ಪ್ಯಾರಿಸ್ ಒಲಿಂಪಿಕ್ಸ್ 2024: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಿಶಾಂತ್ ದೇವ್, ಪದಕದ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ
- Jose Gabriel Rodriguez: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹರಿಯಾಣದ ಬಾಕ್ಸರ್ ನಿಶಾಂತ್ ದೇವ್ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದು, ಪದಕ ಗೆಲ್ಲಲು ಒಂದು ಹೆಜ್ಜೆ ದೂರದಲ್ಲಿದ್ದಾರೆ.
- Jose Gabriel Rodriguez: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹರಿಯಾಣದ ಬಾಕ್ಸರ್ ನಿಶಾಂತ್ ದೇವ್ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿದ್ದು, ಪದಕ ಗೆಲ್ಲಲು ಒಂದು ಹೆಜ್ಜೆ ದೂರದಲ್ಲಿದ್ದಾರೆ.
(1 / 5)
ಭಾರತದ ಬಾಕ್ಸರ್ ನಿಶಾಂತ್ ದೇವ್ ಪದಕದಿಂದ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನ 5ನೇ ದಿನವಾದ ಬುಧವಾರ ನಡೆದ ಪುರುಷರ 71 ಕೆಜಿ ವಿಭಾಗದಲ್ಲಿ ನಿಶಾಂತ್ ಈಕ್ವೆಡಾರ್ನ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು.
(2 / 5)
ನಿಶಾಂತ್ ದೇವ್ 3-2 ಅಂತರದಲ್ಲಿ ರೊಡ್ರಿಗಸ್ ಅವರನ್ನು ಮಣಿಸಿದರು. ನಿಶಾಂತ್ ಮೊದಲ ಸುತ್ತನ್ನು ಸುಲಭವಾಗಿ ಗೆದ್ದರು. ಆದರೆ ಎದುರಾಳಿ ಅಂತಿಮ ಸುತ್ತುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರತಿರೋಧ ತೋರಿದರು.
(3 / 5)
ಈಕ್ವೆಡಾರ್ ಆಟಗಾರನ ಅತ್ಯುತ್ತಮ ಪ್ರದರ್ಶನದ ನಡುವೆಯೂ ಕಂಬ್ಯಾಕ್ ಮಾಡಿದ ಭಾರತದ ನಿಶಾಂತ್, ತಮ್ಮ ಸ್ಕೋರ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ನಿಶಾಂತ್ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ಪದಕ ಗೆಲ್ಲುವ ಭರವಸೆ ಹೆಚ್ಚಿಸಿದರು.
(4 / 5)
ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಜೇಂದರ್ ಕುಮಾರ್ ನಂತರ ಪುರುಷ ಬಾಕ್ಸರ್ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ. 2008ರಲ್ಲಿ ವಿಜೇಂದರ್ ಬಳಿಕ ಭಾರತದ ಯಾವುದೇ ಪುರುಷ ಬಾಕ್ಸರ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿಲ್ಲ, ಕ್ವಾರ್ಟರ್ ಫೈನಲ್ನಲ್ಲಿ ಗೆದ್ದರೆ ನಿಶಾಂತ್ಗೆ ಪದಕ ಖಚಿತವಾಗಲಿದೆ. ಏಕೆಂದರೆ ಸೆಮಿಫೈನಲ್ ನಾಲ್ವರಿಗೂ ಪದಕ ಸಿಗಲಿದೆ.
ಇತರ ಗ್ಯಾಲರಿಗಳು