ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್; ಸಚಿನ್​ಗೆ ಅಗ್ರಸ್ಥಾನ, ಟಾಪ್​-5ನಲ್ಲಿ ಕೊಹ್ಲಿ, ಅಗ್ರ-10ರಲ್ಲೂ ಇಲ್ಲ ರೋಹಿತ್-most runs for india in border gavaskar trophy sachin tendulkar top virat kohli below pujara rohit sharma is very far prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್; ಸಚಿನ್​ಗೆ ಅಗ್ರಸ್ಥಾನ, ಟಾಪ್​-5ನಲ್ಲಿ ಕೊಹ್ಲಿ, ಅಗ್ರ-10ರಲ್ಲೂ ಇಲ್ಲ ರೋಹಿತ್

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್; ಸಚಿನ್​ಗೆ ಅಗ್ರಸ್ಥಾನ, ಟಾಪ್​-5ನಲ್ಲಿ ಕೊಹ್ಲಿ, ಅಗ್ರ-10ರಲ್ಲೂ ಇಲ್ಲ ರೋಹಿತ್

  • Most runs in Border-Gavaskar Trophy: ನವೆಂಬರ್​ 22 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಾರಂಭವಾಗಲಿದೆ. ಈ ಸರಣಿಗೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ಭಾರತೀಯ ಆಟಗಾರರ ಪಟ್ಟಿ ಈ ಮುಂದಿನಂತಿದೆ.

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಟೀಮ್ ಇಂಡಿಯಾ ಟಾಪ್​-5 ಆಟಗಾರರು ಯಾರೆಂದು ತಿಳಿಯೋಣ. ಸಚಿನ್ ಅಗ್ರಸ್ಥಾನ ಪಡೆದಿದ್ದರೆ, ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.
icon

(1 / 7)

ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಟೀಮ್ ಇಂಡಿಯಾ ಟಾಪ್​-5 ಆಟಗಾರರು ಯಾರೆಂದು ತಿಳಿಯೋಣ. ಸಚಿನ್ ಅಗ್ರಸ್ಥಾನ ಪಡೆದಿದ್ದರೆ, ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.

ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ 1996 ರಿಂದ 2013ರ ತನಕ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಸಚಿನ್ ತೆಂಡೂಲ್ಕರ್ ಅವರು 9 ಶತಕ, 16 ಅರ್ಧಶತಕ ಸಹಿತ 3262    ರನ್ ಗಳಿಸಿದ್ದಾರೆ. ಆ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.
icon

(2 / 7)

ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ 1996 ರಿಂದ 2013ರ ತನಕ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಸಚಿನ್ ತೆಂಡೂಲ್ಕರ್ ಅವರು 9 ಶತಕ, 16 ಅರ್ಧಶತಕ ಸಹಿತ 3262    ರನ್ ಗಳಿಸಿದ್ದಾರೆ. ಆ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.(X)

ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಭಾರತದ ಪರ ಅತ್ಯಧಿಕ ರನ್ ಗಳಿಸಿದ 2ನೇ ಆಟಗಾರ ಎನಿಸಿದ್ದಾರೆ. ಒಟ್ಟಾರೆ ಮೂರನೇ ಕ್ರಿಕೆಟಿಗ. ಅವರು 29 ಟೆಸ್ಟ್​​ಗಳ 54 ಇನ್ನಿಂಗ್ಸ್​ಗಳಲ್ಲಿ 2434    ರನ್ ಗಳಿಸಿದ್ದಾರೆ. 6 ಶತಕ, 12 ಅರ್ಧಶತಕ ಸಿಡಿಸಿದ್ದಾರೆ.
icon

(3 / 7)

ಟೆಸ್ಟ್ ಸ್ಪೆಷಲಿಸ್ಟ್ ವಿವಿಎಸ್ ಲಕ್ಷ್ಮಣ್ ಭಾರತದ ಪರ ಅತ್ಯಧಿಕ ರನ್ ಗಳಿಸಿದ 2ನೇ ಆಟಗಾರ ಎನಿಸಿದ್ದಾರೆ. ಒಟ್ಟಾರೆ ಮೂರನೇ ಕ್ರಿಕೆಟಿಗ. ಅವರು 29 ಟೆಸ್ಟ್​​ಗಳ 54 ಇನ್ನಿಂಗ್ಸ್​ಗಳಲ್ಲಿ 2434    ರನ್ ಗಳಿಸಿದ್ದಾರೆ. 6 ಶತಕ, 12 ಅರ್ಧಶತಕ ಸಿಡಿಸಿದ್ದಾರೆ.(X)

ಲಕ್ಷ್ಮಣ್ ನಂತರದ ಸ್ಥಾನದಲ್ಲಿ ಭಾರತದ ಗೋಡೆ (ದಿ ವಾಲ್) ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. 32 ಟೆಸ್ಟ್​ಗಳ 60 ಇನ್ನಿಂಗ್ಸ್​​ಗಳಲ್ಲಿ 2143 ರನ್ ಬಾರಿಸಿದ್ದಾರೆ. 2 ಶತಕ, 13 ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.
icon

(4 / 7)

ಲಕ್ಷ್ಮಣ್ ನಂತರದ ಸ್ಥಾನದಲ್ಲಿ ಭಾರತದ ಗೋಡೆ (ದಿ ವಾಲ್) ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. 32 ಟೆಸ್ಟ್​ಗಳ 60 ಇನ್ನಿಂಗ್ಸ್​​ಗಳಲ್ಲಿ 2143 ರನ್ ಬಾರಿಸಿದ್ದಾರೆ. 2 ಶತಕ, 13 ಅರ್ಧಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.(X)

ಭಾರತ ಟೆಸ್ಟ್​ ತಂಡದ ಎರಡನೇ ಗೋಡೆ ಚೇತೇಶ್ವರ್ ಪೂಜಾರ ಅವರು 4ನೇ ಸ್ಥಾನದಲ್ಲಿದ್ದಾರೆ. ಬಿಜಿಟಿ ಸರಣಿಯಲ್ಲಿ 2 ಸಾವಿರ ರನ್​ಗಳ ಗಡಿ ದಾಟಿದ ಒಟ್ಟಾರೆ 6ನೇ ಹಾಗೂ 4ನೇ ಭಾರತೀಯನಾಗಿದ್ದಾರೆ. ಅವರು 24 ಟೆಸ್ಟ್​​ಗಳಲ್ಲಿ 5 ಶತಕ, 11 ಅರ್ಧಶತಕ ಸಹಿತ 2033 ರನ್ ಗಳಿಸಿದ್ದಾರೆ.
icon

(5 / 7)

ಭಾರತ ಟೆಸ್ಟ್​ ತಂಡದ ಎರಡನೇ ಗೋಡೆ ಚೇತೇಶ್ವರ್ ಪೂಜಾರ ಅವರು 4ನೇ ಸ್ಥಾನದಲ್ಲಿದ್ದಾರೆ. ಬಿಜಿಟಿ ಸರಣಿಯಲ್ಲಿ 2 ಸಾವಿರ ರನ್​ಗಳ ಗಡಿ ದಾಟಿದ ಒಟ್ಟಾರೆ 6ನೇ ಹಾಗೂ 4ನೇ ಭಾರತೀಯನಾಗಿದ್ದಾರೆ. ಅವರು 24 ಟೆಸ್ಟ್​​ಗಳಲ್ಲಿ 5 ಶತಕ, 11 ಅರ್ಧಶತಕ ಸಹಿತ 2033 ರನ್ ಗಳಿಸಿದ್ದಾರೆ.(AP)

ಬಾರ್ಡರ್-ಗವಾಸ್ಕರ್​ ಟ್ರೋಫಿಯಲ್ಲಿ 2 ಸಾವಿರ ರನ್​ಗಳ ಸಮೀಪ ಇರುವ ವಿರಾಟ್ ಕೊಹ್ಲಿ, ಭಾರತದ ಅತ್ಯಧಿಕ ರನ್ ಗಳಿಸಿದ 5ನೇ ಆಟಗಾರ. 24 ಟೆಸ್ಟ್​ಗಳಲ್ಲಿ 8 ಶತಕ, 5 ಅರ್ಧಶತಕ ಸಿಡಿಸಿ 1979 ರನ್ ಕಲೆ ಹಾಕಿದ್ದಾರೆ.
icon

(6 / 7)

ಬಾರ್ಡರ್-ಗವಾಸ್ಕರ್​ ಟ್ರೋಫಿಯಲ್ಲಿ 2 ಸಾವಿರ ರನ್​ಗಳ ಸಮೀಪ ಇರುವ ವಿರಾಟ್ ಕೊಹ್ಲಿ, ಭಾರತದ ಅತ್ಯಧಿಕ ರನ್ ಗಳಿಸಿದ 5ನೇ ಆಟಗಾರ. 24 ಟೆಸ್ಟ್​ಗಳಲ್ಲಿ 8 ಶತಕ, 5 ಅರ್ಧಶತಕ ಸಿಡಿಸಿ 1979 ರನ್ ಕಲೆ ಹಾಕಿದ್ದಾರೆ.(X)

ಪ್ರಸ್ತುತ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಟಾಪ್-10 ಪಟ್ಟಿಯಲ್ಲೂ ಇಲ್ಲ. 12 ಸ್ಥಾನದಲ್ಲಿರುವ ಹಿಟ್​ಮ್ಯಾನ್ ಆಸ್ಟ್ರೇಲಿಯಾ ವಿರುದ್ಧ ಈವರೆಗೂ 11 ಟೆಸ್ಟ್​ ಆಡಿದ್ದು, 650 ರನ್ ಬಾರಿಸಿದ್ದಾರೆ. 1 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.
icon

(7 / 7)

ಪ್ರಸ್ತುತ ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಟಾಪ್-10 ಪಟ್ಟಿಯಲ್ಲೂ ಇಲ್ಲ. 12 ಸ್ಥಾನದಲ್ಲಿರುವ ಹಿಟ್​ಮ್ಯಾನ್ ಆಸ್ಟ್ರೇಲಿಯಾ ವಿರುದ್ಧ ಈವರೆಗೂ 11 ಟೆಸ್ಟ್​ ಆಡಿದ್ದು, 650 ರನ್ ಬಾರಿಸಿದ್ದಾರೆ. 1 ಶತಕ, 3 ಅರ್ಧಶತಕ ಸಿಡಿಸಿದ್ದಾರೆ.(AP)


ಇತರ ಗ್ಯಾಲರಿಗಳು