Bengaluru Rain Today: ಬೆಂಗಳೂರಲ್ಲಿ ಭಾರಿ ಮಳೆ, ಸಂಚಾರ ಅಸ್ತವ್ಯಸ್ತ; ಮಳೆಯಲ್ಲೂ ಸಸಿಗಳಿಗೆ ನೀರುಣಿಸುತ್ತಿರುವ BBMP ಗುತ್ತಿಗೆ ಟ್ಯಾಂಕರ್
Bengaluru Rain Today: ಮುಂಗಾರು ಮತ್ತೆ ಚುರುಕುಗೊಂಡಿದೆ. ಕರಾವಳಿ, ಒಳನಾಡು ಸೇರಿ ಹಲವು ಜಿಲ್ಲೆಗಳಲ್ಲಿ ಮಂಗಳವಾರ (ಜೂ.20) ಭಾರಿ ಮಳೆಯಾಗತೊಡಗಿದೆ. ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಂದ ಮಳೆಯ ವಾತಾವರಣ ಇದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಲ್ಲಿ ಬೆಂಗಳೂರು ಜನಜೀವನ ಹೀಗಿದೆ ನೋಡಿ..
(1 / 6)
ಮಳೆಗಾಲದಲ್ಲಿ ಬೆಂಗಳೂರಿನ ಚಿತ್ರಣ ಹೇಗಿರುತ್ತದೆ ಎಂಬ ಕುತೂಹಲವೇ? ಟ್ವಿಟರ್‌ನಲ್ಲಿ ಬೆಂಗಳೂರಿನಲ್ಲಿ ಮಳೆ ಇಂದು ಎಂದು ಹುಡುಕಾಡಿದಾಗ ರೋಹನ್ ಕಾಮತ್ (@Rohan_Disco) ಶೇರ್ ಮಾಡಿದ ಫೋಟೋ ಗಮನಸೆಳೆಯಿತು. ಮಳೆಗಾಲದಲ್ಲೂ ಸಸಿಗಳಿಗೆ ನೀರುಣಿಸುತ್ತಿರುವ ಬಿಬಿಎಂಪಿ ಗುತ್ತಿಗೆ ಟ್ಯಾಂಕರ್‌ನ ಫೋಟೋವನ್ನು ಅವರು ಶೇರ್ ಮಾಡಿದ್ದರು. ಈ ವಿಚಾರವಾಗಿ ಅವರು ಬಿಬಿಎಂಪಿ ಕಮಿಷನರ್ ಗಮನಸೆಳೆದಿದ್ದಾರೆ.(@Rohan_Disco)
(2 / 6)
ಮಳೆಯಿಂದಾಗಿ ಇಂದು ಬೆಳಗ್ಗೆ ರಾಜಧಾನಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕಚೇರಿಗಳಿಗೆ ತೆರಳಲು, ನಿತ್ಯ ಕೆಲಸ ಕಾರ್ಯಗಳಿಗೆ ಹೋಗಲು ಜನ ತೊಂದರೆ ಅನುಭವಿಸಿದರು. ವಿಧಾನಸೌಧ ಸಮೀಪದ ದೃಶ್ಯ ಇದು.
(3 / 6)
ಬೆಂಗಳೂರು ಮಳೆಗೆ ಸಿಲುಕಿ ಹೋಗಲಾಗದೆ ವಿಧಾನಸೌಧದ ಎದುರಿನ ಮೆಟ್ರೋ ಸ್ಟೇಶನ್ ಪ್ರವೇಶದ್ವಾರದ ಬಳಿ ನಿಂತುಕೊಂಡಿರುವ ಜನಸಮೂಹ.
(4 / 6)
ಬೆಂಗಳೂರಿನ ತಗ್ಗು ಪ್ರದೇಶದ ವಿವಿಧ ಬಡಾವಣೆಗಳಲ್ಲಿ ನೀರು ನಿಂತು ಸಮಸ್ಯೆಗಳಾಗಿವೆ. ಇದಲ್ಲದೆ, ಕಾಂಪೌಂಡ್ ಜರಿದು ನೀರು ಮನೆಗಳ, ಅಪಾರ್ಟ್‌ಮೆಂಟ್‌ಗಳ ಆವರಣದೊಳಗೆ ನುಗ್ಗಿದ ವಿಡಿಯೋಗಳು ಕೂಡ ಸಾಮಾಜಿಕ ತಾಣಗಳಲ್ಲಿ ಶೇರ್ ಆಗಿವೆ.(Twitter)
(5 / 6)
ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ನಿನ್ನೆ ರಾತ್ರಿ ಪರದಾಡಿದರು. ಇದು ವಿಡಿಯೋ ಗ್ರ್ಯಾಬ್ ಆಗಿದ್ದು ಕುಶಾಗ್ರ ಎಂಬುವವರು ಶೇರ್ ಮಾಡಿದ್ದಾರೆ.(Pic @kushagraSRT)
ಇತರ ಗ್ಯಾಲರಿಗಳು