Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ

Rohit Sharma: ಟೀಮ್ ಇಂಡಿಯಾಗೆ ಗುಡ್​ನ್ಯೂಸ್, ನಾಯಕ ರೋಹಿತ್ ಶರ್ಮಾ ಈ ದಿನದಂದು ಭಾರತ ತಂಡಕ್ಕೆ ಸೇರ್ಪಡೆ

  • ನಾಯಕ ರೋಹಿತ್ ಶರ್ಮಾ ನವೆಂಬರ್ 23 ರಂದು ಆಸ್ಟ್ರೇಲಿಯಾಕ್ಕೆ ಹಾರಲು ಸಜ್ಜಾಗಿದ್ದು ನವೆಂಬರ್ 24 ರಂದು ಆಪ್ಟಸ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್‌ನ 3ನೇ ದಿನವಾದ ಪರ್ತ್‌ನಲ್ಲಿ ತಂಡವನ್ನು ಸೇರುವ ನಿರೀಕ್ಷೆಯಿದೆ. ಹಿಟ್​ಮ್ಯಾನ್ ಎರಡನೇ ಬಾರಿಗೆ ತಂದೆಯಾದ ಕಾರಣ ಮೊದಲ ಟೆಸ್ಟ್ ಕಳೆದುಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾಗೆ ಸಿಹಿ ಸುದ್ದಿ. ರೋಹಿತ್ ಶರ್ಮಾ ಭಾರತ ತಂಡವನ್ನು ಸೇರಿಕೊಳ್ಳುವ ದಿನಾಂಕ ಬಹಿರಂಗಗೊಂಡಿದೆ. ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ್ತ್​​ನಲ್ಲಿ ಆಡಲಿದೆ. ಆದರೆ ಈ ಟೆಸ್ಟ್ ಅನ್ನು ರೋಹಿತ್ ಮಿಸ್ ಮಾಡಿಕೊಳ್ಳಲಿದ್ದು, ಈ ಟೆಸ್ಟ್ ನಡುವೆಯೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
icon

(1 / 9)

ಟೀಂ ಇಂಡಿಯಾಗೆ ಸಿಹಿ ಸುದ್ದಿ. ರೋಹಿತ್ ಶರ್ಮಾ ಭಾರತ ತಂಡವನ್ನು ಸೇರಿಕೊಳ್ಳುವ ದಿನಾಂಕ ಬಹಿರಂಗಗೊಂಡಿದೆ. ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ್ತ್​​ನಲ್ಲಿ ಆಡಲಿದೆ. ಆದರೆ ಈ ಟೆಸ್ಟ್ ಅನ್ನು ರೋಹಿತ್ ಮಿಸ್ ಮಾಡಿಕೊಳ್ಳಲಿದ್ದು, ಈ ಟೆಸ್ಟ್ ನಡುವೆಯೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.(Hindustan Times)

ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ರೋಹಿತ್​ ಅನುಪಸ್ಥಿತಿಯು ಭಾರತೀಯ ತಂಡದ ಮೇಲೆ ಒತ್ತಡ ಹೆಚ್ಚಿಸಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್ ವಾಶ್ ಆಗಿತ್ತು.
icon

(2 / 9)

ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ರೋಹಿತ್​ ಅನುಪಸ್ಥಿತಿಯು ಭಾರತೀಯ ತಂಡದ ಮೇಲೆ ಒತ್ತಡ ಹೆಚ್ಚಿಸಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ವೈಟ್ ವಾಶ್ ಆಗಿತ್ತು.(HT_PRINT)

ಪರ್ತ್ ಟೆಸ್ಟ್​​ನ 3ನೇ ದಿನದಂದು ರೋಹಿತ್ ಭಾರತ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ. ನೇರವಾಗಿ ಡ್ರೆಸ್ಸಿಂಗ್ ಸೇರಲಿರುವ ಹಿಟ್​ಮ್ಯಾನ್, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಕಾರ್ಯತಂತ್ರ ರೂಪಿಸಲಿದ್ದಾರೆ. ಅಗತ್ಯವಿದ್ದಾಗ ಜಸ್ಪ್ರೀತ್ ಬುಮ್ರಾಗೆ ಸಲಹೆ ನೀಡುವ ಕೆಲಸ ಮಾಡಲಿದ್ದಾರೆ.
icon

(3 / 9)

ಪರ್ತ್ ಟೆಸ್ಟ್​​ನ 3ನೇ ದಿನದಂದು ರೋಹಿತ್ ಭಾರತ ತಂಡ ಸೇರಲಿದ್ದಾರೆ ಎಂದು ವರದಿಯಾಗಿದೆ. ನೇರವಾಗಿ ಡ್ರೆಸ್ಸಿಂಗ್ ಸೇರಲಿರುವ ಹಿಟ್​ಮ್ಯಾನ್, ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಕಾರ್ಯತಂತ್ರ ರೂಪಿಸಲಿದ್ದಾರೆ. ಅಗತ್ಯವಿದ್ದಾಗ ಜಸ್ಪ್ರೀತ್ ಬುಮ್ರಾಗೆ ಸಲಹೆ ನೀಡುವ ಕೆಲಸ ಮಾಡಲಿದ್ದಾರೆ.(HT_PRINT)

ರೋಹಿತ್​ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ನವೆಂಬರ್ 15ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಪತ್ನಿ ತಾಯಿ ಆಗುತ್ತಿರುವ ವಿಷಯ ಮೊದಲೇ ತಿಳಿದಿದ್ದ ಹಿಟ್​ಮ್ಯಾನ್, ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳಲು ಬಯಸಿದ್ದರು.
icon

(4 / 9)

ರೋಹಿತ್​ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಅವರು ನವೆಂಬರ್ 15ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಪತ್ನಿ ತಾಯಿ ಆಗುತ್ತಿರುವ ವಿಷಯ ಮೊದಲೇ ತಿಳಿದಿದ್ದ ಹಿಟ್​ಮ್ಯಾನ್, ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಳ್ಳಲು ಬಯಸಿದ್ದರು.(REUTERS)

ರೋಹಿತ್ ನವೆಂಬರ್ 23 ರಂದು ಮುಂಬೈನಿಂದ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. 24ರಂದು ಆಸ್ಟ್ರೇಲಿಯಾ ತಲುಪಲಿದೆ. ಅಡಿಲೇಡ್ ಟೆಸ್ಟ್​ನೊಂದಿಗೆ ತಯಾರಿ ಆರಂಭಿಸುವುದು ಹೇಗೆ ಎಂದು ರೋಹಿತ್ ಕೋಚ್ ಮತ್ತು ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಲಿದ್ದಾರೆ. ಕ್ಯಾನ್ಬೆರಾದಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲೂ ರೋಹಿತ್ ಶರ್ಮಾ ಆಡಬಹುದು.
icon

(5 / 9)

ರೋಹಿತ್ ನವೆಂಬರ್ 23 ರಂದು ಮುಂಬೈನಿಂದ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. 24ರಂದು ಆಸ್ಟ್ರೇಲಿಯಾ ತಲುಪಲಿದೆ. ಅಡಿಲೇಡ್ ಟೆಸ್ಟ್​ನೊಂದಿಗೆ ತಯಾರಿ ಆರಂಭಿಸುವುದು ಹೇಗೆ ಎಂದು ರೋಹಿತ್ ಕೋಚ್ ಮತ್ತು ಮ್ಯಾನೇಜ್ಮೆಂಟ್ನೊಂದಿಗೆ ಚರ್ಚಿಸಲಿದ್ದಾರೆ. ಕ್ಯಾನ್ಬೆರಾದಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲೂ ರೋಹಿತ್ ಶರ್ಮಾ ಆಡಬಹುದು.(HT_PRINT)

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಬೇಕಿದೆ.
icon

(6 / 9)

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್ ಸರಣಿ ಗೆಲ್ಲುವುದು ಅನಿವಾರ್ಯ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಅಂತರದಲ್ಲಿ ಗೆಲ್ಲಬೇಕಿದೆ.(HT_PRINT)

ಅಲ್ಲದೆ, ಕಳೆದ ನಾಲ್ಕು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ತಂಡ ತನ್ನಲ್ಲೇ ಉಳಿಸಿಕೊಂಡಿದೆ. ಹಾಗೆಯೇ ಆಸೀಸ್ ನೆಲದಲ್ಲಿ ಸತತ ಎರಡು ಬಾರಿ ಗೆದ್ದಿರುವ ಭಾರತ, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ.
icon

(7 / 9)

ಅಲ್ಲದೆ, ಕಳೆದ ನಾಲ್ಕು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಭಾರತ ತಂಡ ತನ್ನಲ್ಲೇ ಉಳಿಸಿಕೊಂಡಿದೆ. ಹಾಗೆಯೇ ಆಸೀಸ್ ನೆಲದಲ್ಲಿ ಸತತ ಎರಡು ಬಾರಿ ಗೆದ್ದಿರುವ ಭಾರತ, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ.(HT_PRINT)

ಜಸ್ಪ್ರೀತ್ ಬುಮ್ರಾ ಎರಡನೇ ಬಾರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ಎದುರು ಒಂದು ಪಂದ್ಯಕ್ಕೆ ಕ್ಯಾಪ್ಟನ್ ಆಗಿದ್ದರು.
icon

(8 / 9)

ಜಸ್ಪ್ರೀತ್ ಬುಮ್ರಾ ಎರಡನೇ ಬಾರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ಎದುರು ಒಂದು ಪಂದ್ಯಕ್ಕೆ ಕ್ಯಾಪ್ಟನ್ ಆಗಿದ್ದರು.

ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ 7.50 ಪಂದ್ಯ ಆರಂಭವಾಗಲಿದೆ.
icon

(9 / 9)

ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಪ್ರಾರಂಭವಾಗಲಿದೆ. ಬೆಳಿಗ್ಗೆ 7.50 ಪಂದ್ಯ ಆರಂಭವಾಗಲಿದೆ.(ICC X)


ಇತರ ಗ್ಯಾಲರಿಗಳು