ಮೈಸೂರು ಯುವ ದಸರಾದಲ್ಲಿ ರಹಮಾನ್‌ ತಂಡದ ಗಾನ ಲೋಕ, ವಿಜಯಪ್ರಕಾಶ್‌ ಜೈ ಹೋ, ಮಿಂಚಿದ ಮೈಸೂರು ಗಾಯಕಿ ರಕ್ಷಿತಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ಯುವ ದಸರಾದಲ್ಲಿ ರಹಮಾನ್‌ ತಂಡದ ಗಾನ ಲೋಕ, ವಿಜಯಪ್ರಕಾಶ್‌ ಜೈ ಹೋ, ಮಿಂಚಿದ ಮೈಸೂರು ಗಾಯಕಿ ರಕ್ಷಿತಾ

ಮೈಸೂರು ಯುವ ದಸರಾದಲ್ಲಿ ರಹಮಾನ್‌ ತಂಡದ ಗಾನ ಲೋಕ, ವಿಜಯಪ್ರಕಾಶ್‌ ಜೈ ಹೋ, ಮಿಂಚಿದ ಮೈಸೂರು ಗಾಯಕಿ ರಕ್ಷಿತಾ

 ಮೂರು ದಶಕದ ಹಿಂದೆ ಹೊಸ ಅಲೆ ಸೃಷ್ಟಿಸಿದ ಎ ಆರ್‌ ರಹಮಾನ್‌ ಮೈಸೂರು ಯುವ ದಸರಾದಲ್ಲಿ ಅದೇ ಅಲೆ ಎಬ್ಬಿಸಿ ಯುವ ಮನಸುಗಳನ್ನು ಗೆದ್ದರು. ಅವರೊಂದಿಗೆ ಜೊತೆಯಾದವರು ಕನ್ನಡಿಗ ಗಾಯಕ ವಿಜಯಪ್ರಕಾಶ್‌. ಹೀಗಿತ್ತು ಯುವ ದಸರಾ ಸಂಭ್ರಮ.

ಒಂದು ಕಾಲಕ್ಕೆ ಬಾಂಬೆಯಂತಹ ಚಿತ್ರಗಳ ಮೂಲಕ ಹೃದಯ ಗೆದ್ದ, ಟಪ್ಪಾಂಗುಚ್ಚಿ ಹಾಡುಗಳಿಂದಲೂ ಯುವ ಮನ ಸೆಳೆದ ರಹಮಾನ್‌ ಮೈಸೂರಿನಲ್ಲಿ ಬುಧವಾರ ರಾತ್ರಿ ಯುವ ದಸರಾದಲ್ಲಿ ಎರಡೂವರೆ ಗಂಟೆ ಎಲ್ಲರನ್ನೂ ಜೈ ಹೋ ಎನ್ನಿಸಿದರು,
icon

(1 / 8)

ಮೈಸೂರು ದಸರಾ ಅಂಗವಾಗಿ ನಗರ ಹೊರ ವಲಯ ಉತ್ತನಹಳ್ಳಿ ಆವರಣದಲ್ಲಿ  ಆಯೋಜಿಸಿದ್ದ ಯುವ ದಸರಾದ 4 ನೇ ದಿನದ ಕಾರ್ಯಕ್ರಮವು  ಅದ್ದೂರಿಯಾಗಿ ಯಶಸ್ವಿ ಕಂಡಿತು.  ಸುಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಸಂಯೋಜಕರಾದ ಎ ಆರ್ ರೆಹಮಾನ್ ಕಂಠ ಸಿರಿಯೂ ಯುವ ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ತುಂಬಿತು. 
icon

(2 / 8)

ದೇಶ ಭಕ್ತಿ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿ ರೋಮಾಂಚನಗೊಳಿಸಿದ ರಹಮಾನ್‌ ತಂಡ. ಫನ ಫಾನ ಗೀತೆಯ ಬೀಟ್ಸ್ ಗಳಿಗೆ ಯುವ ಸಮೂಹವು ಕುಣಿದು ಕುಪ್ಪಳಿಸುವಂತೆ ಮಾಡಿದರು.
icon

(3 / 8)

ಎ .ಆರ್ ರೆಹಮಾನ್ ಅವರ ಕಂಠದಿಂದ ಮೂಡಿಬಂದ  ಧಮ್ ದಾರ ಧಮ್ ದಾರ ಮಾಸ್ತು ಧಮ್ ದಾರ ಗೀತೆಗೆ ಪ್ರೇಕ್ಷಕರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಯುವ ಸಂಭ್ರಮವನ್ನು ಸಂಭ್ರಮಿಸಿದರು.
icon

(4 / 8)

ಮೈಸೂರಿನ ಯುವ ಪ್ರತಿಭೆ ರಕ್ಷಿತಾ ಕೂಡ ಯುವ ದಸರಾದಲ್ಲಿ ರಹಮಾನ್‌ ಅವರೊಂದಿಗೆ ಮಿಂಚಿ ಹಲವಾರು ಹಾಡುಗಳನ್ನು ಹಾಡಿದರು.
icon

(5 / 8)

ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಪಲ್.ಪಲ್ ಹೆ ಬಾರಿ ಗೀತೆಯ ಹಾಡಿ ಅದೇ ಗೀತೆಯನ್ನು ಕನ್ನಡಕ್ಕೆ. ತರ್ಜುಮೆ ಮಾಡಿ ರಾಮ ನಿನ್ನ ಮನದಲ್ಲಿ ರಾಮ ನನ್ನ ಮನದಲ್ಲಿ ಎನುವ  ಮೂಲಕ ತಮ್ಮ ಸುಮಧುರ ಕಂಠದಿಂದ  ಮೈಸೂರು ಜನರ ಮನ ಸೆಳೆದರು. ರೋಜಾ ಜಾನೆ ಮನ್  ಗೀತೆಯ ಅಲಪ್ಪದೊಂದಿಗೆ ಕನ್ನಡ ಹಿಂದಿ ತಮಿಳು ಮೂರು ಭಾಷೆಯಲ್ಲೂ ಕೂಡ  ಗಾಯಕಿ ಶ್ವೇತಾ ಮೋಹನ್ ಅವರ ಧ್ವನಿ ಗುಡಿಸಿ ಹಾಡಿ ಪ್ರೇಕ್ಷಕರ ಮನ ಸೆಳೆದರು. 
icon

(6 / 8)

ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಮಧುರ ಕಂಠ ಸಿರಿಯಾ  ಮೂಲಕ, ರಾಧೆ ಕೆ ಮೇ ಕೇಸೇ ಚಲೇ, ರಾಧಾ ಕೆ ಮೇ ಚಲೇ,  ಜಿಯಾ ಚಲೇ ಜಾ ಚಲೇ ಗೀತೆಯನ್ನು    ನಾಟ್ಯದ ಜೊತೆಗೆ ಪ್ರಸ್ತುತ ಪಡಿಸಿದರು.  ಅವರ ಧ್ವನಿ ಮತ್ತು ಹೆಜ್ಜೆಯೂ  ಯುವ ಮನಸ್ಸಿಗೆ ಮುಟ್ಟಿ ನೃತ್ಯ ರೂಪ ಪಡೆದಿತ್ತು. 
icon

(7 / 8)

ಎನ್ನ ಸೋಣ ರಭಾನೆ ಭಾನಯ, ಮಾಟಕ್ ಕಲಿ ಮಾತಾತ್ ಕಲಿ,  ಧಮ್ ದಾರ ಧನ್ ದಾರ, ಕನ್ನಡದ ಕಿರುನಗೆ ಕಿರುನಗೆ ಹೃದಯದಲ್ಲಿ  ಗೀತೆ,   ಹೀಗೆ  ಸುಮಾರು 20 ಕ್ಕಿಂತ ಹೆಚ್ಚಿನ ವಿವಿಧ ತಮಿಳು ಹಿಂದಿ ಕನ್ನಡ ಗೀತೆಗಳ ಮೂಲಕ ಎ ಅರ್   ರೆಹಮಾನ್ ಮತ್ತು ತಂಡದ ಗಾಯಕರು  ಯುವ ಜನತೆಯ ಮನ ಸೆಳೆದರು 
icon

(8 / 8)

ಇತರ ಗ್ಯಾಲರಿಗಳು