ಗಂಡು ಮಗುವಿಗೆ ತಂದೆಯಾದ ರೋಹಿತ್​ ಶರ್ಮಾ; ಜ್ಯೂನಿಯರ್​ ಹಿಟ್​ಮ್ಯಾನ್ ಆಗಮನದ ಬಳಿಕ ಪರ್ತ್​ ಟೆಸ್ಟ್​ಗೆ ನಾಯಕ ಲಭ್ಯ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಂಡು ಮಗುವಿಗೆ ತಂದೆಯಾದ ರೋಹಿತ್​ ಶರ್ಮಾ; ಜ್ಯೂನಿಯರ್​ ಹಿಟ್​ಮ್ಯಾನ್ ಆಗಮನದ ಬಳಿಕ ಪರ್ತ್​ ಟೆಸ್ಟ್​ಗೆ ನಾಯಕ ಲಭ್ಯ?

ಗಂಡು ಮಗುವಿಗೆ ತಂದೆಯಾದ ರೋಹಿತ್​ ಶರ್ಮಾ; ಜ್ಯೂನಿಯರ್​ ಹಿಟ್​ಮ್ಯಾನ್ ಆಗಮನದ ಬಳಿಕ ಪರ್ತ್​ ಟೆಸ್ಟ್​ಗೆ ನಾಯಕ ಲಭ್ಯ?

  • Rohit Sharma: ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇಹ್ ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಅವರು ನವೆಂಬರ್​ 22ರಂದು ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ನಿರೀಕ್ಷೆಗಳು ದಟ್ಟವಾಗಿವೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮತ್ತೊಮ್ಮೆ ತಂದೆಯಾಗಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇಹ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಬಾರಿಗೆ ಹೆಣ್ಣು ಮಗುವಿಗೆ ಪೋಷಕರಾಗಿದ್ದ ಈ ದಂಪತಿ ಇದೀಗ ಗಂಡು ಮಗುವಿಗೆ ತಂದೆ-ತಾಯಿ ಆಗಿದ್ದಾರೆ.
icon

(1 / 7)

ಇದೀಗ 6 ವರ್ಷಗಳ ಬಳಿಕ ಮಗಳು ಸಮೈರಾಗೆ ತಮ್ಮ ಜನಿಸಿದ್ದಾನೆ. ಎರಡನೇ ಮಗುವಾಗಿದ್ದರೂ ತಮ್ಮ ಅಭಿಮಾನಿಗಳ ಜೊತೆಗೆ ಇನ್ನೂ ಅಧಿಕೃತವಾಗಿ ಹಂಚಿಕೊಂಡಿಲ್ಲ. 2015ರ ಡಿಸೆಂಬರ್ 13ರಂದು ತಮ್ಮ ಮ್ಯಾನೇಜರ್​ ಆಗಿದ್ದ ರಿತಿಕಾ ಅವರನ್ನು ರೋಹಿತ್ ಮದುವೆಯಾಗಿದ್ದರು. 2008ರಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದರು.
icon

(2 / 7)

ಎರಡನೇ ಬಾರಿಗೆ ತಂದೆಯಾದ ರೋಹಿತ್​ ಶರ್ಮಾ ಅವರು ತಮ್ಮ ಪತ್ನಿ ಪ್ರವಸನದ ವೇಳೆ ಆಕೆಯ ಜೊತೆಗಿರಲು ನಿರ್ಧರಿಸಿದ್ದರು. ಹೀಗಾಗಿ, ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇವರ ಅಲಭ್ಯತೆಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ನಾಯಕನಾಗಿ ತಂಡದ ಜವಾಬ್ದಾರಿ ಹೊರಲಿದ್ದಾರೆ ಎಂದು ವರದಿಯಾಗಿದೆ.
icon

(3 / 7)

ಎರಡನೇ ಬಾರಿಗೆ ತಂದೆಯಾದ ರೋಹಿತ್​ ಶರ್ಮಾ ಅವರು ತಮ್ಮ ಪತ್ನಿ ಪ್ರವಸನದ ವೇಳೆ ಆಕೆಯ ಜೊತೆಗಿರಲು ನಿರ್ಧರಿಸಿದ್ದರು. ಹೀಗಾಗಿ, ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇವರ ಅಲಭ್ಯತೆಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ನಾಯಕನಾಗಿ ತಂಡದ ಜವಾಬ್ದಾರಿ ಹೊರಲಿದ್ದಾರೆ ಎಂದು ವರದಿಯಾಗಿದೆ.(ANI)

ನವೆಂಬರ್​ 22ರಿಂದ ಪರ್ತ್​​ನಲ್ಲಿ ಆರಂಭವಾಗಲಿದೆ. ಆದರೆ ರೋಹಿತ್​ ಮೊದಲ ಟೆಸ್ಟ್​ ಆಡುವ ಸಂಭವ ಹೆಚ್ಚಿದೆ ಎಂದು ವರದಿಯಾಗಿದೆ. ಏಕೆಂದರೆ ಮೊದಲ ಟೆಸ್ಟ್​ಗೆ ಇನ್ನೂ 7 ದಿನಗಳು ಬಾಕಿ ಉಳಿದಿದ್ದು, ಅವರು ಬಯಸಿದರೆ ಮೊದಲ ಟೆಸ್ಟ್​​​ನಲ್ಲಿ ನಾಯಕನಾಗಿ ಕಣಕ್ಕಿಳಿಯಬಹುದು. ಇದರೊಂದಿಗೆ ಭಾರತ ತಂಡದ ಆರಂಭಿಕ ಸಮಸ್ಯೆ ಬಗೆಹರಿಯಬಹುದು.
icon

(4 / 7)

ಮಗು ಜನಿಸಿರುವುದರಿಂದ ಈಗಲೇ ರೋಹಿತ್ ಶರ್ಮಾ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದರೂ, ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡು ಮೊದಲ ಟೆಸ್ಟ್ ಆಡುವುದು ಸವಾಲಿನ ಸಂಗತಿಯಾಗಿರುತ್ತದೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
icon

(5 / 7)

ಇದೇ ವರ್ಷದ ಫೆಬ್ರವರಿಯಲ್ಲಿ ವಿರಾಟ್ ಕೊಹ್ಲಿ ಗಂಡು ಮಗುವಿಗೆ ತಂದೆಯಾಗಿದ್ದರು. ಮಗಳಿಗೆ ವಮಿಕಾ, ಮಗನಿಗೆ ಅಕಾಯ್ ಎಂದು ಹೆಸರು ನಾಮಕರಣ ಮಾಡಿದ್ದರು. ಇದೀಗ ರೋಹಿತ್​ ತಮ್ಮ ಮಗನಿಗೆ ಯಾವ ಹೆಸರು ಇಡಬಹುದು ಎಂಬ ಕುತೂಹಲ ಮೂಡಿದೆ.
icon

(6 / 7)

ಇದೇ ವರ್ಷದ ಫೆಬ್ರವರಿಯಲ್ಲಿ ವಿರಾಟ್ ಕೊಹ್ಲಿ ಗಂಡು ಮಗುವಿಗೆ ತಂದೆಯಾಗಿದ್ದರು. ಮಗಳಿಗೆ ವಮಿಕಾ, ಮಗನಿಗೆ ಅಕಾಯ್ ಎಂದು ಹೆಸರು ನಾಮಕರಣ ಮಾಡಿದ್ದರು. ಇದೀಗ ರೋಹಿತ್​ ತಮ್ಮ ಮಗನಿಗೆ ಯಾವ ಹೆಸರು ಇಡಬಹುದು ಎಂಬ ಕುತೂಹಲ ಮೂಡಿದೆ.(REUTERS)

ಆಸೀಸ್ ಟೆಸ್ಟ್​ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಸರಣಿಯಲ್ಲಿ ವೈಟ್​ವಾಶ್ ಆಗಿರುವ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಪ್ರವೇಶಿಸಲು ಆಸ್ಟ್ರೇಲಿಯಾ ಎದುರು 4-0 ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. 
icon

(7 / 7)

ಆಸೀಸ್ ಟೆಸ್ಟ್​ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಸರಣಿಯಲ್ಲಿ ವೈಟ್​ವಾಶ್ ಆಗಿರುವ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಪ್ರವೇಶಿಸಲು ಆಸ್ಟ್ರೇಲಿಯಾ ಎದುರು 4-0 ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. (Surjeet Yadav)

ಇತರ ಗ್ಯಾಲರಿಗಳು