ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಮಣಿಕಾ ಬಾತ್ರಾ; 3ನೇ ದಿನದಾಟದಲ್ಲಿ ಭಾರತದ ಫಲಿತಾಂಶಗಳ ಚಿತ್ರನೋಟ
- ಪ್ಯಾರಿಸ್ ಒಲಿಂಪಿಕ್ಸ್‌ನ 3ನೇ ದಿನದಾಟದಲ್ಲಿ ಅರ್ಜುನ್ ಬಬುಟಾ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚಿನ ಪದಕ ಕಳೆದುಕೊಂಡರು. ಆದರೆ, ತಡರಾತ್ರಿ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಇತಿಹಾಸ ನಿರ್ಮಿಸಿದರು. 3ನೇ ದಿನದಾಟದ ಅಂತ್ಯಕ್ಕೆ ಭಾರತದ ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ.
- ಪ್ಯಾರಿಸ್ ಒಲಿಂಪಿಕ್ಸ್‌ನ 3ನೇ ದಿನದಾಟದಲ್ಲಿ ಅರ್ಜುನ್ ಬಬುಟಾ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚಿನ ಪದಕ ಕಳೆದುಕೊಂಡರು. ಆದರೆ, ತಡರಾತ್ರಿ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಇತಿಹಾಸ ನಿರ್ಮಿಸಿದರು. 3ನೇ ದಿನದಾಟದ ಅಂತ್ಯಕ್ಕೆ ಭಾರತದ ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ.
(1 / 7)
ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಭಾರತದ ಮಣಿಕಾ ಬಾತ್ರಾ ಅವರು ವಿಶ್ವದ 18ನೇ ಶ್ರೇಯಾಂಕಿತ ಫ್ರಾನ್ಸ್‌ನ ಆಟಗಾರ್ತಿ ಪ್ರಿತಿಕಾ ಪವಾಡೆ ವಿರುದ್ಧ 4-0 ಅಂತರದಲ್ಲಿ ನಿರಾಯಾಸ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ನಡುವೆ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರ ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ,(AP)
(2 / 7)
ಪ್ಯಾರಿಸ್‌ನಲ್ಲಿ ಇದುವರೆಗೆ ಪದಕ ಗೆದ್ದ ಏಕೈಕ ಭಾರತೀಯ ಪದಕ ವಿಜೇತೆಯಾಗಿರುವ ಮನು ಭಾಕರ್ ಅವರೊಂದಿಗೆ ಸರಬ್ಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದರು. ಇವರು ಕಂಚಿನ ಪದಕಕ್ಕೆ ಇಂದು ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಚೀಮಾ ಅವರು ಪದಕ ಸುತ್ತು ತಲುಪಲು ವಿಫಲರಾದರು.(REUTERS)
(3 / 7)
ಪುರುಷರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಅರ್ಜುನ್ ಬಬುತಾ ನಾಲ್ಕನೇ ಸ್ಥಾನ ಪಡೆದರು. ಆ ಮೂಲಕ ಕೇವಲ ಒಂದು ಸ್ಥಾನದಿಂದ ಪದಕ ಕಳೆದುಕೊಂಡರು.(WeAreTeamIndia- )
(4 / 7)
ಅರ್ಜೆಂಟೀನಾ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಗೋಲು ಬಿಟ್ಟುಕೊಟ್ಟಿತು. ಆಕ್ರಮಣಕಾರಿ ಆಟವಾಡಲು ಹೆಣಗಾಡಿದ ತಂಡ, ಕೊನೆಗೆ ಪಂದ್ಯ ಡ್ರಾ ಮಾಡುವಲ್ಲಿ ಯಶಸ್ವಿಯಾಯ್ತು. ಪಂದ್ಯದ ಕೊನೆಯ ನಿಮಿಷದಲ್ಲಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ 1-1ರಿಂದ ಪಂದ್ಯ ಸಮಬಲ ಸಾಧಿಸಿದರು.(PTI)
(5 / 7)
ಪುರುಷರ ತಂಡದ ಬಿಲ್ಲುಗಾರಿಕೆಯಲ್ಲಿ ಭಾರತದ ತರುಣ್ ದೀಪ್ ರೈನ್, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೋತರು. ಟರ್ಕಿ ವಿರುದ್ಧ ಭಾರತ 2-6 ಅಂತರದಲ್ಲಿ ಸೋತಿತು.(EPA-EFE)
(6 / 7)
ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.(PTI)
ಇತರ ಗ್ಯಾಲರಿಗಳು