ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ತಿಳಿಯಿರಿ

ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ತಿಳಿಯಿರಿ

ನವರಾತ್ರಿ ಹಬ್ಬ ಅಕ್ಟೋಬರ್ 3ಕ್ಕೆ ಶುರುವಾಗುತ್ತಿದ್ದು, 12ಕ್ಕೆ ಸಂಪನ್ನವಾಗಲಿದೆ. ಮೊದಲ ದಿನ ಶೈಲಪುತ್ರೀ ದೇವಿಯನ್ನು ಆರಾಧಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ಮತ್ತು ಇತರೆ ಮಾಹಿತಿ ತಿಳಿದಿರಿ.

ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ತಾಯಿಯೇ ಶೈಲಪುತ್ರೀ ದೇವಿ. ಪರ್ವತ ರಾಜನ ಮಗಳಾದ ಕಾರಣ ಶೈಲಾ ಪುತ್ರೀ ಎಂಬ ಹೆಸರು. ಹಿಮಾಲಯದ ರಾಜ ಹಿಮವಂತನ ಮಗಳಾಗಿ ಹುಟ್ಟಿದ ದೇವಿ. ಆಕೆಯನ್ನು ಸತಿ ಭವಾನಿ, ಹೇಮಾವತಿ ಮತ್ತು ಪಾರ್ವತಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತಾಯಿ ಶೈಲಪುತ್ರಿಯನ್ನು ದುರ್ಗಾ ದೇವಿಯ ಮೊದಲ ಮತ್ತು ಪ್ರಮುಖ ರೂಪವೆಂದು ಪೂಜಿಸಲಾಗುತ್ತದೆ, ಶಕ್ತಿ, ಪರಿಶುದ್ಧತೆ ಮತ್ತು ದೈವತ್ವವನ್ನು ಒಳಗೊಂಡಿರುವ ತಾಯಿ ಈಕೆ. 
icon

(1 / 10)

ತಾಯಿ ಶೈಲಪುತ್ರಿಯು ಸತಿಯ ಪುನರ್ಜನ್ಮದ ರೂಪ. ದಕ್ಷ ರಾಜನ ಮಗಳು ಮತ್ತು ಶಿವನ ಪತ್ನಿ. ಹಿಂದೂ ಪುರಾಣ ಕಥೆಯ ಪ್ರಕಾರ, ಸತಿಯು ತನ್ನ ತಂದೆಯು ಆಯೋಜಿಸಿದ ಯಾಗಕ್ಕೆ ಹೋಗಲು ಬಯಸಿದ್ದಳು. ಆದರೆ ಆಹ್ವಾನವಿಲ್ಲದೆ ಹೋಗ ಬಾರದೆಂದು ಶಿವ ತಾಕೀತು ಮಾಡಿದ್ದ. ಆದರೂ ಸತಿ ಆ ಕಾರ್ಯಕ್ರಮಕ್ಕೆ ತವರಿಗೆ ಹೋಗಿದ್ದಳು ಅಲ್ಲಿ ದಕ್ಷನು ಶಿವನನ್ನು ಅಪಮಾನಿಸಿದ ಕಾರಣ, ಅದನ್ನು ಸಹಿಸಲಾಗದೆ ಅದೇ ಯಾಗ ಕುಂಡದಲ್ಲಿ ಆತ್ಮಾಹುತಿ ಮಾಡಿಕೊಂಡ ಉಲ್ಲೇಖವಿದೆ.
icon

(2 / 10)

ಇದೇ ಸತಿಯು ನಂತರ ಹಿಮವಂತನ ಮಗಳಾದ ಶೈಲಪುತ್ರಿಯಾಗಿ ಮರುಜನ್ಮ ಪಡೆದಳು. ಈ ರೀತಿಯಾಗಿ ಅವಳು ಪರ್ವತಗಳ ದೇವತೆ ಪಾರ್ವತಿ ಎಂದು ಕರೆಯಲ್ಪಟ್ಟಳು.
icon

(3 / 10)

ಶೈಲಪುತ್ರಿಯನ್ನುಲೌಕಿಕ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ನೀಡುವ ಸಾಮರ್ಥ್ಯಕ್ಕಾಗಿ ಪೂಜಿಸಲಾಗುತ್ತದೆ. ಶೈಲಪುತ್ರಿಯನ್ನು ಪೂಜಿಸುವ ಮನೆಗಳಲ್ಲಿ ಎಂದಿಗೂ ಆಹಾರ ಮತ್ತು ಸಂಪನ್ಮೂಲಗಳ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.  ಅದಕ್ಕಾಗಿಯೇ ನವರಾತ್ರಿಯ ಮೊದಲ ದಿನದಂದು ಅವಳನ್ನು ಪೂಜಿಸಲಾಗುತ್ತದೆ.
icon

(4 / 10)

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶೈಲಪುತ್ರಿಯ ಪುರಾತನ ದೇವಾಲಯವಿದ್ದು, ಆಕೆಯ ದರ್ಶನ ಮಾತ್ರದಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ. ಇದಲ್ಲದೆ, ಚಂದ್ರನ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ, ಚಂದ್ರನ ಶಕ್ತಿದೇವತೆ ಶೈಲ ಪುತ್ರಿ ಎಂದು ಪರಿಗಣಿಸಲಾಗಿದೆ.
icon

(5 / 10)

ಶೈಲಪುತ್ರಿ ದೇವಿಯ ವಾಹನ ವೃಷಭವಾಗಿದ್ದು ಆಕೆಯನ್ನು ವೃಷಾರೂಢ ಎಂದು ಕರೆಯಲಾಗುತ್ತದೆ. ಶೈಲಪುತ್ರಿ ದೇವಿಯನ್ನು ಎರಡು ಕೈಗಳ ದೇವಿಯನ್ನಾಗಿ ಚಿತ್ರಿಸಲಾಗಿದ್ದು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ.
icon

(6 / 10)

ಮನುಷ್ಯ ಶರೀರದ ಮೂಲಾಧಾರ ಚಕ್ರದಲ್ಲಿ (ಮೂಲ ಚಕ್ರ)  ಶೈಲಪುತ್ರಿಯು ನೆಲೆಸಿದ್ದಾಳೆ. ಈ ಚಕ್ರವನ್ನು ಜಾಗೃತಗೊಳಿಸುವುದು ಶಿವನ ಕಡೆಗೆ ಆಧ್ಯಾತ್ಮಿಕ ಹಾದಿಯಲ್ಲಿ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ. ನವರಾತ್ರಿಯ ಮೊದಲ ದಿನದಂದು, ಭಕ್ತರು ಮೂಲಾಧಾರ ಚಕ್ರವನ್ನು ಜಾಗೃತಗೊಳಿಸುವತ್ತ ಗಮನಹರಿಸುತ್ತಾರೆ,
icon

(7 / 10)

ಶೈಲಪುತ್ರಿಯ ಆರಾಧನೆಗೆ ಬಿಳಿ ಹೂವು, ಸಿಂಧೂರ, ಮತ್ತು ಅಕ್ಷತೆ ಸಮರ್ಪಿಸುತ್ತಾರೆ. ಉಪವಾಸವಿದ್ದು ದುರ್ಗಾ ಸಪ್ತಶತಿ ಪಠಿಸುತ್ತಾರೆ.. ಶುದ್ಧ ತುಪ್ಪದಿಂದ ಮಾಡಿದ ಸಿಹಿತಿಂಡಿಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಗಾಗಿ ತಾಯಿಯ ಆಶೀರ್ವಾದವನ್ನು ಕೋರುತ್ತಾರೆ.
icon

(8 / 10)

ಯಾ ದೇವಿ ಸರ್ವಭೂತೇಷು ಮಾ ಶೈಲಪುತ್ರೀ ರೂಪೇಣ ಸಂಸ್ಥಿತಾ| ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ॥ ಎನ್ನುತ್ತ ಶೈಲಪುತ್ರೀ ದೇವಿಯನ್ನು ಸ್ತುತಿಸಲಾಗುತ್ತದೆ. 
icon

(9 / 10)

ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮಂತ್ರ ಇದು: ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ।ವೃಷಾರೂಢಾಂ ಶೂಲಧರಾಂ ಶೈಲಪುತ್ರೀ ಯಶಸ್ವಿನೀಮ್ ॥
icon

(10 / 10)

ಇತರ ಗ್ಯಾಲರಿಗಳು