ಬರೀ ಕೆಜಿಎಫ್, ಕಾಂತಾರ ಮಾತ್ರವಲ್ಲ.. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕಿವೆ ಇನ್ನೂ ಮೂರು ಪ್ರಶಸ್ತಿ
- 70th National Film Awards 2024: ಫೀಚರ್ ಫಿಲ್ಮ್ಸ್ ವಿಭಾಗದಿಂದ ಕನ್ನಡಕ್ಕೆ ಒಟ್ಟು 4 ಅವಾರ್ಡ್‌ಗಳು ಬಂದಿವೆ. ಆ ಪೈಕಿ 2 ಪ್ರಶಸ್ತಿಗಳನ್ನು ‘ಕೆಜಿಎಫ್: ಚಾಪ್ಟರ್ 2’ ಪಡೆದರೆ, ಇನ್ನೆರಡು ‘ಕಾಂತಾರ’ ಚಿತ್ರಕ್ಕೆ ಲಭಿಸಿವೆ. ಈ ಸಿನಿಮಾಗಳ ಜತೆಗೆ ನಾನ್ ಫೀಚರ್ ಫಿಲಂಸ್ ವಿಭಾಗದಲ್ಲಿ ಮೂರು ಪ್ರಶಸ್ತಿ ಸಿಕ್ಕಿವೆ. ಒಟ್ಟಾರೆ ಕನ್ನಡಕ್ಕೆ 7 ಅವಾರ್ಡ್‌ಗಳು ಬಂದಿವೆ

(1 / 6)
ಫೀಚರ್ ಫಿಲ್ಮ್ಸ್ ವಿಭಾಗದಿಂದ ಕನ್ನಡಕ್ಕೆ ಒಟ್ಟು 4 ಅವಾರ್ಡ್‌ಗಳು ಬಂದಿವೆ. ಆ ಪೈಕಿ 2 ಪ್ರಶಸ್ತಿಗಳನ್ನು ‘ಕೆಜಿಎಫ್: ಚಾಪ್ಟರ್ 2’ ಪಡೆದರೆ, ಇನ್ನೆರಡು ‘ಕಾಂತಾರ’ ಚಿತ್ರಕ್ಕೆ ಲಭಿಸಿವೆ. ಈ ಎರಡು ಸಿನಿಮಾಗಳ ಜತೆಗೆ ನಾನ್ ಫೀಚರ್ ಫಿಲಂಸ್ ವಿಭಾಗದಲ್ಲಿ ಮೂರು ಪ್ರಶಸ್ತಿ ಸಿಕ್ಕಿವೆ. ಒಟ್ಟಾರೆ ಈ ಸಲ ಕನ್ನಡಕ್ಕೆ ಏಳು ಅವಾರ್ಡ್‌ಗಳ ಆಗಮನವಾಗಿದೆ.
(2 / 6)
ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸಹ ಒಟ್ಟು ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ಸಾಹಸ ನಿರ್ದೇಶನ ಮತ್ತು ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿಯೂ ಪ್ರಶಸ್ತಿ ಪಡೆದಿದೆ.
(3 / 6)
ಕಾಂತಾರ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ ರಿಷಬ್ ಶೆಟ್ಟಿ ಅದೇ ರೀತಿ ಅತ್ಯುತ್ತಮ ಮನರಂಜನಾ ವಿಭಾಗದಲ್ಲಿಯೂ ಕಾಂತಾರ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿದೆ.
(4 / 6)
ನಾನ್ ಫೀಚರ್ ಫಿಲಂಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿವೆ. ‘ಮಧ್ಯಂತರ’ ಚಿತ್ರಕ್ಕಾಗಿ ‘ಅತ್ಯುತ್ತಮ ಸಂಕಲನ’ ವಿಭಾಗದಲ್ಲಿ ಸಂಕಲನಕಾರ ಸುರೇಶ್ ಅರಸ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
(5 / 6)
‘ಮಧ್ಯಂತರ’ ಚಿತ್ರದ ನಿರ್ದೇಶನಕ್ಕಾಗಿ ಬಸ್ತಿ ದಿನೇಶ್ ಶೆಣೈ ಅವರಿಗೆ ‘ಬೆಸ್ಟ್ ಡೆಬ್ಯೂ ಫಿಲ್ಮ್ ಆಫ್ ಎ ಡೈರೆಕ್ಟರ್’ ಪ್ರಶಸ್ತಿ ಲಭಿಸಿದೆ.
ಇತರ ಗ್ಯಾಲರಿಗಳು