Ramita Jindal: ಶೂಟಿಂಗ್​​​ನಲ್ಲಿ ಫೈನಲ್​ಗೇರುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ರಮಿತಾ ಜಿಂದಾಲ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramita Jindal: ಶೂಟಿಂಗ್​​​ನಲ್ಲಿ ಫೈನಲ್​ಗೇರುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ರಮಿತಾ ಜಿಂದಾಲ್

Ramita Jindal: ಶೂಟಿಂಗ್​​​ನಲ್ಲಿ ಫೈನಲ್​ಗೇರುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ ರಮಿತಾ ಜಿಂದಾಲ್

  • Ramita Jindal Records: ಜುಲೈ 28ರಂದು ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್​​ ಅರ್ಹತಾ ಸುತ್ತಿನಲ್ಲಿ ರಮಿತಾ ಜಿಂದಾಲ್ 631.5 ಅಂಕ ಪಡೆದು ಫೈನಲ್ ತಲುಪಿ ದಾಖಲೆ ನಿರ್ಮಿಸಿದ್ದಾರೆ.

ಜುಲೈ 28ರ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್​​​ ಅರ್ಹತಾ ಸುತ್ತಿನಲ್ಲಿ ರಮಿತಾ ಜಿಂದಾಲ್ 631.5 ಅಂಕಗಳೊಂದಿಗೆ 5ನೇ ಸ್ಥಾನ ಪಡೆದು ಫೈನಲ್​ ಪ್ರವೇಶಿಸಿದರು. ಭಾರತದ ಮತ್ತೊಬ್ಬ ಶೂಟರ್ ಎಲವೇನಿಲ್ ವಲರಿವನ್ 630.7 ಅಂಕಗಳೊಂದಿಗೆ 10 ಸ್ಥಾನ ಪಡೆದು ಕೊಂಚದರಲ್ಲಿ ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾದರು.
icon

(1 / 6)

ರಮಿತಾ ಅವರು ಆರು ಸುತ್ತುಗಳಲ್ಲಿ ಕ್ರಮವಾಗಿ 104.3, 106.0, 104.9, 105.3, 105.3 ಮತ್ತು 105.7 ಸ್ಕೋರ್​ ಮಾಡಿದರು. ಆರಂಭದಲ್ಲಿ ಹಿಂದುಳಿದಿದ್ದ ರಮಿತಾ, ಫೈನಲ್​ಗೆ ಅರ್ಹತೆ ಪಡೆಯುವುದು ಕಷ್ಟವೆಂದು ಭಾವಿಸಲಾಗಿತ್ತು. ನಂತರ ಪುನರಾಗಮನ ಮಾಡಿ ಫೈನಲ್​ಗೆ ಅರ್ಹತೆ ಪಡೆದರು.
icon

(2 / 6)

ಫೈನಲ್​ಗೆ ಪ್ರವೇಶಿಸುವ ಮೂಲಕ ರಮಿತಾ ಅವರು ಐತಿಹಾಸಿಕ ದಾಖಲೆಯನ್ನೂ ಬರೆದರು. ಕಳೆದ 20 ವರ್ಷಗಳಲ್ಲಿ ರೈಫಲ್​ನಲ್ಲಿ ಫೈನಲ್​ಗೇರಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. 2004ರಲ್ಲಿ ರಮಿತಾ ಅವರ ಕೋಚ್​​​ ಸುಮಾ ಶಿರೂರ್​​ ಫೈನಲ್​ಗೇರಿದ್ದರು.
icon

(3 / 6)

ಶೂಟಿಂಗ್​​ನಲ್ಲಿ (ರೈಫಲ್ಸ್, ಪಿಸ್ತೂಲ್​​ನಲ್ಲಿ) ರಮಿತಾ ಕಳೆದ 20 ವರ್ಷಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಅವರ ನಂತರ ಪದಕ ಸುತ್ತಿಗೆ ತಲುಪಿದ 2ನೇ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂದು (ಜುಲೈ 29) ಮಧ್ಯಾಹ್ನ ಫೈನಲ್ ಸ್ಪರ್ಧೆ ನಡೆಯಲಿದೆ.
icon

(4 / 6)

ಒಲಿಂಪಿಕ್ಸ್​ ಇತಿಹಾಸದಲ್ಲಿ ಶೂಟಿಂಗ್​ನಲ್ಲಿ ಪದಕ ಜಯಿಸಿದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ. ಇದೀಗ ರಮಿತಾ ಚಿನ್ನ ಗೆಲ್ಲುವ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಚಿನ್ನ ಗೆದ್ದರೆ, ಒಲಿಂಪಿಕ್ಸ್​​ನಲ್ಲಿ ಸ್ವರ್ಣ ಗೆಲ್ಲುವ ಮೊದಲ ಮಹಿಳಾ ಶೂಟರ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
icon

(5 / 6)

ದಕ್ಷಿಣ ಕೊರಿಯಾ (634.5, ಒಲಿಂಪಿಕ್ ದಾಖಲೆ), ನಾರ್ವೆ (633.2), ಸ್ವಿಟ್ಜರ್ಲೆಂಡ್ (632.6), ಚೀನಾ (632.6), ಭಾರತ (631.5), ಕಜಕಿಸ್ತಾನ್ (631.4), ಯುಎಸ್ಎ (631.4) ಮತ್ತು ಫ್ರಾನ್ಸ್ (631.3).
icon

(6 / 6)

ಇತರ ಗ್ಯಾಲರಿಗಳು