ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಹೊಸ ವಿಶ್ವದಾಖಲೆ; 10 ಕೋಟಿ ಫಾಲೋವರ್ಸ್ ಸಂಪಾದಿಸಿದ ಜಗತ್ತಿನ ಮೊದಲ ನಾಯಕ
- Prime Minister Narendra Modi : ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆಯ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ದಾಟಿದ್ದು, ಈ ಸಾಧನೆಗೈದ ಮೊದಲ ನಾಯಕ ಎಂಬ ದಾಖಲೆ ಬರೆದಿದ್ದಾರೆ.
- Prime Minister Narendra Modi : ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆಯ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ದಾಟಿದ್ದು, ಈ ಸಾಧನೆಗೈದ ಮೊದಲ ನಾಯಕ ಎಂಬ ದಾಖಲೆ ಬರೆದಿದ್ದಾರೆ.
(1 / 6)
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ನಮೋ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ (ಹಿಂದೆ ಟ್ವಿಟರ್) ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೊದಲ ನಾಯಕ ಎಂದ ನಾಯಕ ಎನಿಸಿದ್ದಾರೆ. ಟ್ವಿಟರ್ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಈಗ 100 ಮಿಲಿಯನ್ ಅಂದರೆ 10 ಕೋಟಿ ತಲುಪಿದೆ.
(2 / 6)
ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಈಗ ವಿಶ್ವದಲ್ಲೇ ಅಧಿಕ ಅನುಯಾಯಿಗಳನ್ನು ಹೊಂದಿರುವ ಹಾಗೂ 100 ಮಿಲಿಯನ್ ದಾಟಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋದಿ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎರಡನೇ ಸ್ಥಾನ ಪಡೆದಿದ್ದು, 38.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ದುಬೈನ ಶೇಖ್ ಮೊಹಮ್ಮದ್ 11.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಪೋಪ್ ಫ್ರಾನ್ಸಿಸ್ 18.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
(3 / 6)
ಅಷ್ಟೇ ಅಲ್ಲ, ಮನರಂಜನಾ ಜಗತ್ತಿನ ಬಹುತೇಕ ಸೆಲೆಬ್ರಿಟಿಗಳಿಗಿಂತಲೂ ಮೋದಿ ಮುಂದಿದ್ದಾರೆ. ಟೇಲರ್ ಸ್ವಿಫ್ಟ್ 95.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಲೇಡಿ ಗಾಗಾ ಅವರಿಗೆ 83 ಮಿಲಿಯನ್ ಫಾಲೋವರ್ಸ್ ಇದ್ದಾರೆ, ಕಿಮ್ ಕರ್ದಶಿಯಾನ್ 75.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರೆಲ್ಲರಿಗಿಂತಲೂ ಮೋದಿ ಮುಂದಿದ್ದಾರೆ.
(4 / 6)
ಎಕ್ಸ್ ಹೊರತುಪಡಿಸಿ, ಪಿಎಂ ಮೋದಿ ಇತರ ಸಾಮಾಜಿಕ ಮಾಧ್ಯಮ ವೇದಿಕಗಳಲ್ಲೂ ಕೋಟ್ಯಂತರ ಅಭಿಮಾನಿಗಳನ್ನು ಫಾಲೋ ಮಾಡುತ್ತಿದ್ದಾರೆ. ಅವರು 2009ರಲ್ಲಿ ಎಕ್ಸ್ನಲ್ಲಿ ಖಾತೆ ತೆರೆದಿದ್ದರು.
(5 / 6)
ಎಕ್ಸ್ನಲ್ಲಿ ಫಾಲೋವರ್ಸ್ ವಿಷಯದಲ್ಲಿ ಮೋದಿ ಮಾತ್ರವಲ್ಲ, ಭಾರತದ ವಿರಾಟ್ ಕೊಹ್ಲಿ ಕೂಡ ತಮ್ಮ ಕ್ಷೇತ್ರದಲ್ಲಿ ವಿಶ್ವದ ಅತ್ಯುತ್ತಮ ಆಟಗಾರನಾಗಿದ್ದಾರೆ. ಎಕ್ಸ್ನಲ್ಲಿ ವಿರಾಟ್ ಫಾಲೋವರ್ಸ್ ಸಂಖ್ಯೆ 64.1 ಮಿಲಿಯನ್ ಆಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ 112 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ವಿಶ್ವದಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕ್ರೀಡಾಪಟು ಎನಿಸಿದ್ದಾರೆ. ಬ್ರೆಜಿಲ್ ಸ್ಟಾರ್ ನೇಮರ್ 63.6 ಮಿಲಿಯನ್, ಬಾಸ್ಕೆಟ್ಬಾಲ್ ಲೆಜೆಂಡ್ ಲೆಬ್ರಾನ್ ಜೇಮ್ಸ್ 52.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
(6 / 6)
ವಿಶ್ವದಲ್ಲೇ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಟಾಪ್-10 ವ್ಯಕ್ತಿಗಳ ಪಟ್ಟಿ ಇಲ್ಲಿದೆ. ಎಲೆನ್ ಮಸ್ಕ್ 188 ಮಿಲಿಯನ್, ಬರಾಕ್ ಒಬಾಮಾ 131 ಮಿಲಿಯನ್, ಕ್ರಿಸ್ಟಿಯಾನೊ ರೊನಾಲ್ಡೊ 112 ಮಿಲಿಯನ್, ಜಸ್ಟಿನ್ ಬೀಬರ್ 110 ಮಿಲಿಯನ್, ರಿಹಾನಾ 108 ಮಿಲಿಯನ್, ಕೇಟ್ ಪೆರ್ರಿ 106 ಮಿಲಿಯನ್, ನರೇಂದ್ರ ಮೋದಿ 100 ಮಿಲಿಯನ್, ಟೇಲರ್ ಸ್ವಿಫ್ಟ್ 95 ಮಿಲಿಯನ್, ಡೋನಾಲ್ಡ್ ಟ್ರಂಪ್ 87 ಮಿಲಿಯನ್, ಲೇಡಿ ಗಾಗಾ 83 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇತರ ಗ್ಯಾಲರಿಗಳು