Bharat Bommai: ಅಂದು ಹುಬ್ಬಳ್ಳಿಯಲ್ಲಿ ಶೆಟ್ಟರ್‌ ವಿರುದ್ದ ಬಸವರಾಜ್‌ಗೆ ಸೋಲು, ಈಗ ಮಗ ಭರತ್‌ಗೂ ಮೊದಲ ಚುನಾವಣೆಯಲ್ಲಿ ಸಿಗಲಿಲ್ಲ ಗೆಲುವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bharat Bommai: ಅಂದು ಹುಬ್ಬಳ್ಳಿಯಲ್ಲಿ ಶೆಟ್ಟರ್‌ ವಿರುದ್ದ ಬಸವರಾಜ್‌ಗೆ ಸೋಲು, ಈಗ ಮಗ ಭರತ್‌ಗೂ ಮೊದಲ ಚುನಾವಣೆಯಲ್ಲಿ ಸಿಗಲಿಲ್ಲ ಗೆಲುವು

Bharat Bommai: ಅಂದು ಹುಬ್ಬಳ್ಳಿಯಲ್ಲಿ ಶೆಟ್ಟರ್‌ ವಿರುದ್ದ ಬಸವರಾಜ್‌ಗೆ ಸೋಲು, ಈಗ ಮಗ ಭರತ್‌ಗೂ ಮೊದಲ ಚುನಾವಣೆಯಲ್ಲಿ ಸಿಗಲಿಲ್ಲ ಗೆಲುವು

ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು  ಭರತ್‌ ಬಸವರಾಜ ಬೊಮ್ಮಾಯಿ ಸೋತಿದ್ದಾರೆ. ಇಬ್ಬರು ಸಿಎಂ ಕುಟುಂಬದ ಕುಡಿ. ತಾತ ಎಸ್‌ಆರ್‌ ಬೊಮ್ಮಾಯಿ, ತಂದೆ ಬಸವರಾಜ ಬೊಮ್ಮಾಯಿ ಶಾಸಕ, ಸಿಎಂ ಆದವರು.  ಅಪ್ಪನೂ ಮೂರು ದಶಕದ ಹಿಂದೆ ಮೊದಲ ಚುನಾವಣೆಯಲ್ಲಿ ಸೋತಿದ್ದರು. ಮಗನಿಗೂ ಸೋಲಾಗಿದೆ.

ಕರ್ನಾಟಕದಲ್ಲಿ ಸಿಎಂ ಆಗಿ, ಕೇಂದ್ರದಲ್ಲಿ ಸಚಿವರೂ ಆಗಿದ್ದ ಜನತಾಪಕ್ಷ ಹಾಗೂ ಜನತಾದಳದ ಹಿರಿಯ  ರಾಜಕೀಯ ನೇತಾರ ಎಸ್‌.ಆರ್.ಬೊಮ್ಮಾಯಿ ಅವರೊಂದಿಗೆ ಪುಟ್ಟ ಭರತ್‌ ಬೊಮ್ಮಾಯಿ .ಮೊದಲ ಚುನಾವಣೆಯಲ್ಲಿ ಅಪ್ಪನಂತೆ ಸೋತಿದ್ದಾರೆ ಭರತ್‌
icon

(1 / 7)

ಅಪ್ಪ ಬಸವರಾಜ ಬೊಮ್ಮಾಯಿ ಹಾಗೂ ಸಹೋದರಿಯೊಂದಿಗೆ ಕಳೆದ ಬಾರಿ ಮತ ಚಲಾಯಿಸಿದ ಬೊಮ್ಮಾಯಿ ಜನಿಸಿದ್ದು 1989 ರಲ್ಲಿ. ಈಗ ಅವರಿಗೆ 35 ವರ್ಷ. 
icon

(2 / 7)

ಬಿಇ ಪದವೀಧರರಾದ ಭರತ್‌ ಬೊಮ್ಮಾಯಿ ಉದ್ಯಮಿಯಾಗಿ ಹತ್ತು ವರ್ಷದಿಂದಲೂ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಉಡುಪು ಘಟಕವನ್ನು ಹೊಂದಿದ್ದಾರೆ ಭರತ್.
icon

(3 / 7)

ಭರತ್‌ ಬೊಮ್ಮಾಯಿ ಸ್ಥಾಪಿಸಿದ ಸಿದ್ದ ಉಡುಪಿನ ಉದ್ಯಮ ದೊಡ್ಡದಾಗಿ ಬೆಳೆದಿದೆ. ಶಿಗ್ಗಾಂವಿ ಮಾತ್ರವಲ್ಲದೇ ವಿವಿಧೆಡೆ ಘಟಕಗಳೂ ಇವೆ. 
icon

(4 / 7)

ಉದ್ಯಮದೊಂದಿಗೆ ಸಾರ್ವಜನಿಕ ಜೀವನದಲ್ಲೂ ಕಾಣಿಸಿಕೊಂಡು ಹಲವು ವಲಯಗಳಲ್ಲಿ ಭರತ್‌ ತಮ್ಮನ್ನು ತೊಡಗಿಸಿಕೊಂಡು ಬಂದವರು,
icon

(5 / 7)

ಭರತ್‌ ಬೊಮ್ಮಾಯಿ ಕ್ರೀಡಾಪಟುವು ಹೌದು. ಸಮಯ ಸಿಕ್ಕಾಗ ಬೆಂಗಳೂರು, ಶಿಗ್ಗಾಂವಿಯಲ್ಲಿ ಫುಟ್‌ ಬಾಲ್‌ ಕೂಡ ಆಡುತ್ತಾರೆ.
icon

(6 / 7)

ತಂದೆ ಸಿಎಂ ಆದ ಬಳಿಕ ಶಿಗ್ಗಾಂವಿ ಕ್ಷೇತ್ರದ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಭರತ್‌ ಬೊಮ್ಮಾಯಿ ಈ ಬಾರಿ ಉಪ ಚುನಾವಣೆ ಕಣಕ್ಕೆ ಧುಮುಕಿಯೇ ಬಿಟ್ಟರು. ಆದರೆ ಗೆಲುವು ಬೊಮ್ಮಾಯಿಗೆ ಸಾಧ್ಯವಾಗಲಿಲ್ಲ.
icon

(7 / 7)

ಇತರ ಗ್ಯಾಲರಿಗಳು