ಯಶಸ್ಸು ಸಿಕ್ಕ ಬಳಿಕ, ಚಿತ್ರರಂಗಕ್ಕೆ ದಿಢೀರ್‌ ಗುಡ್‌ ಬೈ ಹೇಳಿದ ನಟ ವಿಕ್ರಾಂತ್‌ ಮಾಸ್ಸಿ! ಹೀಗಿದೆ ಕಾರಣ
ಕನ್ನಡ ಸುದ್ದಿ  /  ಮನರಂಜನೆ  /  ಯಶಸ್ಸು ಸಿಕ್ಕ ಬಳಿಕ, ಚಿತ್ರರಂಗಕ್ಕೆ ದಿಢೀರ್‌ ಗುಡ್‌ ಬೈ ಹೇಳಿದ ನಟ ವಿಕ್ರಾಂತ್‌ ಮಾಸ್ಸಿ! ಹೀಗಿದೆ ಕಾರಣ

ಯಶಸ್ಸು ಸಿಕ್ಕ ಬಳಿಕ, ಚಿತ್ರರಂಗಕ್ಕೆ ದಿಢೀರ್‌ ಗುಡ್‌ ಬೈ ಹೇಳಿದ ನಟ ವಿಕ್ರಾಂತ್‌ ಮಾಸ್ಸಿ! ಹೀಗಿದೆ ಕಾರಣ

Vikrant Massey: 'ಟ್ವೆಲ್ವ್ ಫೇಲ್' ಚಿತ್ರದ ಮೂಲಕ ದೇಶಾದ್ಯಂತ ಯುವಕರಲ್ಲಿ ಸಾಕಷ್ಟು ಕ್ರೇಜ್ ಗಳಿಸಿದ ‌ಬಾಲಿವುಡ್‌ ನಟ ವಿಕ್ರಾಂತ್ ಮಾಸ್ಸಿ, ತಮ್ಮ 37ನೇ ವಯಸ್ಸಿನಲ್ಲಿಯೇ ನಟನೆಗೆ ವಿದಾಯ ಹೇಳಿದ್ದಾರೆ. ಈ ಘೋಷಣೆಗೆ ಕಾರಣವನ್ನೂ ತಿಳಿಸಿದ್ದಾರೆ.

ವಿಕ್ರಾಂತ್‌ ಮಾಸ್ಸಿ
ವಿಕ್ರಾಂತ್‌ ಮಾಸ್ಸಿ

Vikrant Massey: ಬಾಲಿವುಡ್‌ನ ನಾಯಕ ನಟ ವಿಕ್ರಾಂತ್ ಮಾಸ್ಸಿ ತಮ್ಮ ದೊಡ್ಡ ನಿರ್ಧಾರವೊಂದನ್ನು ಪ್ರಕಟಿಸಿ, ಸಿನಿಮಾ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. 12th ಫೇಲ್ ಮತ್ತು ಸೆಕ್ಟರ್ 36 ಸಿನಿಮಾ ಮೂಲಕ ಕ್ರೇಜ್ ಗಳಿಸಿದ ವಿಕ್ರಾಂತ್ ಮಾಸ್ಸಿ, ಇತ್ತೀಚೆಗಷ್ಟೇ ದಿ ಸಾಬರಮತಿ ಎಕ್ಸ್‌ಪ್ರೆಸ್ ರಿಪೋರ್ಟ್‌ ಚಿತ್ರದ ಮೂಲಕ ಆಗಮಿಸಿದ್ದರು. ನಟನಾಗಿ ಬಾಲಿವುಡ್‌ನಲ್ಲಿ ಉಜ್ವಲ ಭವಿಷ್ಯ ಹೊಂದಿದ್ದ ಇದೇ ನಟ ತಮ್ಮ 37 ನೇ ವಯಸ್ಸಿನಲ್ಲಿ ನಟನೆಗೆ ವಿದಾಯ ಹೇಳಿದ್ದಾರೆ.

ಆ ಸಮಯ ಈಗ ಬಂದಿದೆ

ವಿಕ್ರಾಂತ್ ಮಾಸ್ಸೆ ಅವರು 2025ರ ನಂತರ ನಟನೆಯಿಂದ ನಿವೃತ್ತಿ ಹೊಂದುವುದಾಗಿ ಇಂದು (ಡಿ. 2) ಬೆಳಗ್ಗೆ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಈ ನಿರ್ಧಾರವನ್ನು ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. "ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ವರ್ಷಗಳಿಂದ ನನಗೆ ಪ್ರೀತಿ ತೋರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ಆದರೆ ನನ್ನ ಕುಟುಂಬಕ್ಕೆ ಸಮಯ ಮೀಸಲಿಡುವ ಸಮಯ ಇದೀಗ ಬಂದಿದೆ. 2025 ರಲ್ಲಿ ಬಿಡುಗಡೆಯಾಗುವ ಚಿತ್ರ ನನ್ನ ಕೊನೆಯ ಚಿತ್ರ ಎಂದು ವಿಕ್ರಾಂತ್ ಮಾಸ್ಸಿ ಘೋಷಿಸಿದರು.

ಅಭಿಮಾನಿಗಳ ಶಾಕಿಂಗ್ ಕಾಮೆಂಟ್

ವಿಕ್ರಾಂತ್ ಮಾಸ್ಸಿ ಅವರ ನಿವೃತ್ತಿಯ ಬಗ್ಗೆ ನೆಟಿಜನ್‌ಗಳು ತುಂಬಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಹೀಗ್ಯಾಕೆ ಮಾಡಿದ್ರಿ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.. "ನಿಮ್ಮಂಥ ನಟರು ಯಾರೂ ಇಲ್ಲ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಾವು ಬಯಸುತ್ತೇವೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟಿಜನ್ "ಏನಾಯ್ತು ಇದ್ದಕ್ಕಿದ್ದಂತೆ? ಎಲ್ಲವೂ ಸರಿಯಾಗಿದೆಯೇ?’ ಎಂದು ಆರೋಗ್ಯದ ಬಗ್ಗೆಯೂ ಮಾತನಾಡಿದರು.

ಪಬ್ಲಿಸಿಟಿ ಸ್ಟಂಟ್‌ ಅಲ್ಲ ತಾನೇ?

ನಟ ವಿಕ್ರಾಂತ್‌ ಹೀಗೆ ಪೋಸ್ಟ್‌ ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ಸಾಕಷ್ಟು ಮಂದಿ ಬೇಸರದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿಮ್ಮ ನಿರ್ಧಾರವನ್ನು ಪುನಃ ಪರಿಶೀಲಿಸಿ ಎಂದರೆ, ಇನ್ನು ಕೆಲವರು, "ನಿಮ್ಮ ಕೆರಿಯರ್‌ ಇದೀಗ ಉತ್ತುಂಗದಲ್ಲಿದೆ. ಇಂಥ ನಿರ್ಧಾರ ಏಕೆ?" ಎಂದಿದ್ದಾರೆ. ಈ ನಡುವೆ, "ಈ ನಿಮ್ಮ ಪೋಸ್ಟ್‌ ಮತ್ತು ಘೋಷಣೆ ಪಬ್ಲಿಸಿಟಿ ಸ್ಟಂಟ್‌ ಅಲ್ಲತಾನೇ ಎಂದೂ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವರೆಗೂ 25 ಸಿನಿಮಾಗಳು

2013ರಲ್ಲಿ ಲೂಟೇರಾ ಸಿನಿಮಾ ಮೂಲಕ ಬಾಲಿವುಡ್‌ ಅಂಗಳಕ್ಕೆ ಬಂದ ವಿಕ್ರಾಂತ್‌, ಅಲ್ಲಿಂದ ಈ ವರೆಗೂ 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ 25ರ ಪೈಕಿ ಇನ್ನೆರಡು ಸಿನಿಮಾಗಳು 2025ರಲ್ಲಿ ರಿಲೀಸ್‌ ಆಗಲಿವೆ. ಆ ಸಿನಿಮಾಗಳ ಬಳಿಕ ಚಿತ್ರರಂಗದಿಂದ ದೂರವೇ ಉಳಿಯಲಿದ್ದಾರೆ.

Whats_app_banner