ಹೋಟೆಲ್ ಬಿಸ್ನೆಸ್, ಮಾಡೆಲಿಂಗ್ನಲ್ಲಿ ಯಶಸ್ಸು ಕಂಡು ತಂದೆ ಕನಸು, ತನ್ನ ಆಸೆ ಎರಡನ್ನೂ ನೆರವೇರಿಸಿಕೊಂಡ ಕೊಲ್ಕತ್ತಾ ಯುವತಿ ನಂದಿನಿ ಗಂಗೂಲಿ
ದುಡಿಯಬೇಕೆಂಬ ಮನಸ್ಸು, ಛಲ ಇದ್ದರೆ ಯಾವುದೇ ಬಿಸ್ನೆಸ್ ಆದ್ರೂ ಯಶಸ್ಸು ಕಾಣಬಹುದು. ಈ ರೀತಿ ಸಕ್ಸಸ್ ಕಂಡ ಎಷ್ಟೋ ಮಾದರಿ ಯುವಕ/ಯುವತಿಯರು ನಮ್ಮ ನಡುವೆ ಇದ್ದಾರೆ. ಇದೀಗ ಕೊಲ್ಕತ್ತಾ ಯುವತಿಯೊಬ್ಬರು ಇಂಥದ್ದೇ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
(1 / 7)
ರೆಸ್ಟೋರೆಂಟ್ ತೆರೆಯಬೇಕೆಂಬ ತಂದೆಯ ಕನಸನ್ನು ಈಡೇರಿಸಲು ಕೊಲ್ಕತ್ತಾದ ನಂದಿನಿ ಗಂಗೂಲಿ ಎಂಬ ಯುವತಿ ಮೊದಲು ಡಾಲ್ಹೌಸಿ ಸ್ಕ್ವೇರ್ನಲ್ಲಿ ಪುಟ್ಟ ಹೋಟೆಲ್ ಒಂದನ್ನು ತೆರೆದರು. ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಅಡುಗೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿ ಅವರು ರಾತ್ರೋರಾತ್ರಿ ಜನಪ್ರಿಯರಾದರು.
(2 / 7)
ಕ್ರಮೇಣ ನಂದಿನಿ ನ್ಯೂಟೌನ್ನಲ್ಲಿ ಹೊಸ ತಿಂಡಿ ಅಂಗಡಿ ತೆರೆದರು, ಕೆಲವು ವರ್ಷಗಳು ಅಲ್ಲಿನ ಜನರಿಗೆ ತಮ್ಮ ಕೈ ರುಚಿ ತೋರಿಸಿ, ಈಗ ಆಕಾಂಕ್ಷಾ ಜಂಕ್ಷನ್ ಬಳಿ ಎಸಿ ರೆಸ್ಟೊರೆಂಟ್ ತೆರೆದಿದ್ದಾರೆ. ನಂದಿನಿ ಅವರ ಈ ಸಾಧನೆಗೆ ಸ್ನೇಹಿತರು, ಸಾರ್ವಜನಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
(3 / 7)
ನವೆಂಬರ್ 24(ಭಾನುವಾರ) ನಂದಿನಿ ಹೊಸ ರೆಸ್ಟೋರೆಂಟ್ ಉದ್ಘಾಟನೆ ನಡೆಯಲಿದೆ. ನಂದಿನಿ ಹಾಗೂ ನಂದಿನಿ ಕೈ ರುಚಿ ಸವಿದಿರುವವರು ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನಿಮ್ಮ ಈ ಫುಡ್ ಬಿಸ್ನೆಸ್ ಜರ್ನಿ ಇನ್ನಷ್ಟು ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ.
(4 / 7)
ಹಳೆಯ ಶಾಪ್ನಲ್ಲಿ ಲೈಟಿಂಗ್ ಸಮಸ್ಯೆ ಇತ್ತು, ಜೊತೆಗೆ ಬೇಸಿಗೆಯಲ್ಲಿ ಜನರು ಬಹಳ ಶೆಕೆ ಅನುಭವಿಸುತ್ತಿದ್ದರು. ಆದರೆ ಈ ಹೊಸ ರೆಸ್ಟೋರೆಂಟ್ನಲ್ಲಿ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ. ನಿಮಗೆ ಇಲ್ಲಿ ಹೊಸ ಫೀಲಿಂಗ್ ಇರುತ್ತದೆ. ನವೆಂಬರ್ 24 ರಿಂದ ನಮ್ಮ ರೆಸ್ಟೋರೆಂಟ್ಗೆ ಬನ್ನಿ, ನಿಮ್ಮಿಷ್ಟದ ರುಚಿ ಸವಿಯಿರಿ ಎಂದು ನಂದಿನಿ ಭೋಜಪ್ರಿಯರನ್ನು ಆಹ್ವಾನಿಸಿದ್ದಾರೆ.
(5 / 7)
ಹೋಟೆಲ್ ಬಿಸ್ನೆಸ್ ಜೊತೆಗೆ ನಂದಿನಿ ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್ನಲ್ಲೂ ಸಕ್ರಿಯರಾಗಿದ್ದಾರೆ, ಫುಡ್ ವ್ಲಾಗ್ ಕೂಡಾ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ. ಮಾಡೆಲಿಂಗ್, ಆಕ್ಟಿಂಗ್ ನನ್ನ ಕನಸು, ರೆಸ್ಟೋರೆಂಟ್ ತೆರೆಯುವುದು ಅಪ್ಪನ ಕನಸು, ಎರಡೂ ಈಗ ಈಡೇರಿದೆ ಎಂದು ನಂದಿನಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಇತರ ಗ್ಯಾಲರಿಗಳು