ಮಿಥುನ ಸಂಕ್ರಾಂತಿ ಆಚರಣೆಯ ಮಹತ್ವವೇನು, ಸೂರ್ಯದೇವರ ಕೃಪೆಗೆ ಪಾತ್ರರಾಗಲು ಈ ದಿನ ತಪ್ಪದೇ ಈ ವಸ್ತುಗಳನ್ನು ದಾನ ಮಾಡಿ
ಹಿಂದೂ ಧರ್ಮದಲ್ಲಿ ಪ್ರತಿ ಧಾರ್ಮಿಕ ಆಚರಣೆಗೂ ವಿಶೇಷ ಮಹತ್ವವಿದೆ. ಈ ಆಚರಣೆಗಳಲ್ಲಿ ಮಿಥುನ ಸಂಕ್ರಾಂತಿಯೂ ಒಂದು. ಈ ಬಾರಿ ಜೂನ್ 15ರಂದು ಮಿಥುನ ಸಂಕ್ರಾಂತಿ ಇದೆ. ಆ ದಿನ ಸೂರ್ಯ ದೇವನನ್ನು ಆರಾಧಿಸುವುದು ವಿಶೇಷ. ಮಿಥುನ ಸಂಕ್ರಾಂತಿಯಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ಅಂತಹ ವಸ್ತುಗಳ ಪಟ್ಟಿ ಇಲ್ಲಿದೆ.
(1 / 8)
ಪ್ರತಿ ತಿಂಗಳು ಸೂರ್ಯನು ತನ್ನ ರಾಶಿ ಬದಲಾವಣೆ ಮಾಡುವ ದಿನವನ್ನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಸಂಕ್ರಾಂತಿಯಂದು ಸೂರ್ಯ ದೇವನನ್ನು ಪೂಜಿಸುವುದು ವಿಶೇಷ. ಇದರೊಂದಿಗೆ ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಜೂನ್ 15 ರಂದು ಸೂರ್ಯನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ತೆರಳುತ್ತಾನೆ. ಅಂದು ಮಿಥುನ ಸಂಕ್ರಾಂತಿ ಆಚರಣೆ ಇದೆ. ಈ ದಿನ ಕೆಲವು ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
(2 / 8)
ಸಂಕ್ರಾಂತಿ ತಿಥಿಯಂದು ಸೂರ್ಯ ದೇವನನ್ನು ಆರಾಧಿಸುವುದರಿಂದ ಒಳಿತಾಗುತ್ತದೆ ಎಂದು ನಂಬಲಾಗಿದೆ. ಈ ದಿನ ಸೂರ್ಯನನ್ನು ಆರಾಧಿಸುವುದರಿಂದ ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳಲು ಈ ದಿನ ವಿಶೇಷ ಪೂಜೆ, ದಾನ ಮಾಡಬೇಕು. ಮಿಥುನ ಸಂಕ್ರಾಂತಿಯಂದು ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವ ಮೂಲಕ ಸೂರ್ಯನನ್ನು ಸಂತೋಷಪಡಿಸಬಹುದು. ಅಂತಹ ವಸ್ತುಗಳು ಯಾವುದು ಎಂಬುದರ ವಿವರ ಇಲ್ಲಿದೆ.
(3 / 8)
ಗೋಧಿ ದಾನ: ಸೂರ್ಯನ ಕೃಪೆಗೆ ಪಾತ್ರರಾಗಲು ಮಿಥುನ ಸಂಕ್ರಾಂತಿಯಂದು ಗೋಧಿ ದಾನ ಮಾಡಬೇಕು. ಹೀಗೆ ಮಾಡುವುದರಿಂದ ರಾಶಿಚಕ್ರದಲ್ಲಿ ಸೂರ್ಯನು ಬಲಶಾಲಿಯಾಗುತ್ತಾನೆ. ಸೂರ್ಯನ ಶಕ್ತಿಯಿಂದಾಗಿ, ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ಪಡೆಯಲು ಸಾಧ್ಯ.(HT_PRINT)
(4 / 8)
ಬೇಳೆಕಾಳು ದಾನ: ಮಿಥುನ ಸಂಕ್ರಾಂತಿಯಂದು ಬೇಳೆಕಾಳುಗಳನ್ನು ದಾನ ಮಾಡುವುದರಿಂದ ಸೂರ್ಯ ಭಗವಂತನ ಕೃಪೆಗೆ ಪಾತ್ರರಾಗಬಹುದು. ದ್ವಿದಳ ಧಾನ್ಯಗಳನ್ನು ದಾನ ಮಾಡಿದಾಗ ಸೂರ್ಯ ಪ್ರಸನ್ನನಾಗುತ್ತಾನೆ. ಅಗತ್ಯವಿರುವ ವ್ಯಕ್ತಿಗೆ ಬೇಳೆಕಾಳುಗಳನ್ನು ದಾನ ಮಾಡಿ.
(5 / 8)
ಬೆಲ್ಲದ ದಾನ: ಜ್ಯೋತಿಷಿಗಳು ಮಿಥುನ ಸಂಕ್ರಾಂತಿಯಂದು ಸೂರ್ಯನಿಗೆ ಬೆಲ್ಲದ ನೀರನ್ನು ಅರ್ಪಿಸಲು ಸಲಹೆ ನೀಡುತ್ತಾರೆ. ಬೆಲ್ಲವನ್ನೂ ದಾನ ಮಾಡಬಹುದು. ಬೆಲ್ಲ ಬೆರೆಸಿದ ಸಿಹಿತಿಂಡಿಗಳನ್ನೂ ದಾನ ಮಾಡಬಹುದು.
(6 / 8)
ಕೆಂಪು ಬಟ್ಟೆಯನ್ನು ದಾನ ಮಾಡಿ: ಸೂರ್ಯನನ್ನು ಮೆಚ್ಚಿಸಲು ಮಿಥುನ ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಿ. ನಂತರ ಬಡವರಿಗೆ ಕೆಂಪು ಬಟ್ಟೆಯನ್ನು ದಾನ ಮಾಡಿ. ಇದರಿಂದ ನಿಮ್ಮ ಜೀವನಕ್ಕೆ ಸಾಕಷ್ಟು ಒಳಿತಾಗುತ್ತದೆ.
(7 / 8)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು