ಸ್ಮೃತಿ ಮಂಧಾನ ಶತಕಕ್ಕೆ ಮಿಥಾಲಿ ರಾಜ್ ಸೆಂಚುರಿಗಳ ದಾಖಲೆ ಉಡೀಸ್; ಇನ್ಮುಂದೆ ಆರ್​ಸಿಬಿ ನಾಯಕಿಯದ್ದೇ ದರ್ಬಾರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಮೃತಿ ಮಂಧಾನ ಶತಕಕ್ಕೆ ಮಿಥಾಲಿ ರಾಜ್ ಸೆಂಚುರಿಗಳ ದಾಖಲೆ ಉಡೀಸ್; ಇನ್ಮುಂದೆ ಆರ್​ಸಿಬಿ ನಾಯಕಿಯದ್ದೇ ದರ್ಬಾರ್

ಸ್ಮೃತಿ ಮಂಧಾನ ಶತಕಕ್ಕೆ ಮಿಥಾಲಿ ರಾಜ್ ಸೆಂಚುರಿಗಳ ದಾಖಲೆ ಉಡೀಸ್; ಇನ್ಮುಂದೆ ಆರ್​ಸಿಬಿ ನಾಯಕಿಯದ್ದೇ ದರ್ಬಾರ್

  • Smriti Mandhana: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಶತಕ ಬಾರಿಸಿದ್ದು, ಭಾರತದ ಮಹಿಳಾ ತಂಡದ ಪರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಅಂತಿಮ ಹಾಗೂ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡವು ಏಕದಿನ ಸರಣಿಯನ್ನು 2-1ರಲ್ಲಿ ವಶಪಡಿಸಿಕೊಂಡಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಭರ್ಜರಿ ಶತಕ ಸಿಡಿಸಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 122 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 100 ರನ್ ಗಳಿಸಿದರು. ಇದರೊಂದಿಗೆ ಅಮೋಘ ದಾಖಲೆ ಬರೆದರು.
icon

(1 / 5)

ನ್ಯೂಜಿಲೆಂಡ್ ನೀಡಿದ 233 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಆರಂಭದಲ್ಲೇ ಶಫಾಲಿ ವರ್ಮಾ (12) ವಿಕೆಟ್ ಕಳೆದುಕೊಂಡಿತು. ಆದರೆ ಜವಾಬ್ದಾರಿಯುತ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ ಜೊತೆಗೂಡಿ 76 ರನ್ ಜೊತೆಯಾಟ, ನಾಯಕಿ ಹರ್ಮನ್​ಪ್ರೀತ್ ಕೌರ್​ ಜೊತೆಗೂಡಿ 117 ರನ್​ಗಳ ಪಾಲುದಾರಿಕೆ ನೀಡಿದರು. ಅಲ್ಲದೆ, ಶತಕವನ್ನೂ ಸಿಡಿಸಿ ಗಮನ ಸೆಳೆದ ಸ್ಮೃತಿ, ಭಾರತದ ಮಾಜಿ ನಾಯಕಿ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.
icon

(2 / 5)

ನ್ಯೂಜಿಲೆಂಡ್ ನೀಡಿದ 233 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಆರಂಭದಲ್ಲೇ ಶಫಾಲಿ ವರ್ಮಾ (12) ವಿಕೆಟ್ ಕಳೆದುಕೊಂಡಿತು. ಆದರೆ ಜವಾಬ್ದಾರಿಯುತ ಪ್ರದರ್ಶನ ನೀಡಿದ ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ ಜೊತೆಗೂಡಿ 76 ರನ್ ಜೊತೆಯಾಟ, ನಾಯಕಿ ಹರ್ಮನ್​ಪ್ರೀತ್ ಕೌರ್​ ಜೊತೆಗೂಡಿ 117 ರನ್​ಗಳ ಪಾಲುದಾರಿಕೆ ನೀಡಿದರು. ಅಲ್ಲದೆ, ಶತಕವನ್ನೂ ಸಿಡಿಸಿ ಗಮನ ಸೆಳೆದ ಸ್ಮೃತಿ, ಭಾರತದ ಮಾಜಿ ನಾಯಕಿ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.(BCCI)

ನ್ಯೂಜಿಲೆಂಡ್ ವಿರುದ್ಧ ಸಿಡಿಸಿದ ಶತಕವು ಅವರ 8ನೇ ಏಕದಿನ ಶತಕವಾಗಿದೆ. ಇದರೊಂದಿಗೆ ಸ್ಮೃತಿ, ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿ ಬಾರಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ಏಳು ಶತಕ ಸಿಡಿಸಿದ್ದರು. ಮಿಥಾಲಿ 232 ಪಂದ್ಯಗಳ 211 ಇನ್ನಿಂಗ್ಸ್​​ಗಳಲ್ಲಿ 7 ಶತಕ ಸಿಡಿಸಿದ್ದರು. ಆದರೀಗ ಮಂಧಾನ 8 ಶತಕ ಬಾರಿಸಿ ಚರಿತ್ರೆ ಸೃಷ್ಟಿಸಿದ್ದಾರೆ. ಭಾರತದ ಪರ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.
icon

(3 / 5)

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 49.5 ಓವರ್ ಗಳಲ್ಲಿ 232 ರನ್​​ಗಳಿಗೆ ಆಲೌಟ್ ಆಯಿತು. ಬ್ರೂಕ್ ಹ್ಯಾಲಿಡೇ (88) ಗರಿಷ್ಠ ಸ್ಕೋರರ್ ಆಗಿದ್ದಾರೆ. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರೆ, ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರು. ರೇಣುಕಾ ಸಿಂಗ್ ಮತ್ತು ಸೈಮಾ ಠಾಕೂರ್ ತಲಾ ಒಂದು ವಿಕೆಟ್ ಪಡೆದರು. 
icon

(4 / 5)

ಗುರಿ ಬೆನ್ನಟ್ಟಿದ ಭಾರತ 44.2 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು. ಸ್ಮೃತಿ ಮಂದಾನ ಶತಕ ಬಾರಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ ಅಜೇಯ 59 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿತು. 
icon

(5 / 5)

ಇತರ ಗ್ಯಾಲರಿಗಳು