TamilNadu Rains: ಮಳೆಯಲ್ಲಿ ಮುಳುಗಿತು ದಕ್ಷಿಣ ತಮಿಳುನಾಡು, ಕುಂಭದ್ರೋಣ ಮಳೆಗೆ ಬೆಚ್ಚಿದ ಜನ: ಸಂಚಾರ ಸಂಪೂರ್ಣ ಅಸ್ತವ್ಯಸ್ತ, ಹೀಗಿದೆ ಅವಾಂತರ
- ಇದು ನಿಜಕ್ಕೂ ಕುಂಭದ್ರೋಣ ಮಳೆಯೇ. ದಕ್ಷಿಣ ತಮಿಳುನಾಡಿನ ಐದಾರು ಜಿಲ್ಲೆಗಳು ಭಾರೀ ಮಳೆಗೆ ತತ್ತರಿಸಿ ಹೋಗಿ ಇತರೆ ಭಾಗದಿಂದ ಸಂಪರ್ಕ ಕಳೆದುಕೊಂಡಿದೆ. ಜಲಾಶಯಗಳು, ನದಿಗಳು ಭರ್ತಿಯಾಗಿವೆ. ಕೆರೆ ಒಡೆದು ಊರುಗಳಿಗೆ ನೀರು ನುಗ್ಗಿದೆ. ರಸ್ತೆಗಳು ಬಿರುಕು ಬಿಟ್ಟು ಸಂಚಾರವೂ ಸಂಪೂರ್ಣ ಹಾಳಾಗಿದೆ. ರೈಲ್ವೆ ಸೇತುವೆಗಳಿಗೂ ಹಾನಿಯಾಗಿದೆ. ಮಳೆಯ ಅವಾಂತರದ ಚಿತ್ರಣ ಇಲ್ಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 9)
ಭಾರೀ ಮಳೆಗೆ ದಕ್ಷಿಣ ತಮಿಳುನಾಡು ಅಕ್ಷರಶಃ ಮುಳುಗಿ ಹೋಗುವ ರೀತಿಯ ವಾತಾವರಣ ನಿರ್ಮಾಣಗೊಂಡಿದೆ. ಭಾರೀ ಮಳೆಯಿಂದ ತೂತುಕುಡಿ ಜಿಲ್ಲೆಯಲ್ಲಿ ಕೆರೆ ಒಡದು ನೀರು ಹರಿದು ಹೋಗುತ್ತಿದೆ.
(2 / 9)
ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವೇ ಕುಸಿದು ಹೋಗಿ ರೈಲು ಸಂಚಾರ ವ್ಯತ್ಯಯವಾಗಿದೆ.
(3 / 9)
ತಮಿಳುನಾಡಿನ ದಕ್ಷಿಣ ಭಾಗದ ಐದಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಸಂಪೂರ್ಣ ಹಾಳಾಗಿದೆ.
(4 / 9)
ತಮಿಳುನಾಡಿನ ಕನ್ಯಾಕುಮಾರಿ ಸಮೀಪ ಭಾರೀ ಮಳೆಗೆ ದೇಗುಲಕ್ಕೆ ನೀರು ನುಗ್ಗಿದೆ. ದೇವರು ಕೂಡ ಮಳೆಯಿಂದ ಜಲಬಂಧನಕ್ಕೆ ಒಳಗಾಗಿರುವುದು ಕಂಡು ಬಂದಿದೆ.
(5 / 9)
ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಿರುನೆಲ್ವೇಲಿ ಸಮೀಪ ಕೆರೆ ಒಡೆದು ನೀರು ಜಮೀನಗಳಿಗೆ ನುಗ್ಗೆ ಹೊಳೆಯಂತೆ ಹರಿಯುತ್ತಿರುವುದು ಕಂಡು ಬಂದಿದೆ.
(6 / 9)
ತಮಿಳುನಾಡಿನ ತಿರುಲೆನ್ವೇಲಿ ನಗರದ ರೈಲ್ವೆ ನಿಲ್ದಾಣ ಎದುರಿನ ರಸ್ತೆಯಿದು. ಭಾರೀ ಮಳೆಯಿಂದ ಹಲವಾರು ಮಳಿಗೆಗಳು ಮುಳುಗಿ ಹೋಗಿವೆ,
(7 / 9)
ತಮಿಳುನಾಡಿನ ಟುಟಿಕಾರನ್ ನಗರದಲ್ಲಂತೂ ಭಾರೀ ಮಳೆ. ರಸ್ತೆ ಪಕ್ಕದ ಚರಂಡಿಗಳೇ ಹೊಳೆ ರೀತಿ ಹರಿಯುತ್ತಿದ್ದು. ಹಲವು ಬಡಾವಣೆಗಳ ಸಂಪರ್ಕವೂ ಕಡಿತಗೊಂಡಿದೆ.
(8 / 9)
ತಮಿಳುನಾಡಿನ ಹಲವು ನಗರಗಳಲ್ಲಿ ಮಳೆಯ ವಾತಾವರಣ. ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ಜನ ಇದರಲ್ಲಿಯೇ ಸಂಚರಿಸುವುದು ಕಂಡು ಬರುತ್ತಿದೆ.
ಇತರ ಗ್ಯಾಲರಿಗಳು