ? ಇಲ್ಲಿವೆ ಫೋಟೋಸ್
ಮೇಡ್ ಇನ್ ಇಂಡಿಯಾ..ಮೇಡ್ ಇನ್ ಇಂಡಿಯಾ..ಹಿಂದಿ ಆಲ್ಬಂ ಹಾಡನ್ನು ಯಾರು ತಾನೇ ಕೇಳಿಲ್ಲ? ಸಿನಿಪ್ರಿಯರು, ಆಗಿನ ಕಾಲೇಜು ಯುವಕ, ಯುವತಿಯರಿಗೆ ಈ ಹಾಡು ಬಹಳ ಅಚ್ಚು ಮೆಚ್ಚು. ಈ ಹಾಡು ಇಂದಿಗೂ ಬಹಳಷ್ಟು ಜನರ ಮೋಸ್ಟ್ ಫೇವರೆಟ್.
(1 / 12)
1995 ರಲ್ಲಿ ಈ ಹಾಡು ಬಿಡುಗಡೆ ಆಗಿತ್ತು. ಆಗಂತೂ ಯಾವ ಸ್ಕೂಲ್, ಕಾಲೇಜು ಫಂಕ್ಷನ್‌ಗಳಲ್ಲಿ ನೋಡಿದರೂ ಇದೇ ಹಾಡು. ಈ ಹಾಡಿಗೆ ಕೆಲವರು ಡ್ಯಾನ್ಸ್ ಮಾಡಿದರೆ ಇನ್ನೂ ಕೆಲವರು ಫ್ಯಾಷನ್ ಶೋಗೆ ಬಳಸಿಕೊಂಡಿದ್ದರು. (PC: Alisha Chinai Social media)
(2 / 12)
ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದ ಅಲಿಶಾ ಚಿನಾಯ್ ಅವರೇ ಹಾಡನ್ನು ಹಾಡಿದ್ದರು. ಅದಕ್ಕೂ ಮುನ್ನ ಆಕೆ ಅನೇಕ ಹಾಡುಗಳನ್ನು ಹಾಡಿದ್ದರೂ ಈ ಮೇಡ್ ಇನ್ ಇಂಡಿಯಾ ಆಲ್ಬಂ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.
(3 / 12)
ಅಲಿಶಾ ಚಿನಾಯಿ, ಮೂಲತ: ಗುಜರಾತಿನವರು. ತಂದೆ ತಾಯಿ ಈಕೆಗೆ ಇಟ್ಟ ಹೆಸರು ಸುಜಾತಾ. ಆದರೆ ಈಕೆ ಇಂಡಿಯನ್ ಪಾಪ್ ಗಾಯಕಿ ಆದ್ದರಿಂದ ಗಾಯನ ವೃತ್ತಿಗೆ ಬಂದ ನಂತರ ತಮ್ಮ ಹೆಸರನ್ನು ಅಲಿಶಾ ಚಿನಾಯ್ ಎಂದು ಬದಲಿಸಿಕೊಂಡರು.
(4 / 12)
ಈ ಚೆಲುವೆಗೆ ಬಾಲ್ಯದಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ. ಸಂಗೀತದಲ್ಲಿ ಒಲವಿದ್ದ ಅಲಿಶಾ, ಪಾಕಿಸ್ತಾನದ ಖ್ಯಾತ ಗಾಯಕ ಉಸ್ತಾದ್ ಗುಲಾಮ್ ಅಲಿ ಅವರ ಹಾಡುಗಳನ್ನು ಕೇಳುತ್ತಾ ಬೆಳೆದರು.
(5 / 12)
ಆಕರ್ಷಕ, ವಿಭಿನ್ನ ದನಿ ಹೊಂದಿದ್ದ ಆಲಿಶಾ, ಜಾದೂ ಎಂಬ ಆಲ್ಬಂ ಮೂಲಕ 1985 ರಲ್ಲಿ ವೃತ್ತಿ ಆರಂಭಿಸಿದರು. ನಂತರ ಈಕೆಯನ್ನು ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ, ಚಿತ್ರರಂಗಕ್ಕೆ ಪರಿಚಯಿಸಿದರು.
(6 / 12)
ಬಪ್ಪಿ ಲಹರಿ ಸಂಗೀತ ನಿರ್ದೇಶನದಲ್ಲಿ ಡಿಸ್ಕೋ ಹಿಟ್ಸ್ ಸೇರಿದಂತೆ ಅನೇಕ ಹಾಡುಗಳನ್ನು ಹಾಡಿದರು. ಬಾಲಿವುಡ್‌ನ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರೊಂದಿಗೆ ಅಲಿಶಾ ಕೆಲಸ ಮಾಡಿದ್ದಾರೆ.
(7 / 12)
ಬಹಳ ಚಿಕ್ಕ ವಯಸ್ಸಿಗೆ ತಮ್ಮ ಮ್ಯಾನೇಜರ್ ರಾಜೇಶ್ ಜವೇರಿ ಎಂಬುವರನ್ನು ಅಲಿಶಾ ಮದುವೆಯಾದರು. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. 8 ವರ್ಷಗಳ ನಂತರ ಈ ಜೋಡಿ ಡಿವೋರ್ಸ್ ಪಡೆದು ದೂರಾದರು.
(8 / 12)
ಮೇಡ್ ಇನ್ ಇಂಡಿಯಾ ಆಲ್ಬಂ ರಿಲೀಸ್ ಆದ ನಂತರ ಅಲಿಶಾ ಚಿನಾಯ್, ಇಂಡೋ ಪಾಪ್ ಕ್ವೀನ್ ಎಂದೇ ಹೆಸರಾದರು. ಈ ಹಾಡಿನ ನಂತರ ಅವರ ಇಮೇಜ್ ಸಂಪೂರ್ಣ ಬದಲಾಯ್ತು. ಇದಾದ ನಂತರ ಕೂಡಾ ಅಲಿಶಾ , ದಿಲ್ ಕಿ ರಾಣಿ, ಓಂ, ಅಲಿಶಾ ಸೇರಿದಂತೆ ಅನೇಕ ಅಲ್ಬಂಗಳನ್ನು ಬಿಡುಗಡೆ ಮಾಡಿದರು.
(9 / 12)
1995ರ ದಶಕದಲ್ಲೇ ದೇಶಾದ್ಯಂತ 5 ಲಕ್ಷಕ್ಕೂ ಮೇಡ್ ಇನ್ ಇಂಡಿಯಾ ಕಾಪಿಗಳು ಮಾರಾಟವಾಗಿ ದಾಖಲೆ ಬರೆದಿತ್ತು. ಈ ಹಾಡನ್ನು ಬರೆದು ನಿರ್ಮಿಸಿದ್ದ ಬಿದ್ದು ಅಪ್ಪಯ್ಯ ಎಂಬ ಮ್ಯೂಸಿಷಿಯನ್.
(10 / 12)
ಬಿದ್ದು, ಮೇಡ್ ಇನ್ ಇಂಡಿಯಾ ಹಾಡು ಬರೆದದ್ದು ಪಾಕಿಸ್ತಾನಿ ಮೂಲದ ಗಾಯಕಿ ನಾಜಿಯಾ ಹಾಸನ್ ಅವರಿಗಾಗಿ. ಆದರೆ ಮೇಡ್ ಇನ್ ಇಂಡಿಯಾ ಹಾಡಿನ ಸಾಲುಗಳು, ಪಾಕಿಸ್ತಾನದ ಅಭಿಮಾನಿಗಳಿಗೆ ಬೇಸರವಾಗಬಹುದು ಎಂಬ ಕಾರಣಕ್ಕೆ ಆಕೆ ಈ ಹಾಡು ಹಾಡಲು ಒಪ್ಪಲಿಲ್ಲ. ಕೊನೆಗೆ ಬಿದ್ದು, ಆಲಿಶಾ ಅವರನ್ನು ಈ ಹಾಡಿಗೆ ಕರೆ ತಂದರು. ನಂತರ ನಡೆದದ್ದು ಇತಿಹಾಸ.
(11 / 12)
80-90ರ ದಶಕದಲ್ಲಿ ಅಲಿಶಾ, ನಟಿಯರಂತೆ ಹಿಂದಿ ಸಿನಿಮಾ ಅಭಿಮಾನಿಗಳ ಆರಾಧ್ಯ ದೇವತೆಯಾಗಿದ್ದರು. ಯಾವ ಮ್ಯಾಗಜಿನ್ ಪುಟಗಳಲ್ಲಿ ನೋಡಿದರೂ ಅಲಿಶಾ ಫೋಟೋ ರಾರಾಜಿಸುತ್ತಿತ್ತು. ಬಹಳಷ್ಟು ಜಾಹೀರಾತುಗಳಲ್ಲಿ ಕೂಡಾ ಅಲಿಶಾ ಕಾಣಿಸಿಕೊಂಡಿದ್ದರು.
(12 / 12)
ಅಲಿಶಾ, ಈಗ ಒಬ್ಬಂಟಿಯಾಗಿ ಮುಂಬೈನಲ್ಲಿ ಬದುಕುತ್ತಿದ್ದಾರೆ. ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಕಂಡು, ವೈಯಕ್ತಿಕ ಜೀವನದಲ್ಲಿ ಮಾತ್ರ ನೋವು ಅನುಭವಿಸಿದ್ದು ವಿಪರ್ಯಾಸ. ಇತ್ತೀಚೆಗೆ ಅವರು ಕೆಲವೊಂದು ಹಿಂದಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ವಿಶೇಷ ಕಾರ್ಯಕ್ರಮಗಳಲ್ಲಿ ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕಿಯಾಗಿ ಈಗಲೂ ಅಲಿಶಾ ಹಾಡುತ್ತಿದ್ದಾರೆ. ಕಳೆದ ವರ್ಷ ಚಮ್ಕೇಕ ಇಂಡಿಯಾ ಎಂಬ ಆಲ್ಬಂಗೆ ಅಲಿಶಾ ಹಾಡಿದ್ದರು.
ಇತರ ಗ್ಯಾಲರಿಗಳು