Neha Shetty: ಮದನಾರಿ ಮಳೆ ಹುಡುಗಿಯ ಮನಮೋಹಕ ಭಾವಲಹರಿ; ನಟಿ ನೇಹಾ ಶೆಟ್ಟಿ ಫೋಟೋ ಗೊಂಚಲು ಇಲ್ಲಿದೆ
Neha Shetty Photos: ಸ್ಯಾಂಡಲ್ವುಡ್ನಲ್ಲಿ ಮುಂಗಾರು ಮಳೆ ಪಾರ್ಟ್ 2 ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಟಿ ನೇಹಾ ಶೆಟ್ಟಿ, ಅದಾದ ಮೇಲೆ ತೆಲುಗಿನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಕನ್ನಡಕ್ಕಿಂತ ಟಾಲಿವುಡ್ ಅಂಗಳದಲ್ಲಿಯೇ ಬೇಡಿಕೆಯ ನಟಿಯಾಗಿದ್ದಾರೆ.
(2 / 10)
2016ರಲ್ಲಿ ಅದೇ ಅವರ ಕೊನೇ ಕನ್ನಡ ಸಿನಿಮಾ. ಅದಾದ ಬಳಿಕ ಪುರಿ ಜಗನ್ನಾಥ್ ನಿರ್ದೇಶನದ ಮತ್ತು ಅವರ ಮಗ ಆಕಾಶ್ ಪುರಿ ಮುಖ್ಯ ಪಾತ್ರದಲ್ಲಿ ನಟಿಸಿದ ಮೆಹಬೂಬಾ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿಕೊಟ್ಟರು.
(iamnehashetty/instagram)(3 / 10)
ಆದರೆ.. ಮೊದಲ ಸಿನಿಮಾ ಪ್ಲಾಪ್ ಪಟ್ಟಿ ಸೇರಿತು. ಅದಾದ ಮೇಲೆ ಗಲ್ಲಿ ಬಾಯ್ ಮತ್ತು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ನಟಿಸಿದರೂ ಸೋಲೇ ಮುಂದುವರಿಯಿತು.
(iamnehashetty/instagram)(4 / 10)
ಸೋಲಿನ ಬಳಿಕ ಸಿದ್ದು ಜೊನ್ನಲಗಡ್ಡ ಅವರ ಡಿಜೆ ಟಿಲ್ಲು ಚಿತ್ರ ನೇಹಾ ಶೆಟ್ಟಿಗೆ ಮನ್ನಣೆ ತಂದುಕೊಟ್ಟಿತು.
(iamnehashetty/instagram)(5 / 10)
ಟಿಜೆ ಟಿಲ್ಲು ನಂತರ, ನೇಹಾ ಶೆಟ್ಟಿಗೆ ಸರಣಿ ಅವಕಾಶಗಳು ಬಂದವು ಮತ್ತು ರೂಲ್ಸ್ ರಂಜನ್ ಮತ್ತು ಬೆದುರು ಲಂಕಾ ಚಿತ್ರಗಳಲ್ಲಿ ನಟಿಸಿದರೂ, ಆ ಸಿನಿಮಾಗಳೂ ಹೆಸರು ತಂದುಕೊಡಲಿಲ್ಲ.
(iamnehashetty/instagram)(6 / 10)
ಹೀಗಿರುವಾಗಲೇ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡು ಸುದ್ದಿಯಾದರು ನೇಹಾ ಶೆಟ್ಟಿ.
(iamnehashetty/instagram)(7 / 10)
ಅನುಪಮಾ ಪರಮೇಶ್ವರನ್ ನಾಯಕಿಯಾಗಿದ್ದ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ನೇಹಾ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.
(iamnehashetty/instagram)(8 / 10)
ಈ ವರ್ಷ ವಿಶ್ವಕ್ ಸೇನ್ ಜತೆಗೆ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದಲ್ಲಿ ನೇಹಾ ನಟಿಸಿದ್ದಾರೆ. ಆದಾಗ್ಯೂ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವ ಗಳಿಕೆ ಕಾಣಲಿಲ್ಲ.
(iamnehashetty/instagram)(9 / 10)
ಸಿನಿಮಾ ಜತೆ ಜತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ನೇಹಾ ಮುಂದು. ಸದಾ ಒಂದಿಲ್ಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಮತ್ತಷ್ಟು ರಂಗೇರಿದ್ದಾರೆ ನೇಹಾ.
(iamnehashetty/instagram)ಇತರ ಗ್ಯಾಲರಿಗಳು